ಅಯ್ಯಪ್ಪ ವ್ರತದ ನಿಯಮಗಳೆಷ್ಟು ಕಠಿಣ; ಅವುಗಳ ಪ್ರಾಮುಖ್ಯತೆ ಏನು?

Team Udayavani, Jan 14, 2020, 4:38 PM IST

ಪ್ರತೀವರ್ಷದ ನವೆಂಬರ್ ಅಂತ್ಯದ ವೇಳೆಯ ಬಳಿಕ ಕಪ್ಪು ಬಟ್ಟೆ ತೊಟ್ಟ ಶಬರಿಮಲೆ ಅಯ್ಯಪ್ಪ ವೃತಾಧಾರಿಗಳನ್ನು ಕಾಣಬಹುದು. ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆಗೆ ಪ್ರತಿ ವರ್ಷ ಲಕ್ಷಾಂತರ ಜನ ಯಾತ್ರೆ ಕೈಗೊಳ್ಳುತ್ತಾರೆ. ಶಬರಿಗಿರಿ ವಾಸ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಹಾಗಾದರೆ ಅಯ್ಯಪ್ಪ ವೃತದ ಮಹತ್ವವೇನು? ವೃತಾಚರಣೆ ಮಾಡುವುದಾದರೂ ಹೇಗೆ ಎನ್ನುವದರ ಬಗ್ಗೆ ಇಲ್ಲಿದೆ ಮಾಹಿತಿ.

ಅಯ್ಯಪ್ಪ ವ್ರತಾಚರಣೆಯ ನಿಯಮಗಳು
*ಶಬರಿಮಲೆಗೆ ಹೋಗುವ ಮುನ್ನ 41 ದಿನ ಕಠಿಣ ವ್ರತ ಪಾಲಿಸಬೇಕು.
*ಮುಂಜಾನೆ ಎದ್ದು ತಣ್ಣೀರಿನಲ್ಲಿ ಮಿಂದು ಮಡಿಯನ್ನುಟ್ಟು ಅಯ್ಯಪ್ಪ ನಾಮ ಜಪಿಸುತ್ತಾ ಅಯ್ಯಪ್ಪನಿಗೆ ಪೂಜೆ ಸಲ್ಲಿಸಬೇಕು, ಅಯ್ಯಪ್ಪನಿಗೆ ಪ್ರಾತಃಪೂಜೆ ಮತ್ತು ಸಂಧ್ಯಾಪೂಜೆ ಮಾಡಿ ನೈವೇದ್ಯ ಅರ್ಪಿಸಬೇಕು.
*ಅಯ್ಯಪ್ಪ ಮಾಲೆ ಧರಿಸಿದವರು ದಿನ 24 ಗಂಟೆಯೂ ಅಯ್ಯಪ್ಪನ ಜಪ ಮಾಡಬೇಕು. ಈ ಸಂದರ್ಭದಲ್ಲಿ ಯಾವುದೇ ಕೆಟ್ಟ ಯೋಚನೆ ಮಾಡಬಾರದು.
* ಸ್ವತಃ ಅಥವಾ ಅಯ್ಯಪ್ಪ ಮಾಲಾಧಾರಿ ತಯಾರಿಸಿದ ಆಹಾರ ಮಾತ್ರ ಸೇವಿಸಬೇಕು, ಅದು ಒಂದು ಹೊತ್ತು ಮಾತ್ರ ಊಟ ಮಾಡಬೇಕು. ಬೆಳಗ್ಗೆ ಹಾಗೂ ಸಾಯಂಕಾಲ ಅಲ್ಪಾಹಾರ ಸೇವಿಸಬೇಕು.
*ವೃತಾವಧಿಯಲ್ಲಿ ಮಾಂಸಾಹಾರ ಸೇವನೆ, ಮದ್ಯಪಾನ, ತಂಬಾಕು ಸೇವನೆ ಮಾಡಬಾರದು.
* ತಲೆಕೂದಲು ಹಾಗೂ ಉಗುರುಗಳನ್ನು ಕತ್ತರಿಸಬಾರದು
* ದಿನದಲ್ಲಿ ಎರಡು ಬಾರಿ ಸ್ನಾನ ಮಾಡಿ, ಸ್ಥಳೀಯ ದೇವಸ್ಥಾನಕ್ಕೆ ಹೋಗಿ ಬರಬೇಕು.
* ಕಪ್ಪು ಬಣ್ಣದ ಅಥವಾ ಕಾವಿ ಬಟ್ಟೆ ಧರಿಸಬೇಕು.
* ವ್ರತಧಾರಿಯು ತುಳಸಿ ಮಾಲೆ ಮತ್ತು ರುದ್ರಾಕ್ಷಿಯನ್ನು ಧರಿಸಿರಬೇಕು
* ಮನೆಯಿಂದ ದೂರವಿದ್ದು ಪ್ರತ್ಯೇಕವಾಗಿ ಅಥವಾ ದೇವಸ್ಥಾನದ ಬಳಿ ವಾಸಿಸಬೇಕು.
* ಹಿರಿಯರನ್ನಾಗಲಿ, ಕಿರಿಯರನ್ನಾಗಲಿ ಇತರರನ್ನು ಕೂಡ ‘ಅಯ್ಯಪ್ಪ’ ಎಂದೇ ಸಂಬೋಧಿಸಬೇಕು.
* ಹೆಂಗಸರನ್ನು, ಹೆಂಡತಿಯನ್ನು ‘ಮಾತಾ / ಅಮ್ಮ’ ಎಂದು ಕರೆಯಬೇಕು
* ಚಪ್ಪಲಿಯನ್ನು ಧರಿಸಬಾರದು, ಕಾಲುನಡಿಗೆಯಲ್ಲಿ ತೆರಳಬೇಕು
* ಅಯ್ಯಪ್ಪ ಮಾಲೆ ಧರಿಸಿದವರೆಲ್ಲರಿಗೂ ವಯೋಮಾನದ ಭೇದವಿಲ್ಲದೆ ಕಾಲಿಗೆ ನಮಸ್ಕರಿಸಬೇಕು
*ಅಯ್ಯಪ್ಪ ದೀಕ್ಷೆ ಪಡೆದವರು ನೆಲದ ಮೇಲೆ ಮಲಗಬೇಕು

ಅಯ್ಯಪ್ಪ ವ್ರತ ನಿಯಮದ ಪ್ರಾಮುಖ್ಯತೆ
* ಮಾಂಸಾಹಾರ, ಮದ್ಯಪಾನ, ಧೂಮಪಾನವನ್ನು ತ್ಯಜಿಸುವುದರಿಂದ ದೇಹದ ಆರೋಗ್ಯ ವೃದ್ಧಿಯಾಗುವುದು. ಜೊತೆಗೆ ಒಳ್ಳೆಯ ಚಿಂತನೆಗಳು ನಮ್ಮ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿ.
*ಕೇಶಮುಂಡನ ಮಾಡದಿರುವುದು, ಉಗುರು ಕತ್ತರಿಸದಿರುವುದು ನಮ್ಮನ್ನು ಬಾಹ್ಯ ಸೌಂದರ್ಯ ಹಾಗೂ ಲೌಕಿಕ ಆಕರ್ಷಣೆಯಿಂದ ದೂರವಿಡುತ್ತದೆ.
*ವೃತಧಾರಿಗಳು ಧರಿಸುವಂತಹ ಕಪ್ಪು ಬಟ್ಟೆಯು ಎಲ್ಲಾ ಲೌಕಿಕ ಸುಖ, ಆಕರ್ಷಣೆಗಳನ್ನು ಬಿಟ್ಟು ದೇವರಿಗೆ ಶರಣಾಗಿದ್ದೇವೆ ಎನ್ನುವುದರ ಸಂಕೇತವಾಗಿದೆ. ಅಲ್ಲದೇ ಅಯ್ಯಪ್ಪನ ಮುಂದೆ ಎಲ್ಲರೂ ಸಮಾನರು ಎಂಬ ಅರ್ಥವನ್ನು ನೀಡುತ್ತದೆ.
* ಅಯ್ಯಪ್ಪ ಭಕ್ತರು 41 ದಿನ ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ಕಾಮ, ಕ್ರೋಧ, ಮೋಹದಿಂದ ದೂರವಿದ್ದರೆ ಮನಸ್ಸು ಹಾಗೂ ದೇಹ ಶುದ್ಧವಾಗುವುದು.

ಪ್ರವೀಣ್ ಚೆನ್ನಾವರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ