2021; ಕೋವಿಡ್ ಕಾಲ ಪಾಠವಾಗಲಿ…ಹೊಸ ವರುಷದ ನಡೆ ಆರೋಗ್ಯದೆಡೆಗೆ

ತಮ್ಮನ್ನು ತಾವು ಬಲಿಪಶು ಮಾಡಿಕೊಳ್ಳದೆ ಕೋವಿಡ್ ಕಾಲದಲ್ಲಿ ಕಲಿತಂತಹ ಪಾಠವನ್ನು ಯೋಚಿಸಿ

Team Udayavani, Dec 30, 2020, 6:10 PM IST

2021; ಕೋವಿಡ್ ಕಾಲ ಪಾಠವಾಗಲಿ…ಹೊಸ ವರುಷದ ನಡೆ ಆರೋಗ್ಯದೆಡೆಗೆ

ಹೊಸ ಮನೆ.. ಹೊಸ ಜನ.. ಹೊಸ ಹೊಸ ಬಂದ.. ಅಲ್ಲೇ ಸಂತೋಷವು…ನೂತನ ವರುಷವನ್ನು ಆಹ್ವಾನಿಸಲು ತುತ್ತ ತುದಿಗಾಲಲ್ಲಿ ನಿಂತಿರುವ ನಾವು ಈ ಸುದಿನಕ್ಕೆ ಎಷ್ಟೋ ತಿಂಗಳುಗಳ ಹಿಂದೆಯೇ ವಿವಿಧ ರೀತಿಯ ಆಸೆ, ಆಕಾಂಕ್ಷೆಗಳು,ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬಯಸುವ ದಿನವದು ಅದುವೇ ಹೊಸ ವರ್ಷದ ವಿಶೇಷ.

ಹೊಸ ವರ್ಷದ ದಿವಸ ನಾವು ಬಾಲ್ಯದ ದಿನಗಳಿಂದ ಇವತ್ತಿನ ದಿನದವರೆಗೂ ಸಹ ಹೊಸ ವರುಷ ಎಂದರೆ ಬಹಳ ಉತ್ಸಾಹಿಗಳಾಗಿ ಸ್ವಚ್ಛಂದ ಮನಸ್ಸಿಗೆ ಏನೆಲ್ಲಾ ಬಯಕೆಗಳನ್ನು ಬಯಸಿ ಅನುಭವಿಸುವಂತಹ ಸುಂದರ ದಿನ ಹೊಸ ವರ್ಷದ ದಿನ.

ಬಾಲ್ಯದಲ್ಲಿ  ಮಾಡಿದಂತಹ ಎಲ್ಲಾ ತಮಾಷೆಗಳು ಮೋಜು-ಮಸ್ತಿ ಈ ಸುಸಂದರ್ಭದಲ್ಲಿ ಒಮ್ಮೆ ಛಾಯಾಚಿತ್ರದ ಹಾಗೆ ಹಾದುಹೋಗಿ ಎಷ್ಟೋ ಸಿಹಿ ನೆನಪುಗಳನ್ನು ನಮಗೆ ನೆನಪಿಸುವ ದಿನವಾಗಿರುತ್ತದೆ. ಅಷ್ಟೇ ಅಲ್ಲದೆ ಸ್ನೇಹಿತರೊಂದಿಗೆ,ಮನೆಯವರೊಂದಿಗೆ ಕಳೆಯುವ ವಿಶೇಷ ದಿನವಾಗಿರುತ್ತದೆ.

ಹೊಸ ವರ್ಷದ ದಿನ ಸಾಮಾನ್ಯ ದಿನದ ಹಾಗೆ ಅಲ್ಲ. ಅದೊಂದು ವರ್ಷದ ಆರಂಭದ ಮೊದಲ ಹೆಜ್ಜೆ. ಮಾನವನ ಜೀವನ ಶೈಲಿಯಲ್ಲಿ ಹೊಸವರ್ಷದ ಮೊದಲ ದಿವಸವನ್ನು ಅನುಭವಿಸುತ್ತಾನೆ. 2021 ರ ಹೊಸ ವರುಷವು ನಮಗೆ ಬಹಳ ಬೇಗನೆ ಬಂದಿದೆ ಎಂಬುವಂತಹ ಒಂದು ಪರಿಕಲ್ಪನೆ ಇದೆ

2020ರ ನೂತನ ವರುಷವು ವಿಪರ್ಯಾಸದಲ್ಲಿ ಅಂತ್ಯವಾಯಿತು. ಕಾರಣ ಇಷ್ಟೇ ಇಡೀ ಪ್ರಪಂಚವನ್ನೇ ಒಮ್ಮೆಲೆ ಬೆದರಿಸಿದ ಕೋವಿಡ್ ವೈರಸ್ ಈ ಒಂದು ಹಿನ್ನೆಲೆಯಲ್ಲಿ ನಮಗೆ ಆರೋಗ್ಯವು ಬಹಳ ಮುಖ್ಯ ಆದ ಕಾರಣ ಆರೋಗ್ಯದ ಮುಂದೆ ಬೇರೆ ಏನೂ ಇಲ್ಲ. ಹಾಗಾಗಿ ನೂತನ ವರುಷದ ಒಂದು ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸುವಂತಹ ಅಗತ್ಯ ನಮಗೆ ಇಲ್ಲ. ದಿನನಿತ್ಯ ಮಹಾಮಾರಿ ವೈರಸ್ ಗೆ ಬಲಿಯಾಗುತ್ತಿರುವ ಜನರ ನೋವು-ನಲಿವುಗಳನ್ನು ನೋಡಿದರೆ ಮನಸ್ಸಿಗೆ ದುಃಖಮಯ ಹಾಗಾಗಿ ನೂತನ ವರ್ಷವನ್ನು ಸ್ವಾಗತಿಸುವುದು ಸರಳ ಸಾಮಾನ್ಯವಾಗಿದ್ದರೆ ನಮ್ಮ ಆರೋಗ್ಯವನ್ನು ಇಷ್ಟು ದಿನಗಳವರೆಗೆ ಕಾಪಾಡಿಕೊಂಡ ಹಾಗೆ ಮುನ್ನಡೆಯಲು ಸಾಧ್ಯ. ಇಲ್ಲವಾದಲ್ಲಿ ನಮಗೆ ನಾವೇ ಅಪಾಯವನ್ನು ಮಡಿಲಲ್ಲಿ ಇಟ್ಟುಕೊಂಡಂತಾಗುತ್ತದೆ.

ಹೊಸ ವರುಷ ಎಂದರೆ ಎಲ್ಲರಿಗೂ ಸಹ ಮನೆಯ ಆಚೆ ಎಲ್ಲೋ ಮಾದಕ ವಸ್ತುಗಳನ್ನು ಸೇವನೆ ಮಾಡಿ ಸುದಿನವನ್ನು ತಮಗೆ ಮನಬಂದಂತೆ ಅನುಭವಿಸುತ್ತಾರೆ. ಇವುಗಳಿಗೆ ಎಡೆ ಮಾಡಿಕೊಡದೆ ನೂತನ ದಿವಸವನ್ನು ನಾವು ಮಾಡಿದಂತಹ ತಪ್ಪುಗಳನ್ನು  ಮರೆತು ಒಳ್ಳೆಯ ಮನುಷ್ಯರಾಗಿ ಇತರರಿಗೆ ಮಾರ್ಗದರ್ಶಕರಾಗಿ ಬೆಳವಣಿಗೆಯನ್ನು ಮಾಡಿಕೊಳ್ಳುವುದು ಬಹಳ ಸಂತಸಕರ ವಾದಂತಹ ಸಂಗತಿಯಾಗಿರುತ್ತದೆ.

ಇದರ ಜೊತೆಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜದಲ್ಲಿ ನಮ್ಮ ಪಾತ್ರವೂ ಸಹ ಬಹಳ ಮುಖ್ಯ. ಹಾಗಾಗಿ ನೂತನ ವರುಷವನ್ನು ಕೇವಲ ಕ್ಷಣಿಕ ಆಸೆ-ಆಕಾಂಕ್ಷೆಗಳಿಗೆ ತಮ್ಮನ್ನು ತಾವು ಬಲಿಪಶು ಮಾಡಿಕೊಳ್ಳದೆ ಕೋವಿಡ್ ಕಾಲದಲ್ಲಿ ಕಲಿತಂತಹ ಪಾಠವನ್ನು ಯೋಚಿಸಿ ಆ ಗಳಿಗೆಯಲ್ಲಿ ಅನುಭವಿಸಿದಂತಹ ಕಠೋರ ದಿನಗಳಿಗೆ ಅಂತ್ಯಹಾಡಿ ನೂತನ ವರ್ಷದ ಆರಂಭದ ದಿನವನ್ನು ಹೊಸ ಮನುಷ್ಯರಾಗಿ ಉತ್ತಮ ಪ್ರಜೆಯಾಗಿ ಬೆಳವಣಿಗೆಯ ಹಾದಿಯನ್ನು ಕಂಡುಕೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ.

ನೂತನ ವರ್ಷವನ್ನು ಹಿಂದಿನ ವರುಷದಲ್ಲಿ ಸ್ವಾಗತಿಸಿದ ಹಾಗೆ ಈ ವರ್ಷವೂ ಸ್ವಾಗತಿಸಲು ಸಾಧ್ಯವಾಗುವುದಿಲ್ಲ ಆದರೂ  ಸಹ  ಎಲ್ಲರಿಗೂ ನೂತನ ದಿನ  ಸಂತೋಷಕರವಾದ ದಿನ ಹಾಗಾಗಿ ತಮ್ಮ ಆರೋಗ್ಯದ ಕಡೆಯೂ ಗಮನಹರಿಸಿ  ಬಹಳ ಜಾಗರೂಕತೆಯಿಂದ ಆಚರಣೆ ಮಾಡಬೇಕು. ಸರಿಯಾದ ರೀತಿಯಲ್ಲಿ ಮುಖಗವಸು (ಮಾಸ್ಕ್) ಧರಿಸಿಕೊಂಡು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೂತನ ವರ್ಷವನ್ನು ಬರಮಾಡಿಕೊಳ್ಳುಬೇಕು ಯುವಜನತೆ ತಮ್ಮ ಹಾಗೂ ಕುಟುಂಬದ ಆರೋಗ್ಯಕ್ಕಾಗಿ ಎಲ್ಲಾ ರೀತಿಯ ಮೋಜು-ಮಸ್ತಿಗಳನ್ನು ಮರೆತು  ಒಳ್ಳೆಯ ಕಾರ್ಯಗಳನ್ನು ಮಾಡುವುದರ ಮೂಲಕ ನೂತನ ವರುಷವನ್ನು ಬರಮಾಡಿಕೊಳ್ಳುವುದು ಸರಿ.

ಮತ್ತೊಮ್ಮೆ ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು…

ಉಲ್ಲಾಸ್ ಎನ್.ಎಂ. ನಾಗವಳ್ಳಿ

 ಪತ್ರಿಕೋದ್ಯಮ ವಿದ್ಯಾರ್ಥಿ

 ಮಾನಸಗಂಗೋತ್ರಿ, ಮೈಸೂರು.

ಟಾಪ್ ನ್ಯೂಸ್

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

HDK

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಗಿದ ವರ್ಷ; ಮುಗಿಯದ ಆತಂಕ

ಮುಗಿದ ವರ್ಷ; ಮುಗಿಯದ ಆತಂಕ

ಸದಾಶಯದ ನಲ್ನುಡಿ ಹೊಸತಿಗೆ ಮುನ್ನುಡಿ

ಸದಾಶಯದ ನಲ್ನುಡಿ ಹೊಸತಿಗೆ ಮುನ್ನುಡಿ

Untitled-1

ಹಿನ್ನೋಟ: 2021 ರಲ್ಲಿ ಓದುಗರ ಮನ ಗೆದ್ದ ಕನ್ನಡ ಕೃತಿಗಳು

2021ರ ಹಿನ್ನೋಟ: ದೇಶದ ಪ್ರಮುಖ ಘಟನಾವಳಿ-ಲಕ್ಷದ್ವೀಪ ವಿವಾದ, ರಾವತ್ ದುರಂತ, ಹಿಂಸಾಚಾರ

2021ರ ಹಿನ್ನೋಟ: ದೇಶದ ಪ್ರಮುಖ ಘಟನಾವಳಿ-ಲಕ್ಷದ್ವೀಪ ವಿವಾದ, ರಾವತ್ ದುರಂತ, ಹಿಂಸಾಚಾರ

sports in 2021

2021: ಕ್ರೀಡಾಲೋಕದ ಮಹತ್ವದ ಘಟನೆಗಳ ಹಿನ್ನೋಟ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

12-sadsad

Davanagere ವೃದ್ಧರೊಬ್ಬನ್ನು ಅಪಹರಿಸಿ ಭಾರಿ ಹಣಕ್ಕೆ ಬೇಡಿಕೆ; ಐವರ ಬಂಧನ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ