ಅಕ್ರಮ ಜಾಹೀರಾತು ವಿರುದ್ಧ ದೂರು ನೀಡಲು ವಿವಿಧ ವಿಧಾನ


Team Udayavani, Mar 18, 2019, 12:30 AM IST

s-22.jpg

ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಅನುಮತಿಯಿಲ್ಲದೆ ಸ್ಥಾಪಿಸುವ ಪ್ರಚಾರ ಜಾಹೀರಾತುಗಳ ವಿರುದ್ಧ ದೂರು ನೀಡಲು ಬೇರೆ ಬೇರೆ ವಿಧಾನಗಳಿವೆ. ಅಕ್ರಮ ರೂಪದಲ್ಲಿ ಸ್ಥಾಪಿಸುವ ಜಾಹೀರಾತುಗಳ ವಿರುದ್ಧ ಕಠಿನ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಧಿಕಾರಿ ಡಾ.ಡಿ.ಸಜಿತ್‌ ಬಾಬು ತಿಳಿಸಿದ್ದಾರೆ. ಖಾಸಗಿ ಜಾಗದಲ್ಲಿ ಜಾಹೀರಾತು ಫಲಕ ಸ್ಥಾಪನೆ ನಿಟ್ಟಿನಲ್ಲಿ ರಜಕೀಯ ಪಕ್ಷಗಳು ಜಾಗದ ಮಾಲೀಕರಿಂದ ಲಿಖೀತ ರೂಪದಲ್ಲಿ ಅನುಮತಿ ಪಡೆಯಬೇಕು. ಆವರಣ ಗೋಡೆ, ಖಾಸಗಿ ಜಾಗ, ಕಟ್ಟಡ ಇತ್ಯಾದಿಗಳಲ್ಲಿ ಅನುಮತಿಯಿಲ್ಲದೆ ಚುನಾವಣೆ ಪ್ರಚಾರ ನಡೆಸಿದರೆ ಸಾರ್ವಜನಿಕರು ದೂರು ನೀಡುವಲ್ಲಿ ಅನೇಕ ವಿಧಾನಗಳಿದ್ದು, ತತ್‌ಕ್ಷಣ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಿ ವಿಝಿಲ್‌ 
ಅಕ್ರಮ ರೂಪದಲ್ಲಿ ಸ್ಥಾಪಿಸಲಾಗುವ ಜಾಹೀರಾತು ಸಾಮಗ್ರಿಗಳ ವಿರುದ್ಧ ಸಾರ್ವಜನಿಕರು ಸಿ ವಿಝಿಲ್‌ ಎಂಬ ಮೊಬೈಲ್‌ ಆ್ಯಪ್‌ ಮೂಲಕ ಫೋಟೋ ಯಾ ವೀಡಿಯೋ ನಡೆಸಿ ಅಪ್‌ ಲೋಡ್‌ ನಡೆಸಿದರೆ ಅದನ್ನು ದೂರು ಎಂಬುದಾಗಿ ಪರಿಶೀಲಿಸಲಾಗುವುದು. ಜಿಯೋಗ್ರಾಫಿಕ್‌ ಇನಾರ್ಮೇಷನ್‌ ಸಿಸ್ಟಂ ಬಳಸಿ ನೀತಿಸಂಹಿತೆ ಉಲ್ಲಂಘನೆ ನಡೆದಿರುವ ಜಾಗ ಪತ್ತೆ ಮಾಡಲಾಗು ವುದು. ದೂರು ಅಪ್‌ ಲೋಡ್‌ ನಡೆಸಿದ ತಕ್ಷಣವೇ ಯೂನಿಕ್‌ ಐಡಿ ಒಂದು ಲಭಿಸಲಿದೆ. ನಂತರ ಈ ಮೂಲಕ ಈ ಸಂಬಂಧ ಏನೇನು ಕ್ರಮ ನಡೆಸಲಾಯಿತು ಎಂದು ತಿಳಿಯಲು ದೂರುದಾತನಿಗೆ ಸಾಧ್ಯ. 100 ನಿಮಿಷಗಳ ಅವ ಧಿಯೊಳಗೆ ದೂರಿಗೆ ಪರಿಹಾರ ಲಭಿಸಲಿದೆ. ಒಬ್ಬರಿಗೆ ಒಂದಕ್ಕಿಂತ ಅ ಧಿಕ ನೀತಿಸಂಹಿತೆ ಉಲ್ಲಂಘನೆ ಸಂಬಂಧ ದೂರು ನೀಡಲು ಸಾಧ್ಯವಾಗುವುದು ಎಂಬುದು ಈ ಆ್ಯಪ್‌ನ ವಿಶೇಷತೆಯಾಗಿದೆ. ದೂರುದಾತನ ಹೆಸರು, ಮಾಹಿತಿಗಳನ್ನು ಗುಪ್ತವಾಗಿರಿಸಲಾಗುವುದು.

ಟೋಲ್‌ ಫ್ರೀ ನಂಬ್ರ 1950 
ಅಕ್ರಮ ಜಾಹೀರಾತು ಗಮನಿಸಿದಲ್ಲಿ ಸಾರ್ವಜನಿಕರು “1950′ ಟೋಲ್‌ ಫ್ರೀ ನಂಬ್ರಕ್ಕೆ ಕರೆಮಾಡಿ ದೂರು ಸಲ್ಲಿಸ ಬಹುದು. ಚುನಾವಣೆ ಆಯೋಗದ ದೂರಿನ ಪ್ರಕಾರ ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಆರಂಭಿಸಲಾದ ಕಾಲ್‌ ಸೆಂಟರ್‌ ಮೂಲಕ ದೂರು ಸ್ವೀಕರಿಸಲಾಗುವುದು. ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ವರೆಗೆ ಈ ಕೇಂದ್ರ ಚಟುವಟಿಕೆ ನಡೆಸುತ್ತಿದ್ದು, ಲಭಿಸುವ ದೂರು ನೋಂದಣಿ ನಡೆಸಿ ಸಂಬಂಧಪಟ್ಟವರಿಗೆ ಹಸ್ತಾಂತರಿ ಸಲಾಗುವುದು. ಜತೆಗೆ ಮತದಾತರ ಸಂಶಯಗಳನ್ನು ಪರಿಹರಿಸಲಾಗುವುದು.

ನಿಯಂತ್ರಣ ಕೊಠಡಿ 
ಚುನಾವಣೆ ಸಂಬಂಧ ದೂರುಗಳಿದ್ದಲ್ಲಿ, ಅಕ್ರಮ ಜಾಹೀರಾತು ಸಂಬಂಧ ದೂರುಗಳಿದ್ದಲ್ಲಿ ಸಾರ್ವಜನಿಕರು ಚುನಾವಣೆ ನಿಯಂತ್ರಣ ಕೊಠಡಿಗೆ ದೂರು ನೀಡಬಹುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ನಿಯಂತ್ರಣ ಕೊಠಡಿಯ ದೂರುವಾಣಿ ಸಂಖ್ಯೆ: 04994-255825.

ಟಾಪ್ ನ್ಯೂಸ್

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.