3 ಸಾವಿರ ಕೋಟಿ ರೂ. ಹೂಡಿಕೆ ಹಿಂಪಡೆದ ಹೂಡಿಕೆದಾರರು

Team Udayavani, Oct 7, 2019, 5:06 AM IST

ಹೊಸದಿಲ್ಲಿ: ಹಾಲಿ ತಿಂಗಳ ಆರಂಭ ದಲ್ಲಿಯೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಪಿಐ) 3 ಸಾವಿರ ಕೋಟಿ ರೂ. ಮೌಲ್ಯದಷ್ಟು ಷೇರುಗಳಿಂದ ಹೂಡಿಕೆ ಹಿಂಪಡೆದು ಕೊಂಡಿದ್ದಾರೆ. ಅರ್ಥ ವ್ಯವಸ್ಥೆಯ ಮೇಲೆ ಹಿಂಜರಿತದ ಛಾಯೆ ಇದೆ ಎಂಬ ವಾದ ಮತ್ತು ಅಮೆರಿಕ-ಚೀನ ನಡುವಿನ ಸುಂಕ ಸಮರದ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳು 7,850 ಕೋಟಿ ರೂ. ಮೌಲ್ಯದಷ್ಟು ಹೂಡಿಕೆ ಬಂದಿರು ವಂತೆಯೇ ಹೂಡಿಕೆ ಹಿಂಪಡೆ ಯಲಾಗಿದೆ. ಹೂಡಿಕೆ ಸಂಬಂಧಿಸಿದ ಮಾಹಿತಿಯ ಅನ್ವಯ 2,947 ಕೋಟಿ ರೂ.ಗಳಷ್ಟು ಮೊತ್ತ ಈಕ್ವಿಟಿ ವಿಭಾಗದಿಂದ ಮತ್ತು 977 ಕೋಟಿ ರೂ. ಮೊತ್ತ ಡೆಟ್‌ ವಿಭಾಗದಿಂದ ಹಿಂಪಡೆಯಲಾಗಿದೆ. ಅ.1-4ರ ನಡುವಿನ ಮಾರುಕಟ್ಟೆ ವಹಿವಾಟಿನ ವಿವರದಿಂದ ಈ ಅಂಶ ಗೊತ್ತಾಗಿದೆ. ಈ ಪೈಕಿ ಅ.2 ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಷೇರು ಪೇಟೆ ವಹಿವಾಟು ನಡೆದಿರಲಿಲ್ಲ. ಸೆಪ್ಟಂಬರ್‌ ತಿಂಗಳ ಕೊನೆಯ ವಾರದಲ್ಲಿ ಕೇಂದ್ರ ಸರಕಾರ ಕಾರ್ಪೊರೇಟ್‌ ತೆರಿಗೆ ಪ್ರಮಾಣ ಇಳಿಕೆ ಮಾಡಿತ್ತು. ಜತೆಗೆ ಶುಕ್ರವಾರ ಆರ್‌ಬಿಐ ರೆಪೊ ದರ ಇಳಿಕೆ ಮಾಡಿದ್ದರ ಹೊರತಾಗಿಯೂ ಹೂಡಿಕೆ ಪ್ರಮಾಣ ಹೆಚ್ಚುವ ಸಾಧ್ಯತೆ ಬಗ್ಗೆ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ಕಂಪೆನಿಗಳ ಮುಂದಿನ ತ್ತೈಮಾಸಿಕ ವರದಿ ಪ್ರಕಟ ಗೊಳ್ಳಲಿದ್ದು, ಅದರಲ್ಲಿ ಆಶಾದಾಯಕ ಫ‌ಲಿತಾಂಶ ಬರಲಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ