“ಬಿದಿರು ಯೋಜನೆಯಿಂದ ನೀರು ಸಮೃದ್ಧ ಶೇಖರಣೆಯಾಗಲಿ’

Team Udayavani, Jul 16, 2019, 5:59 AM IST

ಮಂಜೇಶ್ವರ: ಬರಗಾಲದ ಅಪಾಯ ಎದುರಿಸುತ್ತಿರುವ ನಾಡಿಗೆ ನೀರಿನ ಸಿಂಚನ ನೀಡಬಲ್ಲ ಬಿದಿರನ್ನು ಕಾಸರಗೋಡು ಜಿಲ್ಲೆಯನ್ನು ಬಿದಿರಿನ ರಾಜಧಾನಿಯಾಗಿ ಪರಿವರ್ತಿಸುವ ಜಿಲ್ಲಾಧಿಕಾರಿಯವರ ಯೋಜನೆಯಿಂದ ಮುಂದಿನ ದಿನಗಳಲ್ಲಿ ನೀರು ಸಮೃದ್ಧವಾಗಿ ಶೇಖರಣೆಯಾಗಲೆಂದು ಮಂಜೇಶ್ವರ ಬ್ಲಾ. ಪಂ. ಸದಸ್ಯ ಕೆ.ಆರ್‌. ಜಯಾನಂದ ಹೇಳಿದರು.

ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ಪರಿಸರದಲ್ಲಿ ಬಿದಿರು ಸಸಿಯನ್ನು ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಂಜೇಶ್ವರ ಗ್ರಾ.ಪಂ. ಸದಸ್ಯೆ ಸುಪ್ರಿಯಾ ಶೆಣೈ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ಯಾದವ ಕೆ., ರಾಜನ್‌ ನಾಯರ್‌, ಎಂ., ರಾಧಾ, ವಾಸುದೇವ, ಹಮೀದ್‌ ಮಂಜೇಶ್ವರ, ಯೋಗೀಶ್‌ ಕನಿಲ ಶುಭಾಶಂಸನೆಗೈದರು. ಗಿಳಿವಿಂಡು ಆಡಳಿತಾ ಧಿಕಾರಿ ಡಾ| ಕಮಲಾಕ್ಷ ಸ್ವಾಗತಿಸಿದರು. ಬ್ಲಾಕ್‌ ಪಂಚಾಯತ್‌ ಅಧಿಕಾರಿ ಪ್ರಶಾಂತ್‌ ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ