• ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಅಭಿವಂದನೆ

  ಉಡುಪಿ: ಶ್ರೀಕೃಷ್ಣ ಮಠದಲ್ಲಿ 2 ವರ್ಷಗಳ ಕಾಲ ಪರ್ಯಾಯ ಪೂಜೆಯನ್ನು ಯಶಸ್ವಿಯಾಗಿ ಪೂರೈಸಿದ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರನ್ನು ಶುಕ್ರವಾರ ರಾತ್ರಿ ಪೂರ್ಣಪ್ರಜ್ಞ ಮಂಟಪದಲ್ಲಿ ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗವು ಅಭಿವಂದಿಸಿತು. ಶ್ರೀ ವಿದ್ಯಾಧೀಶತೀರ್ಥ…

 • ರಸಮಂಜರಿ, ಯಕ್ಷಗಾನ, ಸಾಂಸ್ಕೃತಿಕ ರಸದೌತಣ

  ಉಡುಪಿ: ಪರ್ಯಾಯ ಮೆರವಣಿಗೆಯ ಪೂರ್ವದಲ್ಲಿ ಜೋಡುಕಟ್ಟೆಯಿಂದ ರಥಬೀದಿ ತನಕ ರಸ್ತೆಯ ಇಕ್ಕೆಲಗಳಲ್ಲಿ ವೈವಿಧ್ಯಮಯ ನೃತ್ಯ ಪ್ರಕಾರಗಳು, ರಸಮಂಜರಿ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಿನ್ನಿಮೂಲ್ಕಿಯ ಶ್ರೀಕೃಷ್ಣ ಗ್ರೂಪ್‌ ಆಫ್‌ ಡ್ಯಾನ್ಸ್‌ ನಿಂದ ಪರ್ಯಾಯ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಕಿನ್ನಿಮೂಲ್ಕಿ…

 • ಇಂದು ಮಹಾ ಅನ್ನಸಂತರ್ಪಣೆ

  ಉಡುಪಿ: ಅದಮಾರು ಪರ್ಯಾಯೋತ್ಸವದ ಅಂಗವಾಗಿ ಜ.18ರಂದು ಮಹಾ ಅನ್ನಸಂತರ್ಪಣೆ ನಡೆಯಲಿದ್ದು, 40 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ. ಇದಕ್ಕಾಗಿ ನಸುಕಿನ 3 ಗಂಟೆಗೆ ಅಡುಗೆ ಆರಂಭವಾಗುತ್ತದೆ. ರಾಮ ಮತ್ತು ಲಕ್ಷ್ಮಣ ಎಂಬ ಎರಡು ಬೃಹತ್‌…

 • ಆಧುನಿಕತೆಯ ಬೇರು ಹಳತರಲ್ಲಿದೆ : ವಿಜಯ್‌ ರಾಘವೇಂದ್ರ

  ಉಡುಪಿ: ಭಾಷೆ, ಬಟ್ಟೆ, ಅನುಕೂಲತೆಗಳನ್ನು ಹೆಚ್ಚಿಸಿಕೊಂಡ ಕೂಡಲೇ ನಾವು ಆಧುನಿಕರಾಗುವುದಿಲ್ಲ. ಹಳೆಯದನ್ನೂ ಅನುಸರಿಸುತ್ತ ಇವತ್ತಿಗೂ ಬೇಕಾಗುವಂತೆ ಬದುಕುವುದೇ ಆದರ್ಶ ಜೀವನ. ಆಧುನಿಕತೆಯ ಬೇರು ಹಳತರಲ್ಲಿದೆ ಎಂದು ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಹೇಳಿದರು. ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿ…

 • ಶ್ರೀಕೃಷ್ಣ ಮಠ: 730 ದಿನಗಳ ಅಖಂಡ ಭಜನೆ ಸಮಾಪನ

  ಉಡುಪಿ: ಎರಡು ವರ್ಷ ಅಂದರೆ 730 ದಿನಗಳ ಕಾಲ ಅನುಕ್ಷಣವೂ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆದ ಗೋವಿಂದನಾಮ ಸ್ಮರಣೆ ಜ. 18ರ ಪ್ರಾತಃಕಾಲ ಸಮಾಪನಗೊಳ್ಳುತ್ತಿದೆ. 2 ವರ್ಷ ಅನುದಿನವೂ ನಡೆದ ಲಕ್ಷತುಳಸೀ ಅರ್ಚನೆ ಮತ್ತು ಲಕ್ಷ ವಿಷ್ಣುಸಹಸ್ರನಾಮಾರ್ಚನೆ ಜ. 17ರಂದು…

 • ಶ್ರೀ ಈಶಪ್ರಿಯತೀರ್ಥರ ಪ್ರಥಮ ಪರ್ಯಾಯ

  ಉಡುಪಿ: ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಪೂಜೆಯ ಇತಿಹಾಸದಲ್ಲಿ 250ನೇ ಪರ್ಯಾಯ ಪೂಜೆ, ಅದಮಾರು ಮಠದ ಸರದಿ ಯಲ್ಲಿ 32ನೆಯ ಪರ್ಯಾಯ ಪೂಜೆ ಸನ್ನಿಹಿತವಾದ ಸಂದರ್ಭವನ್ನು ಕೃಷ್ಣ ನಗರಿ ಸಂತಸ, ಸಂಭ್ರಮಗಳಿಂದ ಇದಿರುಗೊಂಡಿದೆ. ಶ್ರೀಮನ್ಮಧ್ವಾಚಾರ್ಯರಿಂದ ಪ್ರತಿಷ್ಠಾಪಿತವಾದ ಶ್ರೀಕೃಷ್ಣ ದೇವರಿಗೆ ಪೂಜೆಯನ್ನು…

 • ಹೂಗಳ ರಾಶಿಯಿಂದ ಕಂಗೊಳಿಸಿದ ದರ್ಬಾರ್‌ ವೇದಿಕೆ

  ಉಡುಪಿ: ಬಣ್ಣ ಬಣ್ಣದ ಸಾವಿರಾರು ಹೂವು ಹಾಗೂ ಹಸಿರು ಸಿರಿಯ ಎಲೆಗಳನ್ನು ಸೇರಿಸಿ ರಾಜಾಂಗಣದಲ್ಲಿ ನಿರ್ಮಿಸಲಾದ ಅದಮಾರು ಮಠದ ದರ್ಬಾರ್‌ ವೇದಿಕೆ ಸಂಪೂರ್ಣವಾಗಿ ದೇಸೀ ಕಲಾತ್ಮಕತೆಯಿಂದ ಕೂಡಿದ್ದು ಕಣ್ಮನ ಸೆಳೆಯುತ್ತಿದೆ. ವೇದಿಕೆಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್‌ ವಸ್ತುಗಳ ಬಳಕೆಗೆ ಅವಕಾಶ…

 • ಅದಮಾರು ಪರ್ಯಾಯ ಸಂಭ್ರಮಕ್ಕೆ ಕಳೆಗಟ್ಟಿದ ನಗರ

  ಉಡುಪಿ: ಪರ್ಯಾಯದ ಸಡಗರದಲ್ಲಿರುವ ಪೊಡವಿಗೊಡೆಯ ಉಡುಪಿ ಶ್ರೀ ಕೃಷ್ಣನ ನಾಡು ಈಗಾಗಲೇ ಪರಿಸರ ಸ್ನೇಹಿ ವಸ್ತುಗಳಿಂದ ನವವಧುವಿನಂತೆ ಶೃಂಗಾರಗೊಂಡಿದ್ದು, ಜನರಲ್ಲೂ ಸಂಭ್ರಮದ ಕಳೆ ಮೂಡಿಸಿದೆ. ಶುಕ್ರವಾರ ಬೆಳಗ್ಗೆಯಿಂದಲೇ ನಗರದಲ್ಲಿ ಜನರ ಓಡಾಟ ಹೆಚ್ಚಿದ್ದು, ಊರಪರವೂರ ಜನರು ತಂಡೋಪತಂಡವಾಗಿ ಉಡುಪಿಗೆ…

 • ಶ್ರೀಕೃಷ್ಣ ಮಠದಲ್ಲಿ “ಕೃಷ್ಣ ಪ್ರಸಾದ ಸೂರೆ’ !

  ಉಡುಪಿ: ಪರ್ಯಾಯದ ಕೊನೆಯ ದಿನ ನಡೆಯುವ “ಸೂರೆ’ ಎಂಬ ಆಚರಣೆ ಎಲ್ಲರ ಗಮನ ಸೆಳೆಯುತ್ತದೆ. ಅಂತಹ ಆಚರಣೆ ಪಲಿಮಾರು ಪರ್ಯಾಯದ ಅಂತಿಮ ದಿನವಾದ ಶುಕ್ರವಾರ ನಡೆಯಿತು. ಪ್ರಸಾದ ಸೂರೆ ಮಾಡಿದ ಭಕ್ತರು! ಮಧ್ಯಾಹ್ನದ ಅನ್ನ ಸಂತರ್ಪಣೆ ಬಳಿಕ ಉಳಿದ…

 • ಭತ್ತದ ತೆನೆ, ಪುಷ್ಪಗಳಿಂದ ಅಲಂಕೃತ ಅದಮಾರು ಮಠ

  ಉಡುಪಿ: ಪರ್ಯಾಯ ಮಹೋತ್ಸವದ ಸಂಭ್ರಮದಲ್ಲಿರುವ ಶ್ರೀಕೃಷ್ಣ ಮಠದ ಆವರಣ ಅಲಂಕೃತಗೊಂಡು ಭಕ್ತ ಸಮೂಹವನ್ನು ಆಕರ್ಷಿಸುತ್ತಿದೆ. ಅದಮಾರು ಮಠದಲ್ಲಿ ಮಹಿಳೆಯರು ಅಲಂಕಾರಕ್ಕೆ ಬೇಕಿರುವ ಹೂಗಳನ್ನು ಕಟ್ಟುವ ಕಾರ್ಯದಲ್ಲಿ ಶುಕ್ರವಾರ ನಿರತರಾಗಿದ್ದರು. ಭಜನೆಗಳನ್ನು ಹಾಡುತ್ತ ಹೂಗಳನ್ನು ಜೋಡಿಸುವ ಕಾರ್ಯವನ್ನು ನಡೆಸಿದರು. ಮಠದ…

 • ಗ್ಯಾಸ್‌ಲೈಟ್‌ನಲ್ಲಿ ನಡೆದಿತ್ತು ಪರ್ಯಾಯ ಮೆರವಣಿಗೆ!

  ಉಡುಪಿ: ಈಗ ಪರ್ಯಾಯೋತ್ಸವವೆಂದರೆ ಅದ್ದೂರಿ. ವಿದ್ಯುದ್ದೀಪಾಲಂಕಾರಗಳು ಕಣ್ಣು ಕೋರೈಸುತ್ತವೆ. ಊಟಕ್ಕೆ ಟೇಬಲ್‌, ಬಫೆ ವ್ಯವಸ್ಥೆ ಬಂದಿವೆ. 1950-60ರ ದಶಕಗಳಲ್ಲಿ ಇದಾವುದೂ ಇದ್ದಿರಲಿಲ್ಲ. ಓಡ್ಲು ಹಂಚಿನ ಕಟ್ಟಡದಲ್ಲಿ ದರ್ಬಾರ್‌ ಪರ್ಯಾಯ ದರ್ಬಾರ್‌ ಸಭೆ ನಡೆಯುತ್ತಿದ್ದುದು ಈಗಿನ ಬಡಗುಮಾಳಿಗೆಯೊಳಗೆ. ಅದು ಓಡ್ಲು…

 • ಮಹಿಳೆಯರ ಹಕ್ಕು ರಕ್ಷಣೆಯಲ್ಲಿ ಅಧಿಕಾರಿಗಳು ಕೈಜೋಡಿಸಿ: ಶ್ಯಾಮಲಾ

  ಕಾರ್ಕಳ: ಮಹಿಳೆಯರ ಹಕ್ಕು ಹಾಗೂ ಅವರ ರಕ್ಷಣೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳೊಂದಿಗೆ ಇಲಾಖಾಧಿಕಾರಿಗಳು ಕೈ ಜೋಡಿಸ ಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌ ಅಭಿಪ್ರಾಯಪಟ್ಟರು.ಜ. 16ರಂದು ಕಾರ್ಕಳ ತಾಲೂಕು…

 • ‘ಪರ್ಯಾಯ’ವೇ ಇಲ್ಲದಂತೆ ಪರಿಸಮಾಪ್ತಿಯಾಯಿತು ‘ಪಲಿಮಾರು ಪರ್ಯಾಯ’

  ಸಂನ್ಯಾಸ ಎಂಬುವುದು ಯಾವ ತಲೆಬಿಸಿಯೂ ಇಲ್ಲದೆ ತಿಂದುಂಡು ಆರಾಮವಾಗಿ ಇರುವ ಒಂದು ವ್ಯವಸ್ಥೆ ಎಂದು ವಿಮರ್ಶಿಸುವ ವಿಚಾರ ಹೀನರು ಒಮ್ಮೆ ಪಲಿಮಾರು  ವಿದ್ಯಾಧೀಶತೀರ್ಥ ಶ್ರೀಗಳ ದಿನಚರಿಯನ್ನೊಮ್ಮೆ ನೋಡಲೇಬೇಕು. ಶ್ರೀಗಳ ಒಂದು ದಿನದ ದಿನಚರಿ ಬರೋಬ್ಬರಿ ಒಂದು ವರ್ಷಕ್ಕೆ ಸಾಕಾಗುವಷ್ಟು…

 • ಪರ್ಯಾಯ ಮಹೋತ್ಸವಕ್ಕೆ ಕೃಷ್ಣನ ನಗರಿ ಸರ್ವಸನ್ನದ್ಧ

  ಉಡುಪಿ: ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನ ಪೂಜೆಗಾಗಿ ಜ. 18ರಂದು ಸರ್ವಜ್ಞ ಪೀಠಾರೋಹಣಗೈಯಲಿದ್ದು, ಈ ಪರ್ಯಾಯ ಮಹೋತ್ಸವಕ್ಕೆ ಶ್ರೀಕೃಷ್ಣ ನಗರ ಸಂಪೂರ್ಣ ಸಜ್ಜುಗೊಂಡಿದೆ. ಜ. 8ರಂದು ಪುರಪ್ರವೇಶ ಮಾಡಿದ ಅನಂತರ ಉಡುಪಿ ಪೂರ್ಣ ಪರ್ಯಾಯಕ್ಕೆ…

 • ಫಾಸ್ಟ್ಯಾಗ್‌ ನಗದು ಪಾವತಿಗೆ ಯಾವುದೇ ವಿನಾಯಿತಿ ಇಲ್ಲ

  ಪಡುಬಿದ್ರಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯು ಬುಧವಾರದಿಂದ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಿದೆ. ನಗದು ಪಾವತಿಸಿ ಸಾಗುವ ವಾಹನಗಳಿಗೆ 24 ಗಂಟೆಗಳೊಳಗಾಗಿ ವಾಪಸಾದರೂ ಯಾವುದೇ ವಿನಾಯಿತಿ ಇರುವುದಿಲ್ಲ. ಮತ್ತೆ ಏಕಮುಖ ದರವನ್ನು ಪಾವತಿಸಿಯೇ ಸಾಗಬೇಕಾಗುತ್ತದೆ.  ಯಾವುದೇ ವಿನಾಯಿತಿ ಲಭ್ಯವಾಗಬೇಕಿದ್ದಲ್ಲಿ…

 • ದೇವರು ಮಾತನ್ನೂ ಆಡುತ್ತಾನೆ, ಮಾತನಾಡಿಸಲು ಗೊತ್ತಿರಬೇಕಷ್ಟೆ

  ಶ್ರೀಕೃಷ್ಣ ಮಠದಲ್ಲಿ 2 ವರ್ಷಗಳ ಪರ್ಯಾಯ ಆರಂಭವಾದ ಬಳಿಕ 32ನೆಯ ಪರ್ಯಾಯ ಚಕ್ರದ ಎರಡನೆಯ ಪರ್ಯಾಯ ಪೂಜಾ ಕೈಂಕರ್ಯದ ಉತ್ಸವ ನಡೆಯುತ್ತಿದೆ. ಇದು ಅದಮಾರು ಮಠಕ್ಕೆ 32ನೆಯ ಪರ್ಯಾಯ. ಈ ಸರದಿ ಅದಮಾರು ಮಠಕ್ಕೆ ಸಲ್ಲುತ್ತಿರುವ ಹಿನ್ನೆಲೆಯಲ್ಲಿ ಹಿರಿಯ…

 • ಶ್ರೀಕೃಷ್ಣನ ತಣ್ತೀ ಅಳವಡಿಸಿಕೊಳ್ಳುವುದು ಅಗತ್ಯ

  ಶ್ರೀಕೃಷ್ಣ ಮಠದಲ್ಲಿ 2 ವರ್ಷಗಳ ಪರ್ಯಾಯ ಆರಂಭವಾದ ಬಳಿಕ 32ನೆಯ ಪರ್ಯಾಯ ಚಕ್ರದ ಎರಡನೆಯ ಪರ್ಯಾಯ ಪೂಜಾ ಕೈಂಕರ್ಯದ ಉತ್ಸವ ನಡೆಯುತ್ತಿದೆ. ಇದು ಅದಮಾರು ಮಠಕ್ಕೆ 32ನೆಯ ಪರ್ಯಾಯ. ಈ ಸರದಿ ಅದಮಾರು ಮಠಕ್ಕೆ ಸಲ್ಲುತ್ತಿರುವ ಹಿನ್ನೆಲೆಯಲ್ಲಿ ಸರ್ವಜ್ಞ…

 • ಶ್ರೀವಿಶ್ವಪ್ರಿಯ, ಶ್ರೀ ಈಶಪ್ರಿಯತೀರ್ಥರ ಅಂಚೆ ಲಕೋಟೆ ಬಿಡುಗಡೆ

  ಉಡುಪಿ: ಅದಮಾರು ಮಠದ ಪರ್ಯಾಯದ ಪ್ರಯುಕ್ತ ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಲಕೋಟೆ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪುರಪ್ರವೇಶ ಮಾಡಿದ ದಿನ ಬಿಡುಗಡೆಯಾಯಿತು. ಲಕೋಟೆಯಲ್ಲಿ ಅದಮಾರು ಮಠದ ಹಿರಿಯ ವಿಶ್ವಪ್ರಿಯತೀರ್ಥ ಶ್ರೀಗಳು, ಭಾವಿ ಪರ್ಯಾಯ ಪೀಠಾಧಿಪತಿ ಈಶಪ್ರಿಯತೀರ್ಥ…

 • ಪರ್ಯಾಯಕ್ಕೆ ಶ್ರೀಕೃಷ್ಣ ನಗರಿ ಸನ್ನದ್ಧ

  ಉಡುಪಿ: ಪರ್ಯಾಯ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತರು ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಬೇಕಾಗುವ ಮೂಲಸೌಲಭ್ಯ ಒದಗಿಸಲು ಈಗಾಗಲೇ ಸರಕಾರ ಮತ್ತು ಜಿಲ್ಲಾಡಳಿತದ ಮಟ್ಟದಲ್ಲಿ ಸಭೆಗಳು ನಡೆದಿವೆ. ಪರ್ಯಾಯ ಮಹೋತ್ಸವ ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಶ್ರೀಕೃಷ್ಣ ಸೇವಾ…

 • ಪಾಜೆಗುಡ್ಡೆ ಅಪಾಯಕಾರಿ ತಿರುವಿಗೆ ಸಿಕ್ಕೀತೇ ಮುಕ್ತಿ?

  ಅಪಘಾತ ಪ್ರದೇಶವಾಗಿರುವ ಪಾಜೆಗುಡ್ಡೆ ತಿರುವನ್ನು ಸರಿಪಡಿಸಲು ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಆದರೆ ಇದು ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಯೋಜನೆ ಜಾರಿ ವಿಳಂಬವಾಗದಂತೆ ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಪ್ರಯತ್ನಿಸಬೇಕಿದೆ. ಬಜಗೋಳಿ: ಬಜಗೋಳಿ-ಹೊಸ್ಮಾರು ರಾಜ್ಯ ಹೆದ್ದಾರಿಯಲ್ಲಿರುವ ಪಾಜೆಗುಡ್ಡೆ ತಿರುವು ತೀವ್ರ ಅಪಾಯ ಕಾರಿಯಾಗಿದ್ದು…

ಹೊಸ ಸೇರ್ಪಡೆ