ಎಸ್‌ಬಿಐನಲ್ಲಿ 447 ಹುದ್ದೆಗಳು

Team Udayavani, Sep 10, 2019, 1:05 AM IST

ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾದ ದೇಶಾದ್ಯಂತ ಇರುವ ವಿವಿಧ ಶಾಖೆಗಳಲ್ಲಿ 447 ಹುದ್ದೆಗಳು ಖಾಲಿ ಇದ್ದು ಹುದ್ದೆಗಳಿಗೆ ಅನುಗುಣವಾಗಿ ಪದವಿ ಪಡೆದಿರಬೇಕು. ಸೆ. 25ರ ಒಳಗೆ ಅರ್ಜಿ ಸಲ್ಲಿಸಬಹುದು. ಮಂಗಳೂರು, ಬೆಂಗಳೂರು ಮತ್ತು ಹುಬ್ಬಿಳ್ಳಿಯಲ್ಲಿ ಪರೀಕ್ಷೆಗಳು ನಡೆಯಲಿವೆ. (ಪರೀಕ್ಷಾ ಕೇಂದ್ರ) ಅಕ್ಟೋಬರ್‌ 20ರಂದು ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ www.sbi.co.in ಸಂರ್ಪಕಿಸಿ.

2. ಡಿಆರ್‌ಡಿಒನಲ್ಲಿ ಹುದ್ದೆ
ಚಂಡೀಗಢದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ರಿಸರ್ಚ್‌ ಸೆಂಟರ್‌ನಲ್ಲಿ ಜೂನಿಯರ್‌ ರಿಸರ್ಚ್‌ ಫೆಲೋ ಮತ್ತು ರಿಸರ್ಚ್‌ ಅಸೋಸಿಯೇಟ್‌ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಸೆ. 16ರಂದು ಸಂದರ್ಶನ ನಡೆಯಲಿದೆ. ಎಂಎಸ್ಸಿ, ಎಂಇ ಮತ್ತು ಎಂಟೆಕ್‌ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ www.drdo.gov.in ಸಂಪರ್ಕಿಸಿ.

3. ಡೆಪ್ಯುಟಿ ಜಡ್ಜ್ ಅಟಾರ್ನಿ ಜನರಲ್‌ ಹುದ್ದೆ
ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ನಲ್ಲಿ ಡೆಪ್ಯುಟಿ ಜಡ್ಜ್ ಅಟಾರ್ನಿ ಜನರಲ್‌ ಹುದ್ದೆ ಖಾಲಿ ಇದ್ದು ಸೆ. 18ರ ಒಳಗೆ ಅರ್ಜಿ ಸಲ್ಲಿಸಬಹುದು. ಕಾನೂನು ಪದವಿ ಜತೆಗೆ 7 ವರ್ಷಗಳ ಸೇವಾ ಅನುಭವ ವಿರುವ, 40 ವರ್ಷ ವಯೋಮಿತಿ ಇದೆ. ಹೆಚ್ಚಿನ ಮಾಹಿತಿಗಾಗಿ www.recruitment.itbpolice.nic.in ಸಂಪರ್ಕಿಸಿ.

4. ಕೇಂದ್ರೀಯ ವಿವಿಯಲ್ಲಿ ವಿವಿಧ ಹುದ್ದೆಗಳು
ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ಕಲಬುರಗಿಯಲ್ಲಿ ಪ್ರೈವೇಟ್‌ ಸೆಕ್ರೆಟರಿ, ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆ ಸೇರಿದಂತೆ ಒಟ್ಟು 59 ಬೋಧಕೇತರ ಹುದ್ದೆಗಳು ಖಾಲಿ ಇದ್ದು ಅ. 5ರ ಒಳಗೆ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಇದೆ. ಹೆಚ್ಚಿನ ಮಾಹಿತಿ ವಿಶ್ವವಿದ್ಯಾನಿಲಯದಲ್ಲಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ