Lok Sabha Elections 2024; ದ್ವೇಷಭಾಷಿಕರಿಗೆ ಇಲ್ಲ ಬಿಜೆಪಿ ಲೋಕ ಟಿಕೆಟ್‌

ವಿವಾದಿತ ಹೇಳಿಕೆ ನೀಡಿದ್ದ ಮೂವರಿಗೆ ಸಿಗದ ಟಿಕೆಟ್‌; ಸಾಧ್ವಿ ಪ್ರಜ್ಞಾ, ರಮೇಶ್‌ ಬಿಧೂರಿ, ಪರ್ವೇಶ್‌ಗೆ ಕೊಕ್‌

Team Udayavani, Mar 4, 2024, 6:45 AM IST

Lok Sabha Elections 2024; ದ್ವೇಷಭಾಷಿಕರಿಗೆ ಇಲ್ಲ ಬಿಜೆಪಿ ಲೋಕ ಟಿಕೆಟ್‌

ಹೊಸದಿಲ್ಲಿ: ವಿವಾದಿತ ಹೇಳಿಕೆಗಳನ್ನು ನೀಡಿ ಮುಜುಗರ ಉಂಟು ಮಾಡುವಂಥವರನ್ನು ಪಕ್ಷವು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ರವಾನಿಸಿದೆ. ಭೋಪಾಲದ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌, ದಿಲ್ಲಿಯ ಸಂಸದರಾದ ಪರ್ವೇಶ್‌ ಸಾಹಿಬ್‌ ಸಿಂಗ್‌ ವರ್ಮ ಮತ್ತು ರಮೇಶ್‌ ಬಿಧೂರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿಲ್ಲ.

ಈ ಮೂವರು ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ದ್ವೇಷಭಾಷಣ, ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿದ್ದರು.ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಗಾಂಧೀಜಿ ಹಂತಕ ನಾಥೂರಾಮ್‌ ಗೋಡ್ಸೆಯನ್ನು “ದೇಶಭಕ್ತ’ ಎಂದು ಹೇಳಿದ್ದು ಪಕ್ಷಕ್ಕೆ ಹಾನಿಯುಂಟು ಮಾಡಿದೆ. ಈ ಹೇಳಿಕೆಗೆ ಪ್ರತಿಯಾಗಿ ಸ್ವತಃ ಪ್ರಧಾನಿ ಮೋದಿಯೇ ಅಸಮಾಧಾನ ವ್ಯಕ್ತಪಡಿಸಿ, “ಗಾಂಧೀಜಿಯವರ ಟೀಕೆ ಅಥವಾ ಗೋಡ್ಸೆಗೆ ಬೆಂಬಲವಾಗಿ ಹೇಳಿಕೆ ನೀಡುವುದು ಕೆಟ್ಟ ನಡವಳಿಕೆಯಾಗಿದೆ.

ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅವರು ಕ್ಷಮೆ ಕೇಳಿದ್ದಾರಾದರೂ ನಾನು ಅವರನ್ನು ಪೂರ್ಣವಾಗಿ ಕ್ಷಮಿಸಲಾರೆ’ ಎಂದು ಐದು ವರ್ಷಗಳ ಹಿಂದೆ ಹೇಳಿದ್ದರು. ಸಾಧ್ವಿ ಪ್ರಜ್ಞಾ ಈಗ ಟಿಕೆಟ್‌ ವಂಚಿತರಾಗಿದ್ದಾರೆ. ಅದೇ ರೀತಿ ದಕ್ಷಿಣ ದಿಲ್ಲಿ ಸಂಸದ ರಮೇಶ್‌ ಬಿಧೂರಿಯವರು ಕಳೆದ ವರ್ಷ ಲೋಕಸಭೆ ಕಲಾಪದ ವೇಳೆ ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿಯನ್ನು ಉಗ್ರ ಎಂದು ಕರೆದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಪಶ್ಚಿಮ ದಿಲ್ಲಿ ಸಂಸದ ಪರ್ವೇಶ್‌ ಸಾಹಿಬ್‌ ಸಿಂಗ್‌ ವರ್ಮ ಟಿಕೆಟ್‌ ವಂಚಿತರಾಗಿರುವುದು ಹಲವರಿಗೆ ಆಶ್ಚರ್ಯ ತಂದಿದೆ. ಆದರೆ ಅವರೂ ದ್ವೇಷ ಭಾಷಣದಿಂದಲೇ ಖ್ಯಾತರಾಗಿದ್ದಾರೆ. 2020ರ ದಿಲ್ಲಿ ದಂಗೆ ವೇಳೆ ಅವರು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಇಬ್ಬರು ನಾಯಕರಿಗೂ ಪಕ್ಷವು ಟಿಕೆಟ್‌ ನೀಡಿಲ್ಲ.

ಹೇಳಿದ್ದೇನು?
ಮುಂಬಯಿ ದಾಳಿಯ ವೇಳೆ ಎಟಿಎಸ್‌ ಮುಖ್ಯಸ್ಥ ಹೇಮಂತ್‌ ಕರ್ಕರೆ ಸಾವಿಗೆ ನನ್ನ ಶಾಪವೇ ಕಾರಣ.
– ಪ್ರಜ್ಞಾ ಸಿಂಗ್‌ ಠಾಕೂರ್‌,

ಭೋಪಾಲ ಸಂಸದೆ ಅವರ ತಲೆ ಸರಿ ಮಾಡುವುದಕ್ಕೆ, ಅವರನ್ನು ಸರಿ ದಾರಿಗೆ ತರುವುದಕ್ಕೆ ಸಂಪೂರ್ಣ ಬಹಿಷ್ಕಾರ ವೊಂದೇ ದಾರಿ.
– ಪರ್ವೇಶ್‌ ಸಾಹಿಬ್‌ ಸಿಂಗ್‌ ವರ್ಮ, ಪಶ್ಚಿಮ ದಿಲ್ಲಿ ಸಂಸದ

ಈತ (ಡ್ಯಾನಿಶ್‌ ಅಲಿ) ಉಗ್ರವಾದಿ ಯಾಗಿದ್ದಾನೆ, ಭಯೋತ್ಪಾದಕ ನಾಗಿದ್ದಾನೆ.
– ರಮೇಶ್‌ ಬಿಧೂರಿ,
ದಕ್ಷಿಣ ದಿಲ್ಲಿ ಸಂಸದ

ಟಾಪ್ ನ್ಯೂಸ್

Road Mishap; ಕುಂದಾಪುರ: ಲಾರಿ ಢಿಕ್ಕಿಯಾಗಿ ರಿಕ್ಷಾ ಪಲ್ಟಿ

Road Mishap; ಕುಂದಾಪುರ: ಲಾರಿ ಢಿಕ್ಕಿಯಾಗಿ ರಿಕ್ಷಾ ಪಲ್ಟಿ

Manipal; ಹಿಟ್‌ ಆ್ಯಂಡ್‌ ರನ್‌: ಮೂವರಿಗೆ ಗಾಯ

Manipal; ಹಿಟ್‌ ಆ್ಯಂಡ್‌ ರನ್‌: ಮೂವರಿಗೆ ಗಾಯ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

Karkala: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Karkala: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Kirimanjeshwara: ಕಾರು-ಟಿಪ್ಪರ್‌ ಢಿಕ್ಕಿ; ಮೂವರಿಗೆ ಗಾಯ, ಓರ್ವ ಗಂಭೀರ

Kirimanjeshwara: ಕಾರು-ಟಿಪ್ಪರ್‌ ಢಿಕ್ಕಿ; ಮೂವರಿಗೆ ಗಾಯ, ಓರ್ವ ಗಂಭೀರ

1-wqeqeewq

Belgavi; ಪ್ರಯಾಣಿಕರ ಲಗೇಜನ್ನು ಬೆಂಗಳೂರಿನಲ್ಲೇ ಬಿಟ್ಟು ಬಂದ ವಿಮಾನ!

police

Belgavi;ಗೋ ಸಾಗಾಟ ಲಾರಿ ತಡೆದ ಹಿಂದೂ ಕಾರ್ಯಕರ್ತರು: ಬಿಗುವಿನ ವಾತಾವರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UP: ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತ್ಯು

UP: ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತ್ಯು

10

ಮುಖ್ಯ ವೈದ್ಯರಿಲ್ಲದೆ ಸಿಬ್ಬಂದಿಯಿಂದ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ ಮೃತ್ಯು

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-asaasa

Bulldozer;ಅತ್ಯಾಚಾರ ಎಸಗಿ ಚಿತ್ರ ಹಿಂಸೆ ನೀಡಿದವನ ಮನೆ ಬುಲ್ಡೋಜರ್ ಬಳಸಿ ಧ್ವಂಸ

LokSabha Election; ಮಣಿಪುರದ 11 ಬೂತ್ ಗಳಲ್ಲಿ ಮರು ಮತದಾನಕ್ಕೆ ಆದೇಶ

LokSabha Election; ಮಣಿಪುರದ 11 ಬೂತ್ ಗಳಲ್ಲಿ ಮರು ಮತದಾನಕ್ಕೆ ಆದೇಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Road Mishap; ಕುಂದಾಪುರ: ಲಾರಿ ಢಿಕ್ಕಿಯಾಗಿ ರಿಕ್ಷಾ ಪಲ್ಟಿ

Road Mishap; ಕುಂದಾಪುರ: ಲಾರಿ ಢಿಕ್ಕಿಯಾಗಿ ರಿಕ್ಷಾ ಪಲ್ಟಿ

Manipal; ಹಿಟ್‌ ಆ್ಯಂಡ್‌ ರನ್‌: ಮೂವರಿಗೆ ಗಾಯ

Manipal; ಹಿಟ್‌ ಆ್ಯಂಡ್‌ ರನ್‌: ಮೂವರಿಗೆ ಗಾಯ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

Karkala: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Karkala: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Kirimanjeshwara: ಕಾರು-ಟಿಪ್ಪರ್‌ ಢಿಕ್ಕಿ; ಮೂವರಿಗೆ ಗಾಯ, ಓರ್ವ ಗಂಭೀರ

Kirimanjeshwara: ಕಾರು-ಟಿಪ್ಪರ್‌ ಢಿಕ್ಕಿ; ಮೂವರಿಗೆ ಗಾಯ, ಓರ್ವ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.