ಮಾರುಕಟ್ಟೆಯಲ್ಲಿ ಮೀನು ತುಟ್ಟಿ

Team Udayavani, Jun 12, 2019, 11:45 AM IST

ಮಂಗಳೂರು: ಈ ಸಾಲಿನ ಮೀನುಗಾರಿಕೆ ಋತು ಮುಕ್ತಾಯಗೊಂಡಿದೆ. ಚಂಡ ಮಾರುತದ ಹಿನ್ನೆಲೆಯಲ್ಲಿ ನಾಡ ದೋಣಿಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಪರಿಣಾಮ ಮಾರು ಕಟ್ಟೆಯಲ್ಲಿ ಮೀನಿನ ಕೊರತೆ ಉಂಟಾಗಿದ್ದು, ದರ ಗಗನಕ್ಕೇರಿದೆ.

ಈಗ ತಮಿಳು ನಾಡಿನ ಕರಾವಳಿಯಲ್ಲಿ ಮೀನು ಗಾರಿಕೆ ಆರಂಭ ಗೊಂಡಿದೆ. ಅಲ್ಲಿಂದ ಕೆಲವು ಜಾತಿಯ ಮೀನುಗಳು ಮಂಗಳೂರಿಗೆ ಬರುತ್ತಿವೆ. ಆದ್ದರಿಂದ ದರ ಏರಿದೆ.

ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇರುವ ಸಿಲ್ವರ್‌ ಫಿಶ್‌ ಸದ್ಯ 100 ರೂ.ಗೆ ಕೇವಲ 30 ಸಿಗುತ್ತಿವೆ. ಸದ್ಯ ತಮಿಳುನಾಡಿನಿಂದ ಬಂಗುಡೆ, ಬೂತಾಯಿ ಸೇರಿದಂತೆ ಕೆಲವೊಂದು ಮೀನುಗಳು ಮಾರುಕಟ್ಟೆಗೆ ಬರು ತ್ತಿದೆ. ಆದರೆ, ದರ ಹೆಚ್ಚಾಗಿದ್ದು ಒಂದು ಕೆ.ಜಿ. ಬಂಗುಡೆಗೆ ಸುಮಾರು 350 ರೂ. ಇದೆ. ಈ ಹಿಂದೆ ಒಂದು ಕೆ.ಜಿ. ಬಂಗುಡೆ ಸುಮಾರು 200 ರಿಂದ 250 ರೂ.ಗೆ ಸಿಗುತ್ತಿತ್ತು. ಸದ್ಯ ಒಂದು ಬೂತಾಯಿಗೆ 15 ರೂ. ಇದೆ. ಅಂಜಲ್‌ ಮೀನಿಗೆ ಬೇಡಿಕೆ ಇದ್ದರೂ, ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆ ಇದೆ.

ತಿಂಗಳ ಬಳಿಕ ದರ ಕಡಿಮೆ ಸಾಧ್ಯತೆ
ಮೀನುಗಾರಿಕೆ ಮುಖಂಡರ ಪ್ರಕಾರ ಈ ತಿಂಗಳಿಡೀ ದರ ಏರಿದ ಸ್ಥಿತಿಯಲ್ಲಿಯೇ ಇರಲಿದೆ. ರಾಜ್ಯ ಕರಾವಳಿಗೆ ಮುಂಗಾರು ಆಗಮಿಸಿದ ಕೆಲವು ದಿನಗಳ ಬಳಿಕ ನಾಡದೋಣಿ ಮೀನು ಗಾರರು ಸಮುದ್ರಕ್ಕೆ ತೆರಳುತ್ತಾರೆ. ಬಳಿಕ ಮೀನಿನ ದರದಲ್ಲಿ ಕೊಂಚ ಕಡಿಮೆಯಾಗ ಬಹುದು.

ಮೀನುಗಾರಿಕೆ ಋತು ಪೂರ್ಣಗೊಂಡಿದ್ದು, ಬೋಟ್‌ಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಚಂಡಮಾರುತ ಹಿನ್ನೆಲೆಯಲ್ಲಿ ನಾಡದೋಣಿಗಳು ಕೂಡ ಹೋಗುತ್ತಿಲ್ಲ. ಇದರಿಂದಾಗಿ ಮೀನಿನ ದರ ಹೆಚ್ಚಾಗಿದೆ.
– ನಿತಿನ್‌ ಕುಮಾರ್‌, ಟ್ರಾಲ್‌ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ