ನೇವಲ್‌ ಶಿಪ್‌ ರಿಪೇರಿ ಯಾರ್ಡ್‌

Team Udayavani, Oct 31, 2019, 4:15 AM IST

ಕಾರವಾರದಲ್ಲಿರುವ ನೇವಲ್‌ ಶಿಪ್‌ ರಿಪೇರಿ ಯಾರ್ಡ್‌ನಲ್ಲಿ 145 ಅಪ್ರಂಟಿಸ್‌ ಹುದ್ದೆ ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹತ್ತನೇ ತರಗತಿ ಅಥವಾ ಐಟಿಐ ಕೋರ್ಸ್‌ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
www.indiannavy.nic.in
ಕೊನೆಯ ದಿನಾಂಕ ಡಿಸೆಂಬರ್‌ 1

18 ಪ್ರಾಜೆಕ್ಟ್ ಎಂಜಿನಿಯರ್‌ ಹುದ್ದೆ
ಸೆಂಟರ್‌ ಫಾರ್‌ ಡೆವಲಪೆ¾ಂಟ್‌ ಆಫ್ ಅಡ್ವಾನ್ಸ್‌ ಕಂಪ್ಯೂಟಿಂಗ್‌ ಬೆಂಗಳೂರು ಇಲ್ಲಿ 18 ಪ್ರಾಜೆಕ್ಟ್ ಎಂಜಿನಿಯರ್‌ ಹುದ್ದೆಗಳು ಖಾಲಿ ಇದ್ದು ಆಸ್ತಕ ಅಭ್ಯರ್ಥಿಗಳಿ ಅರ್ಜಿ ಸಲ್ಲಿಸಬಹುದು. ಬಿಇ, ಬಿ.ಟೆಕ್‌, ಎಇ, ಎಮ್‌ ಟೆಕ್‌ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು..
https://www.cdac.in/
ಕೊನೆಯ ದಿನಾಂಕ ನವೆಂಬರ್‌ 6

ಎಲೆಕ್ಟ್ರೀಶಿಯನ್‌ ಹುದ್ದೆಗಳು
ರೈಲೈ ಸಚಿವಾಲಯದ ಅಧೀನದಲ್ಲಿರುವ ರೈಲೈ ವ್ಹೀಲ್‌ ಫ್ಯಾಕ್ಟರಿಯಲ್ಲಿ 192 ಎಲೆಕ್ಟ್ರಾನಿಕ್‌ ಮೆಕ್ಯಾನಿಕ್‌, ಫಿಟ್ಟರ್‌, ಎಲೆಕ್ಟ್ರೀಶಿಯನ್‌ ಹುದ್ದೆಗಳು ಖಾಲಿ ಇದ್ದು ಐಟಿಐ ಕೋರ್ಸ್‌ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://rwf.indianrailways.gov.in/
ಕೊನೆಯ ದಿನಾಂಕ ನವೆಂಬರ್‌15

ಗಣಿತಜ್ಞ, ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆ
ಬೆಂಗಳೂರಿನಲ್ಲಿರುವ ಇಂಡಿಯನ್‌ ಟೆಲಿಪೋನ್‌ ಇಂಡಸ್ಟ್ರೀಸ್‌ ಲಿ.ನಲ್ಲಿ ಗಣಿತಜ್ಞ, ಕಾರ್ಯ
ನಿರ್ವಾಹಕ ನಿರ್ದೇಶಕ ಹುದ್ದೆ, ಎಲೆಕ್ಟ್ರೀಶಿಯನ್‌ ಸೇರಿದಂತೆ 33 ಹುದ್ದೆ ಇದ್ದು ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ, ಎಮ್‌ಬಿಎ, ಸ್ನಾತಕೋತ್ತರ, ಕಾನೂನು ಪದವಿ ಮತ್ತು ಐಟಿ ಐ ಕೋರ್ಸ್‌ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
http://www.itiltd-india.com/
ಕೊನೆಯ ದಿನಾಂಕ ನವೆಂಬರ್‌1

ಕರ್ನಾಟಕ ಹೈಕೋರ್ಟ್‌ 21 ಜಿಲ್ಲಾ ನ್ಯಾಯಾಧೀಶರ ನೇಮಕಾತಿ
ಕರ್ನಾಟಕ ಹೈಕೋರ್ಟ್‌ 21 ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಕಾನೂನು ಪದವಿ ಪಡೆದ ಅನುಭವವಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
http://karnatakajudiciary.kar.nic.in/
ಕೊನೆಯ ದಿನಾಂಕ ನವೆಂಬರ್‌6

ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆ
ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇಲ್ಲಿ
ಸಾರ್ವಜನಿಕ ಸಂಪರ್ಕ ಅಧಿಕಾರಿ, ಡೇರಿ ಮೇಲ್ವಿಚಾರಕ ಹುದ್ದೆಗಳು ಖಾಲಿ ಇದ್ದು 10ನೇ ತರಗತಿ, ¤ ಐ ಟಿ ಐ, ಸ್ನಾತ್ತಕೋತ್ತರ ಪದವಿ ಮತ್ತು ಡಿಪ್ಲೋಮಾ ಮುಗಿಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
http://recruitapp.in/rbkmul2019
ಕೊನೆಯ ದಿನಾಂಕ ನವೆಂಬರ್‌8

ಭಾರತ ಸರಕಾರದ ಕೇಂದ್ರ ಸಿಲ್ಕ್ಬೋರ್ಡ್‌ ನಲ್ಲಿ ನಿರ್ದೇಶಕ ಹುದ್ದೆ
ಭಾರತ ಸರಕಾರದ ಅಧೀನದಲ್ಲಿರುವ ಕೇಂದ್ರ ಸಿಲ್ಕ್ ಬೋರ್ಡ್‌ನಲ್ಲಿ ನಿರ್ದೇಶಕ ಹುದ್ದೆ ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿದಿದೆ. ಪ್ರಾಣಿಶಾಸ್ತ್ರ. ಕೃಷಿ, ಸಸ್ಯ ಶಾಸ್ತ್ರದಲ್ಲಿ ಪದವಿ, 12 ವರ್ಷಗಳ ಕಾಲ ಸಂಶೋಧನಾ ಅನುಭವ ಮತ್ತು 5 ವರ್ಷ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರಬೇಕು.
www.csb.gov.in.
ಕೊನೆಯ ದಿನಾಂಕ ನವೆಂಬರ್‌22

ಟಿಕೆಟ್‌ ಕ್ಲರ್ಕ್‌ ಹುದ್ದೆ
ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲೈ ಇಲಾಖೆಯಲ್ಲಿ ಟಿಕೆಟ್‌ ಕ್ಲರ್ಕ್‌ ಹುದ್ದೆ ಖಾಲಿ ಇದ್ದು ಪಿ.ಯು.ಸಿ. ಅಥವಾ ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://www.cdac.in/
ಕೊನೆಯ ದಿನಾಂಕ ನವೆಂಬರ್‌20

ಪ್ರಾಜೆಕ್ಟ್ ಫೆಲೋ, ಪ್ರಾಜೆಕ್ಟ್ ಅಸಿಸ್ಟೆಂಟ್‌ ಹುದ್ದೆ
ಬೆಂಗಳೂರಿನಲ್ಲಿರುವ ಸೆಂಟ್ರಲ್‌ ಮೆಷಿನ್‌ ಟೂಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾಜೆಕ್ಟ್ ಫೆಲೋ, ಪ್ರಾಜೆಕ್ಟ್ ಅಸಿಸ್ಟೆಂಟ್‌ ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದು. ಪದವಿ, ಬಿ.ಇ. ಬಿ.ಟೆಕ್‌, ಎಇ, ಎಮ್‌ ಟೆಕ್‌, ಡಿಪ್ಲೊಮಾ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
http://www.cmti-india.net./
ಕೊನೆಯ ದಿನಾಂಕ ನವೆಂಬರ್‌22

300 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆ
ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ 300 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://www.cdac.in/
ಕೊನೆಯ ದಿನಾಂಕ ನವೆಂಬರ್‌6

ತಾಂತ್ರಿಕ ಹುದ್ದೆ
ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಲಿಮಿಟೆಡ್‌ (ಐಒಸಿಎಲ…), ಮಧ್ಯಪ್ರದೇಶ, ಗೋವಾ ಮತ್ತು ದಾದ್ರಮತ್ತು ನಗರ ಹವೇಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಾಂತ್ರಿಕ , ತಂತ್ರಜ್ಞ ಅಪ್ರಂಟಿಸ್‌
ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
www.iocl.com
ಕೊನೆಯ ದಿನಾಂಕ ನವೆಂಬರ್‌26

ಬಿಇಎಲ್‌ನಲ್ಲಿ ಎಂಜಿನಿಯರ್‌ ಹುದ್ದೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯು / ಟೆಲಿ
ಕಮ್ಯುನಿಕೇಶನ್‌, ಬಿ ಇ, ಬಿಟೆಕ್‌ ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸ
ಬಹುದು. ವಯೋಮಿತಿ 25 ವರ್ಷ.
ww.bel-India.in
ಕೊನೆಯ ದಿನಾಂಕ ನವೆಂಬರ್‌2

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ