“ಚೌಕಿದಾರ್’ಸ್ಟಿಕ್ಕರ್ ತೆರವು
Team Udayavani, Apr 3, 2019, 11:37 AM IST
ಉಡುಪಿ: ಮೋದಿ ಅಭಿಮಾನಿಗಳು ತಮ್ಮ ವಾಹನಗಳಲ್ಲಿ ಅಳವಡಿಸಿದ “ಮೈ ಹೂಂ ಚೌಕಿದಾರ್’ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದ “ಚೌಕೀದಾರ್ ಚೋರ್ ಹೈ’ ಸ್ಟಿಕರ್ಗಳನ್ನು ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳು ಆರಂಭಿಸಿದ್ದಾರೆ.
ಎರಡೂ ಗುಂಪುಗಳಿಂದ ದೂರುಗಳು ಬಂದಿವೆ. ಕ್ರಮ ಕೈಗೊಳ್ಳುವಂತೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಾಹನಗಳಿಗೆ ಯಾವುದೇ ಸ್ಟಿಕ್ಕರ್ ಅಳವಡಿಸಿದರೆ ಕ್ರಮ ಕೈಗೊಳ್ಳಲು ಆರ್ಟಿಒ ಅವರಿಗೂ ಸೂಚನೆ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇವೆರಡು ಘೋಷಣೆ ಇರುವ ವಾಹನಗಳ ಮಾಲಕರಿಗೆ ಸಂಬಂಧಿಸಿದ ವ್ಯವಹಾರಗಳನ್ನು ನಡೆಸದಂತೆ ಪ್ರತಿಸ್ಪರ್ಧಿ ಗುಂಪುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸುತ್ತಿವೆ ಎಂದು ತಿಳಿದುಬಂದಿದೆ.