2021: ಹೊಸ ವರುಷ …ಹೊಸ ಹರುಷ…ಬದುಕಿನ ಹೊಸ ಪುಟದ ಆರಂಭ
ನಕಾರಾತ್ಮಕ ಭಾವನೆಗಳಿಂದ ದೂರ ಉಳಿಯುವ ವರುಷದ ಬಯಕೆಯಲ್ಲಿ ನಾನಿದ್ದೇನೆ.
Team Udayavani, Dec 30, 2020, 6:30 PM IST
‘ಹೊಸ’ ಎಂಬ ಪದವೊಂದೆ ಸಾಕು ಮನವನ್ನು ಉತ್ಸಾಹದ ಕಡಲಲ್ಲಿ ತೇಲಿಸಲು. ಅದರಲ್ಲೂ ಹೊಸ ವರುಷ ಎಂದಾಕ್ಷಣ ನೋವು – ಗದ್ದಲ ಗಳನ್ನೆಲ್ಲಾ ಮರೆತು ಬಾಳಿನ ಅಧ್ಯಾಯದ ಹೊಸ ಪುಟ ತೆರೆಯುವ ತವಕ ಮೂಡುವುದು ಸಹಜ. ಒಂದೆಡೆ ಸಾಲು ಸಾಲು ನೆನಪುಗಳ ಸಿಹಿ ಖಾದ್ಯ ಉಣಬಡಿಸಿದ ವರ್ಷವ ಬೀಳ್ಕೊಡುವ ನೋವಾದರೆ , ಇನ್ನೊಂದೆಡೆ ನೂರಾರು ಮಹತ್ವಾಕಾಂಕ್ಷೆಗಳ ಹೊತ್ತು ಹೊಸ್ತಿಲಲಿ ನಿಂತಿಹ 2021ನ್ನು ಸ್ವಾಗತಿಸುವ ಸಂಭ್ರಮ.
2020ರಲ್ಲಿ ನಿರೀಕ್ಷೆಗಳಿಂತ ಹೆಚ್ಚಾಗಿ ಅನಿರೀಕ್ಷಿತಗಳನ್ನು ಮುಂದಿಟ್ಟ ಆ ವರುಷ ಲೋಕದ ಕೆಂಗಣ್ಣಿಗೆ ಗುರಿಯಾದರೂ ಸಹ ವಾಸ್ತವಿಕತೆಯ ಪಾಠಗಳನ್ನು ಅಚ್ಚುಕಟ್ಟಾಗಿ ಕಲಿಸಿತ್ತು. ಈ ಕಲಿತ ಪಾಠಗಳೇ ನನ್ನ ಹೊಸ ವರ್ಷದ ಮಾರ್ಗದರ್ಶಕ. ನಮ್ಮನು ನಾವು ಪ್ರೀತಿಸಿ ಹುರಿದುಂಬಿಸುವ, ಜಗವ ಮೆಚ್ಚಿಸಲು ಬಾಳದಿರುವ, ಮುನಿಸುಗಳ ಮರೆತು ಸಂಬಂಧಗಳ ಬಲಪಡಿಸುವ, ನಕಾರಾತ್ಮಕ ಭಾವನೆಗಳಿಂದ ದೂರ ಉಳಿಯುವ ವರುಷದ ಬಯಕೆಯಲ್ಲಿ ನಾನಿದ್ದೇನೆ.
ಸಾಮಾನ್ಯವಾಗಿ ಎಲ್ಲರೂ ಹೇಳುವಂತೆ ಬದಲಾಗುವುದು ಕ್ಯಾಲೆಂಡರ್ ಮಾತ್ರವಾದರೂ ಸಹ, ನಾವು ಬದಲಾಯಿಸುವಂಥದ್ದು ಬಹಳಷ್ಟು ಇರುತ್ತದೆ. ಸಣ್ಣ ಪುಟ್ಟ ಬದಲಾವಣೆಗಳಿಂದ ಬಾಳು ಹಸನಾಗುತ್ತದೆ ಎಂದಾದರೆ, ಆ ಬದಲಾವಣೆಗಳಿಂದ ಹೆದರುವ ಅವಶ್ಯಕತೆಯೇ ಇಲ್ಲ. ಹೊಸ ಪುಸ್ತಕದಂತೆ ಕೈಸೇರಿದೆ 2021, ಯಾವ ರೀತಿಯಲ್ಲಿ ಈ ಪುಟಗಳ ತುಂಬಿಸುತ್ತೇವೆ ಎಂಬುದು ನಮ್ಮ ಕೈಯ್ಯಲಿದೆ.
ಹೊಸ ವರ್ಷದ ಶುಭಾಶಯಗಳು!
ಶಿವರಂಜನಿ
ದ್ವಿತೀಯ ಬಿಎಸ್ಸಿ
ಎಂಜಿಎಂ ಕಾಲೇಜು,ಉಡುಪಿ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2021: ನಿರಾಸೆಯ ನಡುವೆ ಭರವಸೆಯ ನಿರೀಕ್ಷೆ; ಕನ್ನಡ ಚಿತ್ರರಂಗ ನಿಶ್ಚಿತವಾಗಿ ಬದಲಾಗಲಿದೆ
2021-ಹೊಸ ವರ್ಷ: ಯುವ ಜನಾಂಗಕಕ್ಕೆ ಅಭಿವೃದ್ಧಿ ಪಥದ ಯೋಜನೆ ಅಗತ್ಯ
ಹೊಸ ವರ್ಷ-ಹೊಸ ಭರವಸೆ: ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ ನಾಡಿನ ಜನತೆಗೆ ಶುಭಾಶಯ
2021: ಬದುಕು ಕಲಿಸಿದ ಪಾಠ- ಚಿಗುರಿದ ಕನಸು;“ನನ್ನ ಪ್ರೀತಿಯ ಗುಜರಿ ಅಂಗಡಿ”
ಹೊಸ ವರ್ಷದ ಸಂಭ್ರಮ: ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ, ರಾಷ್ಟ್ರಪತಿ