ಬೆಳ್ಳಾರೆ : ಚಲಿಸುತ್ತಿದ್ದ ರಿಕ್ಷಾದಿಂದ ಬಿದ್ದು ಮಗು ಸಾವು

Team Udayavani, Sep 9, 2019, 4:34 PM IST

ಬೆಳ್ಳಾರೆ : ಬೆಳ್ಳಾರೆ ಗ್ರಾಮದ ಮೊಗಪ್ಪೆ ಎಂಬಲ್ಲಿ ಚಲಿಸುತ್ತಿದ್ದ ರಿಕ್ಷಾದಿಂದ ಮಗು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಸೆ.1ರಂದು ನಡೆದಿದೆ.

ಕೊಳ್ತಿಗೆ ಗ್ರಾಮದ ಬಾರಿಕೆ ಮನೆಯ ಶ್ರೀಮತಿ ಪ್ರೇಮಾ ಎಂಬವರು ತನ್ನ 3 ವರ್ಷದ ಮಗಳಾದ ದೇವಿಕಾಳನ್ನು ಕರೆದುಕೊಂಡು ಜ್ವರಕ್ಕೆ ಮದ್ದಿಗಾಗಿ ಬಸ್ಸಿನಲ್ಲಿ ಬೆಳ್ಳಾರೆಗೆ ಬಂದಿದ್ದರು. ಮಗುವಿಗೆ ಮದ್ದು ತೆಗೆದುಕೊಂಡು ಬಾಡಿಗೆ ರಿಕ್ಷಾದಲ್ಲಿ ಮನೆಗೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಮೊಗಪ್ಪೆ ಸಮೀಪ ಮಗು ರಿಕ್ಷಾದಿಂದ ಜಾರಿ ಕೆಳಗೆ ಬಿದ್ದಿತೆನ್ನಲಾಗಿದೆ.

ಕೂಡಲೆ ರಿಕ್ಷಾ ನಿಲ್ಲಿಸಿ ಮಗುವನ್ನು ಅದೇ ರಿಕ್ಷಾದಲ್ಲಿ ಬೆಳ್ಳಾರೆ ಖಾಸಗಿ ಕ್ಲಿನಿಕ್‌ಗೆ ಕರೆತಂದರು. ಆದರೆ ಕ್ಲಿನಿಕ್‌ ಗೆ ತಲುಪುವಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತೆನ್ನಲಾಗಿದೆ. ಬಳಿಕ ಮಗುವಿನ ದೇಹವನ್ನು ಮನೆಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೇರವೇರಿಸಲಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ