Udayavni Special

ಕರಾವಳಿ ಅಪರಾಧ ಸುದ್ದಿಗಳು


Team Udayavani, Jul 22, 2019, 10:19 AM IST

crime

ದೇರಳಕಟ್ಟೆ: ಸಹಾಯಕ ಪ್ರೊಫೆಸರ್‌ ನಿಗೂಢ ಸಾವು
ಉಳ್ಳಾಲ: ದೇರಳಕಟ್ಟೆಯ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕರೊಬ್ಬರು ದೇರಳಕಟ್ಟೆಯ ಕ್ವಾಟ್ರಸ್‌ನಲ್ಲಿ ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಶಿರಸಿ ಮೂಲದ ಲಕ್ಷ್ಮಣ ಮಂಜುನಾಥ ಅವರ ಪುತ್ರ ಡಾ| ವಾಗೇಶ್‌ ಕುಮಾರ್‌(35) ಸಾವನ್ನಪ್ಪಿದವರು. ಓರಲ್‌ ರೇಡಿಯೋಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದ ಅವರು ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದು, ಸಂಜೆ ವೇಳೆ ಕ್ವಾಟ್ರಸ್‌ಗೆ ವಾಪಸಾಗಿದ್ದರು. ಶನಿವಾರ ಕಾಲೇಜಿಗೆ ರಜೆ ಇದ್ದು, ಬೆಳಗ್ಗೆ ಆಸ್ಪತ್ರೆಯ ಸಿಬಂದಿ ಶುಚಿಗೊಳಿಸಲು ಬಂದಾಗಲು ಕ್ವಾಟ್ರಸ್‌ ಬಾಗಿಲು ತೆರೆದಿರಲಿಲ್ಲ. ಡಾ| ವಾಗೇಶ್‌ ಹೊರಗಡೆ ಹೋಗಿರಬೇಕು ಎಂದು ಸಂಶಯಿಸಿ ಅವರು ವಾಪಸಾಗಿದ್ದರು.

ಶನಿವಾರ ಸಂಜೆ ವಾಗೇಶ್‌ ಅವರ ತಂದೆ ಮಂಜುನಾಥ್‌ ಅವರು ಪುತ್ರ ಶುಕ್ರವಾರ ರಾತ್ರಿಯಿಂದ ಮೊಬೈಲ್‌ ಫೋನ್‌ ಕರೆ ಸ್ವೀಕರಿಸದಿರುವುದನ್ನು ಗಮನಿಸಿ ಆ ಬಗ್ಗೆ ಮಾಹಿತಿ ಸಹೋದ್ಯೋಗಿಗೆ ಕರೆ ಮಾಡಿ ತಿಳಿ ಸಿದ್ದರು. ಅದರಂತೆ ಸಹೋದ್ಯೋಗಿ ರವಿವಾರ ಬೆಳಗ್ಗೆ ಕ್ವಾಟ್ರಸ್‌ಗೆ ಬಂದಾಗ ಬಾಗಿಲು ಒಳಗಡೆ ಚಿಲಕ ಹಾಕಲಾಗಿತ್ತು. ತತ್‌ಕ್ಷಣವೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆ ಬಳಿಕ ಸೆಕ್ಯುರಿಟಿ ಸಿಬಂದಿ ಹಾಗೂ ಉಳ್ಳಾಲ ಪೊಲೀಸರು ಬಾಗಿಲು ಒಡೆದು ನೋಡಿದಾಗ ವಾಗೇಶ್‌ ಮೃತದೇಹ ಬಾಯಿಯಲ್ಲಿ ನೊರೆ ಕಾರಿದ ಸ್ಥಿತಿಯಲ್ಲಿ ಮಂಚದ ಮೇಲೆ ಕಂಡು ಬಂತು. ಸಾವಿನ ಕಾರಣ ಮರಣೋತ್ತರ ಪರೀಕ್ಷೆಯ ವರದಿಯಿಂದಷ್ಟೆ ಸ್ಪಷ್ಟವಾಗಬೇಕಿದೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*
ಸರಕಾರಿ ಬಸ್ಸಿನಲ್ಲಿ ದನದ ಮಾಂಸ ಸಾಗಾಟ ಯತ್ನ: ನಿರ್ವಾಹಕ ಸೆರೆ
ಪುತ್ತೂರು: ಕೆ.ಎಸ್‌.ಆರ್‌.ಟಿ.ಸಿ. ಬಸ್ಸಿನಲ್ಲೇ ದನದ ಮಾಂಸ ಸಾಗಾಟದ ಪ್ರಕರಣ ಪುತ್ತೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಹರಿಹರ ಬಾಳುಗೋಡು ಬಸ್ಸಿನಲ್ಲಿ ಮಾಂಸ ಪತ್ತೆಯಾಗಿದ್ದು, ನಿರ್ವಾಹಕ ಬೆಳಗಾವಿಯ ಪಶುವಾಪುರ ನಿವಾಸಿ ಸುನಿಲ್‌ (44) ಬಂಧಿತ ಆರೋಪಿ. ಬಸ್ಸಿನ ಹಿಂಬದಿಯ ಸೀಟಿನ ಅಡಿಯಲ್ಲಿಟ್ಟಿದ್ದ 9 ಕೆ.ಜಿ. ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರಿನಿಂದ ಹರಿಹರ ಬಾಳುಗೋಡಿಗೆ ಬೆಳಗ್ಗೆ 6.30ಕ್ಕೆ ಹೊರಟ ಬಸ್ಸಿನ ಲ್ಲಿ ದನದ ಮಾಂಸ ಇರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಗಡಿಪಿಲ ಸಮೀಪ ಸುಮಾರು 7 ಗಂಟೆಗೆ ತಪಾಸಣೆಗೆ ನಡೆಸಿದರು. ಈ ವೇಳೆ ಬಸ್ಸಿನ ಹಿಂಬದಿಯ ನಿರ್ವಾಹಕನ ಸೀಟ್‌ ಬಳಿ ಇದ್ದ ಗೋಣಿ ಚೀಲದಲ್ಲಿ ದನದ ಮಾಂಸ ಪತ್ತೆಯಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

wetransfer

ಜನಪ್ರಿಯ ಫೈಲ್ ಶೇರಿಂಗ್ ವೆಬ್ ಸೈಟ್ We Transfer ನಿಷೇಧಿಸಿದ ಭಾರತ ಸರ್ಕಾರ

ತಂಬಾಕು ಬಳಕೆಯಿಂದ ಮಾರಣಾಂತಿಕ ಕಾಯಿಲೆ ; ಇರಲಿ ಎಚ್ಚರ

ತಂಬಾಕು ಬಳಕೆಯಿಂದ ಮಾರಣಾಂತಿಕ ಕಾಯಿಲೆ ; ಇರಲಿ ಎಚ್ಚರ

ರೂಪಾಂತರದ ವೈರಸ್‌ ಪ್ರಾಣಿಗಳಿಂದ ನಮಗೆ?; ಟೆಕ್ಸಾಸ್‌ ವಿವಿ ತಜ್ಞರಿಂದ ಹೊಸ ಸಂಶೋಧನೆ

ರೂಪಾಂತರದ ವೈರಸ್‌ ಪ್ರಾಣಿಗಳಿಂದ ನಮಗೆ?; ಟೆಕ್ಸಾಸ್‌ ವಿವಿ ತಜ್ಞರಿಂದ ಹೊಸ ಸಂಶೋಧನೆ

man-ki-baat

ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ಇಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ

ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೇ ನೀವು; ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ

ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೇ ನೀವು; ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ

ಪಿಪಿಪಿ ಮಾದರಿ ಮೂಲ ಸೌಕರ್ಯ ಯೋಜನೆ

ಪಿಪಿಪಿ ಮಾದರಿ ಮೂಲ ಸೌಕರ್ಯ ಯೋಜನೆ

ಕಡ್ಡಾಯ ಆನ್‌ಲೈನ್‌ ಬೋಧನೆಯತ್ತ ದಾಪುಗಾಲು

ಕಡ್ಡಾಯ ಆನ್‌ಲೈನ್‌ ಬೋಧನೆಯತ್ತ ದಾಪುಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಮಿಷಗಳಲಿ ಡಿಜಿಟಲ್‌ ಪಾನ್‌ಕಾರ್ಡ್‌ ಸಿಗುತ್ತೆ

ನಿಮಿಷಗಳಲಿ ಡಿಜಿಟಲ್‌ ಪಾನ್‌ಕಾರ್ಡ್‌ ಸಿಗುತ್ತೆ

ಜರ್ಮನಿಯಿಂದ ತಾಯ್ನಾಡಿಗೆ ಮರಳಿದ ಗರ್ಭಿಣಿ

ಜರ್ಮನಿಯಿಂದ ತಾಯ್ನಾಡಿಗೆ ಮರಳಿದ ಗರ್ಭಿಣಿ

ಹುಣಸೂರು: ಕೊಟ್ಟಿಗೆಗೆ ನುಗ್ಗಿ ಹಸುವನ್ನು ಗಾಯಗೊಳಿಸಿದ ಚಿರತೆ

ಹುಣಸೂರು: ಕೊಟ್ಟಿಗೆಗೆ ನುಗ್ಗಿ ಹಸುವನ್ನು ಗಾಯಗೊಳಿಸಿದ ಚಿರತೆ

wetransfer

ಜನಪ್ರಿಯ ಫೈಲ್ ಶೇರಿಂಗ್ ವೆಬ್ ಸೈಟ್ We Transfer ನಿಷೇಧಿಸಿದ ಭಾರತ ಸರ್ಕಾರ

Huballi-tdy-2

ನರೇಗಾ ಕಾಮಗಾರಿಗಳಲ್ಲಿ ಜೆಸಿಬಿ ಅಬ್ಬರ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ನಿಮಿಷಗಳಲಿ ಡಿಜಿಟಲ್‌ ಪಾನ್‌ಕಾರ್ಡ್‌ ಸಿಗುತ್ತೆ

ನಿಮಿಷಗಳಲಿ ಡಿಜಿಟಲ್‌ ಪಾನ್‌ಕಾರ್ಡ್‌ ಸಿಗುತ್ತೆ

ಜರ್ಮನಿಯಿಂದ ತಾಯ್ನಾಡಿಗೆ ಮರಳಿದ ಗರ್ಭಿಣಿ

ಜರ್ಮನಿಯಿಂದ ತಾಯ್ನಾಡಿಗೆ ಮರಳಿದ ಗರ್ಭಿಣಿ

ಹುಣಸೂರು: ಕೊಟ್ಟಿಗೆಗೆ ನುಗ್ಗಿ ಹಸುವನ್ನು ಗಾಯಗೊಳಿಸಿದ ಚಿರತೆ

ಹುಣಸೂರು: ಕೊಟ್ಟಿಗೆಗೆ ನುಗ್ಗಿ ಹಸುವನ್ನು ಗಾಯಗೊಳಿಸಿದ ಚಿರತೆ

wetransfer

ಜನಪ್ರಿಯ ಫೈಲ್ ಶೇರಿಂಗ್ ವೆಬ್ ಸೈಟ್ We Transfer ನಿಷೇಧಿಸಿದ ಭಾರತ ಸರ್ಕಾರ

Huballi-tdy-2

ನರೇಗಾ ಕಾಮಗಾರಿಗಳಲ್ಲಿ ಜೆಸಿಬಿ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.