ಜಗತ್ತಿನ ಮೊದಲ ಶ್ರೀಮತಗಿರಿ ಈಗ ಬರ್ನಾರ್ಡ್ ಅರ್ನಾಲ್ಟ್ ಪಾಲಿಗೆ..!
Team Udayavani, Aug 6, 2021, 10:34 AM IST
ತಂತ್ರಜ್ಞಾನ ದೈತ್ಯ ಸಂಸ್ಥೆ ಟೆಸ್ಲಾದ ಅಧ್ಯಕ್ಷ ಎಲಾನ್ ಮಸ್ಕ್ ಅವರಿಗಿಂತ ಮತ್ತೊಬ್ಬ ಶ್ರೀಮಂತ ಈಗ ಜಗತ್ತಿನಲ್ಲಿ ಕಾಣಸಿಕೊಂಡಿದ್ದಾರೆ. ಇಳಿವಯಸ್ಸಿನಲ್ಲಿ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಹೌದು, ಈಗ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವವರು ಫ್ಯಾಷನ್ ಟೈಕೂನ್ ಆದ ಬರ್ನಾರ್ಡ್ ಅರ್ನಾಲ್ಟ್. ಫೋರ್ಬ್ಸ್ನ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಅರ್ನಾಲ್ಟ್ ನಿವ್ವಳ ಆಸ್ತಿ ಮೌಲ್ಯ ಗುರುವಾರ 19,910 ಕೋಟಿ ಅಮೆರಿಕನ್ ಡಾಲರ್ ಇತ್ತು. ಈ ಮಧ್ಯೆ ಬೆಜೋಸ್ ರಿಯಲ್ ಟೈಮ್ ನಿವ್ವಳ ಆಸ್ತಿ ಮೌಲ್ಯ 19,380 ಕೋಟಿ ಅಮೆರಿಕನ್ ಡಾಲರ್ ಇದ್ದರೆ, ಎಲಾನ್ ಮಸ್ಕ್ ನಿವ್ವಳ ಆಸ್ತಿ ಮೌಲ್ಯ 18,470 ಕೋಟಿ ಯುಎಸ್ಡಿ ಇದಿತ್ತು.
ಇದನ್ನೂ ಓದಿ : ಮಾತು ಮುಗಿಸಿದ ‘ಬೈರಾಗಿ’: ಅಭಿಮಾನಿಗಳ ಗಮನ ಸೆಳೆದ ಟೈಟಲ್ ಮತ್ತು ಗೆಟಪ್
ಬರ್ನಾರ್ಡ್ ಅರ್ನಾಲ್ಟ್ ಗೆ ಈಗ 72 ವರ್ಷ. ನಿವೃತ್ತಿಯ ವಯಸ್ಸನ್ನೂ ದಾಟಿದ ಮೇಲೂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಜಗತ್ತಿನ ಕಣ್ಣುಗಳನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಸದ್ಯ, ಅರ್ನಾಲ್ಟ್ ವಿಶ್ವದ ಪ್ರಮುಖ ಫ್ಯಾಷನ್ ಕಂಪೆನಿಯೊಂದರ ಮುಖ್ಯ ಹುದ್ದೆಯಲ್ಲಿದ್ದಾರೆ.
ಎಲ್ ವಿ ಎಮ್ ಎಚ್ ಮೊಯೆಟ್ ಹೆನಿಸ್ಸಿ ಲೂಯಿಸ್ ವ್ಯೂಟನ್ ಎಂಬ ವಿಲಾಸಿ ವಸ್ತುಗಳ ಮಾರಾಟದ ಮುಂಚೂಣಿಯಲ್ಲಿರುವ ಕಂಪೆನಿಯನ್ನು ಈ 72 ವರ್ಷದ ಮುದಕ ಬಿಲಿಯನೇರ್ ಮುನ್ನಡೆಸುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ.
ಸಂಸ್ಥೆ ಜಗತ್ತಿನ ಪ್ರಮುಖ ಬ್ರ್ಯಾಂಡ್ ಗಳಾದ ಲೂಯಿಸ್ ವ್ಯೂಟನ್, ಮೊಯಿಟ್, ಫೆಂಡಿ, ಕ್ರಿಶ್ಚಿಯನ್ ಡಿಯಾರ್, ಗಿವೆಂಚಿ ಮತ್ತು ಸೆಫೊರಾ ಗಳನ್ನೊಳಗೊಂಡು ಸುಮಾರು 70 ಬ್ರ್ಯಾ0ಡ್ ಗಳನ್ನು ನೋಡಿಕೊಳ್ಳುತ್ತಿದೆ.
ಇದನ್ನೂ ಓದಿ : ಯಾವಾಗ ಗುರು ನಮ್ ಬಾಸ್ ಸಿನ್ಮಾ? ಫ್ಯಾನ್ಸ್ ಪ್ರಶ್ನೆಗೆ ಉತ್ತರಿಸೋದೇ ನಿರ್ಮಾಪಕರಿಗೆ ಸವಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ