“ನಾವು ಹೊರಗೆ ಬಂದು ತಪ್ಪು ಮಾಡಿದ್ದೇವೆ; ನೀವು ಮನೆಯೊಳಗೇ ಇರಿ’


Team Udayavani, Mar 22, 2020, 6:30 AM IST

“ನಾವು ಹೊರಗೆ ಬಂದು ತಪ್ಪು ಮಾಡಿದ್ದೇವೆ; ನೀವು ಮನೆಯೊಳಗೇ ಇರಿ’

ಮಣಿಪಾಲ: “ಇಂದು (ಮಾ. 22) ಆದಷ್ಟು ಒಳಗೇ ಇರಿ. ನೀವು ಇರುವುದು ದೇಶಕ್ಕಾಗಿ. ಪರಸ್ಪರ ನಮ್ಮೊಳಗೆ ಧೈರ್ಯವನ್ನು ತುಂಬಿಕೊಳ್ಳಲು ರಾಷ್ಟ್ರಗೀತೆಯನ್ನು ಹಾಡಿ, ಸಕಾರಾತ್ಮಕವಾಗಿ ಯೋಚಿಸಿ. ಸಕಾರಾತ್ಮಕವಾದುದನ್ನು ವೀಕ್ಷಿಸಿ. ನಾವೂ ಅದನ್ನೇ ನಿತ್ಯವೂ ಮಾಡುತ್ತಿದ್ದೇವೆ’.

ಇಟಲಿಯ ಸಿನೆಮಾ ನಿರ್ದೇಶಕ ಇಟಾಲೋ ಸ್ಪಿನೆಲಿ. ಉದಯವಾಣಿ ಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಭಾಷಿಸಿದ ಅವರು ಜನತಾ ಕಪ್ಯೂì ಸಂದರ್ಭದಲ್ಲಿ ಭಾರತೀಯರಿಗೆ ನೀಡಿದ ಎರಡು ಸಲಹೆ ಗಳೆಂದರೆ, ಒಂದು-ಮನೆಯೊಳಗೇ ಆದಷ್ಟು ಇರಿ, ಕಷ್ಟವಾಗುತ್ತದೆ ನಿಜ. ಆದರೂ ಹೊರಗೆ ಬರಬೇಡಿ.

ಎರಡು – ಸಕಾರಾತ್ಮಕವಾಗಿ ಯೋಚಿಸಿ, ಒಳ್ಳೆಯ ದಿನ ಬರುತ್ತದೆ. ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ, ಕತ್ತಲು ಕಳೆದು ಬೆಳಕು ಬರಲೇಬೇಕು, ಬಂದೇ ಬರುತ್ತದೆ.
ಇಟಾಲೋ ಕೆಲವೇ ದಿನಗಳ ಹಿಂದೆ ಭಾರತದಲ್ಲಿದ್ದರು. ಅದೂ ಇಟಲಿಯಲ್ಲಿ ಕೋವಿಡ್‌ 19 ಉಪಟಳ ಹೆಚ್ಚುತ್ತಿದ್ದ ಸಂದರ್ಭವದು. ಭಾರತ ದಲ್ಲಿ ಇನ್ನೂ ಅಷ್ಟೊಂದು ವೇಗ ಪಡೆದಿ ರಲಿಲ್ಲ. ಆಗ ಭಾರತದ ಜನಸಂಖ್ಯೆ, ತುಂಬಿ ತುಳುಕುತ್ತಿದ್ದ ರೈಲು ನಿಲ್ದಾಣಗಳು ಇತ್ಯಾದಿಗಳೆಲ್ಲವನ್ನೂ ಕಂಡವರು, “ಈ ವೈರಸ್‌ನ ಉಪಟಳ ಭಾರತಕ್ಕೇನಾದರೂ ಬಂದರೆ ಬಹಳ ಕಷ್ಟವಪ್ಪ’ ಎಂದುಕೊಂಡಿದ್ದರಂತೆ.

“ನಮ್ಮ ಇಟಲಿಯಂಥ ಪುಟ್ಟ ದೇಶದಲ್ಲೇ ಆಸ್ಪತ್ರೆಗಳು ತುಂಬಿ ಹೋಗಿವೆ. ಯಾವ ಆಸ್ಪತ್ರೆಗಳಲ್ಲೂ ರೋಗಿಗಳಿಗೆ ಹಾಸಿಗೆಗಳಿಲ್ಲ. ಕೋವಿಡ್‌ 19 ಪೀಡಿತರಿಗೆ ಚಿಕಿತ್ಸೆ ಕೊಟ್ಟ ವೈದ್ಯರುಗಳೇ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಇಂಥ ಆತಂಕದ ಸ್ಥಿತಿಯಲ್ಲಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಾತ್ರ ಬದುಕುಳಿಯಬಲ್ಲವು’.

“ಯಾರೂ ಹೊರಗೆ ಬರಬೇಡಿ, ಇದು ಯುದ್ಧ’ ಎಂದು ಹೇಳುವ ಇಟಾಲೋ, ನಗರ ಮಲಗಿ ಬಹು ದಿನಗಳಾಗಿವೆ. ಯುರೋಪಿನ ದೊಡ್ಡ ರೈಲು ನಿಲ್ದಾಣ ಮಿಲಾನೊ ದಲ್ಲಿ ಜನರೇ ಇಲ್ಲ. ಸಂಪೂರ್ಣ ಖಾಲಿ ಖಾಲಿ, ರೈಲುಗಳಿದ್ದರೂ ಪ್ರಯೋಜನವಿಲ್ಲ. ತುರ್ತು ಸ್ಥಿತಿ ಇದ್ದಲ್ಲಿ ಜನರುಅನುಮತಿ ಪಡೆದು ಬರಬೇಕು. ಇಲ್ಲವಾದರೆ ಪೊಲೀಸರು ಬಂಧಿಸುತ್ತಾರೆ’ ಎಂದು ವಿವರಿಸುತ್ತಾರೆ.

“ನಮ್ಮ ತಪ್ಪಿಗೆ ಎರಡು ಕಾರಣಗಳಿವೆ ಎನ್ನುವುದಕ್ಕಿಂತಲೂ ಎರಡು ರೀತಿ ಯಲ್ಲಿ ನಮ್ಮಿಂದ ತಪ್ಪುಗಳಾಗಿವೆ. ಮೊದಲನೆ ಯದು – ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಾಗ ಸ್ವಲ್ಪ ಎಡವಿದೆವು. ಎರಡನೆಯದು- ಹಲವು ಸಲಹೆಗಳನ್ನು ಲಘುವಾಗಿ ತೆಗೆದುಕೊಂಡೆವು. ಹಾಗಾಗಿ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಂಕ್ರಾ ಮಿಕ ವೈರಾಣುಗಳ ಹರಡುವಿಕೆಗೆ ನಾವೂ ಸಹ ಕಾರಣರಾಗಬಾರದೆಂದರೆ ಮನೆಯೊಳಗೆ ಇರುವುದೇ ಕ್ಷೇಮ. ಆ ಮೂಲಕವೇ ನಾವು ವೈರಾಣುವನ್ನು ಸೋಲಿಸಿ ಈ ಯುದ್ಧದಲ್ಲಿ ಗೆಲ್ಲಬಹುದು ಎನ್ನುತ್ತಾರೆ ಅವರು.

ನಾವು ಅದನ್ನೇ ಮಾಡುತ್ತಿದ್ದೇವೆ
ನಾವೂ ನಮ್ಮ ನಮ್ಮ ವಸತಿ ಸಮುಚ್ಚಯಗಳಲ್ಲಿ ಏಕಾಂತದಲ್ಲಿದ್ದೇವೆ. ಮನೆಯಿಂದ ಹೊರಗೆ ಬಾರದೇ ಹಲವು ದಿನಗಳು ಆಗಿವೆ. ಆದರೂ ಹತಾಶರಾಗಿಲ್ಲ. ಒಂದಿಷ್ಟು ಓದು, ಬರಹ ಹೀಗೆ ಕಾಲ ಕಳೆಯುತ್ತಿದ್ದೇವೆ. ಜೀವನ ಪ್ರೀತಿ ಉಳಿಸಿಕೊಳ್ಳಲು ಸ್ಪೀಕರ್‌ಗಳಲ್ಲಿ ದೊಡ್ಡದಾಗಿ ರಾಷ್ಟ್ರಗೀತೆಯನ್ನು ಕೇಳುತ್ತೇವೆ. ಅದು ನಮ್ಮೊಳಗೆ ಸ್ಫೂರ್ತಿ ತುಂಬುತ್ತದೆ. ಇನ್ನೂ ಬದುಕಬೇಕೆಂಬ ಪ್ರೀತಿಯನ್ನು ಉಕ್ಕಿಸುತ್ತದೆ. ನೀವೂ ಹಾಗೆಯೇ ಮಾಡಿ.

ಮನೆಯೊಂದರ ಬಾಗಿಲಿನ ಮೇಲೆ ಬರೆದ “ಎಲ್ಲವೂ ಸರಿಯಾಗುತ್ತದೆ, ಒಳ್ಳೆಯ ದಿನ ಬರುತ್ತದೆ’ (ಇಟಾಲಿಯನ್‌ ಭಾಷೆಯಲ್ಲಿ ಬರೆದ ಸಾಲು) ಎಂಬುದನ್ನು ನೋಡಿಯೇ ಬದುಕುತ್ತೇವೆ. ಇಂಥ ಸಾಲುಗಳು ಹಲವಾರು ಮನೆಗಳ ಬಾಗಿಲುಗಳನ್ನು ಸುಂದರಗೊಳಿಸುತ್ತಾ ಸಕಾರಾತ್ಮಕ ದೃಷ್ಟಿಕೋನವನ್ನು ಬೆಂಬಲಿಸುತ್ತಿದೆ. ಇಡೀ ಜಗತ್ತು ಸ್ತಬ್ಧಗೊಳ್ಳುತ್ತಿದೆ ಎನಿಸುತ್ತಿರುವ ಹೊತ್ತಿನಲ್ಲಿ ಇಂಥ ಕೆಲವು ಸಾಲುಗಳೇ ನಮ್ಮೊಳಗೆ ಬದುಕಿನ ಬಗೆಗಿನ ಪ್ರೀತಿಯನ್ನು ಉಳಿಸಬಲ್ಲವು. ಬದುಕಿನ ಸೌಂದರ್ಯವನ್ನು ತಿಳಿಸಬಲ್ಲವು.
– ಇಟಾಲೋ ಸ್ಪಿನೆಲಿ.
ಸಿನೆಮಾ ನಿರ್ದೇಶಕ, ಇಟಲಿ

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.