Udayavni Special

ಬಂದರು ಗುತ್ತಿಗೆ : ಮ್ಯಾನ್ಮಾರ್ ಜೊತೆ ಅದಾನಿ ಗ್ರೂಪ್ ನಿಂದ 30 ಮಿಲಿಯನ್ ಡಾಲರ್ ಒಪ್ಪಂದ


Team Udayavani, Mar 31, 2021, 2:09 PM IST

Adani Group is paying $30 million to Myanmar military-controlled firm for port deal, alleges report

ನವ ದೆಹಲಿ :  ಫೆಬ್ರವರಿ 1 ರ ದಂಗೆಯ ನಂತರ, ಮ್ಯಾನ್ಮಾರ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಕಂಪನಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ಮತ್ತು ಪ್ರತಿಭಟನಾಕಾರರ  ಮೇಲೆ ಹಿಂಸಾತ್ಮಕವಾಗಿ ದಬ್ಬಾಳಿಕೆ ನಡೆಸುತ್ತಿದ್ದಂತೆ, ಭಾರತ ಮೂಲದ ಅದಾನಿ ಗ್ರೂಪ್ ಮಿಲಿಟರಿ ಸಂಘಟಿತ ಮ್ಯಾನ್ಮಾರ್ ಎಕನಾಮಿಕ್ ಕಾರ್ಪೊರೇಶನ್‌ ನೊಂದಿಗಿನ ಗುತ್ತಿಗೆ ಒಪ್ಪಂದದ ಮೂಲಕ ಮುಖ್ಯ ನಗರ ಯಾಂಗೊನ್‌ ನಲ್ಲಿ ಬಂದರು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಯಾಂಗೊನ್  ರೀಜನ್ ಇನ್ವೆಸ್ಟ್ ಮೆಂಟ್ ಕಮಿಷನ್ ನಿಂದ ಬಹಿರಂಗಗೊಂಡ ದಾಖಲೆಗಳ ಪ್ರಕಾರ,  ಅದಾನಿ ಗ್ರೂಪ್ ಮ್ಯಾನ್ಮಾರ್ ಎಕನಾಮಿಕ್ ಕಾರ್ಪೊರೇಶನ್‌ ಗೆ “ಭೂ ಗುತ್ತಿಗೆ ಶುಲ್ಕ/land Lease fees” ದಲ್ಲಿ  30 ಮಿಲಿಯನ್ ಡಾಲರ್ ಪಾವತಿಸುತ್ತಿದೆ ಎಂದು ಎಬಿಸಿ ನ್ಯೂಸ್  ತಿಳಿಸಿದೆ‌.

ಓದಿ :    ಬಿಜೆಪಿ ನಾಯಕನಿಗೆ ಕರೆ ಮಾಡಿದ ಮಮತಾ ಆಡಿಯೋ ವೈರಲ್ ..!

ಇನ್ನು, ಮಿಲಿಟರಿ ನಾಯತ್ವದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅದಾನಿ ಗ್ರೂಪ್, ಮಿಲಿಟರಿ ನಾಯಕತ್ವದೊಂದಿಗೆ ವೈಯಕ್ತಿಕ ಸಂಪರ್ಕ ಹೊಂದಿದ್ದೇವೆ ಎಂಬ ವಿಚಾರಗಳನ್ನು ನಿರಾಕರಿಸುತ್ತೇವೆ” ಎಂದು ಹೇಳಿಕೆ ನೀಡಿದೆ‌.

ಹೇಗಾದರೂ, ಎಬಿಸಿಗೆ ಲಭ್ಯವಾದ ವೀಡಿಯೊಗಳು ಮತ್ತು ಫೋಟೋಗಳು ಅದಾನಿ ಗ್ರೂಪ್ ನ ಬಂದರುಗಳ ಅಭಿವೃದ್ಧಿ ಕಾರ್ಯದ ಮುಖ್ಯ ಕಾರ್ಯನಿರ್ವಾಹಕ ಕರಣ್ ಅದಾನಿ ಅವರು ಜುಲೈ 2019 ರಲ್ಲಿ ಚುನಾಯಿತ ಸರ್ಕಾರದ ವಿರುದ್ಧ ದಂಗೆಯನ್ನು ಮುನ್ನಡೆಸಿದ್ದ ಸೇನಾ ಮುಖ್ಯಸ್ಥ ಹಿರಿಯ ಜನರಲ್ ಮಿನ್ ಆಂಗ್ ಹ್ಲೇಂಗ್ ಅವರನ್ನು ಭೇಟಿಯಾಗಿದ್ದರು ಎಂದು ಬಹಿರಂಗಪಡಿಸುತ್ತದೆ.

2017 ರಲ್ಲಿ ನಿರಾಶ್ರಿತರ ಬಿಕ್ಕಟ್ಟನ್ನು ಹುಟ್ಟುಹಾಕಿದ ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಹಾಗೂ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಹ್ಲೇಂಗ್ ಸೇರಿದಂತೆ ಕೆಲವು ಜನರಲ್‌ ಗಳು ಯುನೈಟೆಡ್ ಸ್ಟೇಟ್ಸ್ ಮಾನವ ಹಕ್ಕುಗಳ ನಿರ್ಬಂಧದಲ್ಲಿದ್ದರು ಎನ್ನುವುದು ವರದಿ ತಿಳಿಸಿದೆ.

ಓದಿ :  ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ಡಾ.ಸುಧಾಕರ್ ಭೇಟಿ : ವ್ಯವಸ್ಥೆ ಕುರಿತು ಮೆಚ್ಚುಗೆ

ಟಾಪ್ ನ್ಯೂಸ್

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಆದ್ಯತೆ ಬೇಕು

ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಆದ್ಯತೆ ಬೇಕು

ರಾಜ್ಯದಲ್ಲಿ ಅ. 21ರಿಂದ ಭಾರೀ ಮಳೆ?

ರಾಜ್ಯದಲ್ಲಿ ಅಕ್ಟೋಬರ್ 21 ರಿಂದ ಭಾರೀ ಮಳೆ?

ದೇಶಿ ತಳಿಗಳ ಅಭಿವೃದ್ಧಿಗೆ ಅಮೃತ ಸಿರಿ, ಅಮೃತ ಧಾರಾ

ದೇಶಿ ತಳಿಗಳ ಅಭಿವೃದ್ಧಿಗೆ ಅಮೃತ ಸಿರಿ, ಅಮೃತ ಧಾರಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭರ್ಜರಿ ಲಾಭ: 62 ಸಾವಿರ ಗಡಿ ಸಮೀಪಿಸಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ದಾಖಲೆ

ಭರ್ಜರಿ ಲಾಭ: 62 ಸಾವಿರ ಗಡಿ ಸಮೀಪಿಸಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ದಾಖಲೆ

ELECRIC CARS

ಶೀಘ್ರದಲ್ಲೇ ಅತ್ಯಾಧುನಿಕ ವಿನ್ಯಾಸದ ಎಲೆಕ್ಟ್ರಿಕ್ ವಾಹನ ಬಿಡುಗಡೆ: ಹೋಂಡಾ

ವೈಮಾನಿಕ ಇಂಧನಕ್ಕಿಂತಲೂ ಪೆಟ್ರೋಲ್‌-ಡೀಸೆಲ್‌ ದುಬಾರಿ!

ವೈಮಾನಿಕ ಇಂಧನಕ್ಕಿಂತಲೂ ಪೆಟ್ರೋಲ್‌-ಡೀಸೆಲ್‌ ದುಬಾರಿ!

ಹಣಕಾಸು ಸಚಿವಾಲಯ ಸರ್ಕಾರಿ ಆಸ್ತಿಗಳ ಮೋನಿಟೈಷೇಶನ್ ಗಾಗಿ ಕ್ಯಾಬಿನೆಟ್‌ ಅನುಮೋದನೆ ಪಡೆಯಲಿದೆ

ಸಿಪಿಎಸ್‌ಇ ಒಡೆತನದ ಭೂಮಿ: ಹಣಕಾಸು ಸಚಿವಾಲಯದಿಂದ ಹೊಸ ಚಿಂತನೆ

ಇದು 14ನೇ ಬಾರಿಯ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ 111.09 ರೂ.

ಇದು 14ನೇ ಬಾರಿಯ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ 111.09 ರೂ.

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಲಸಿಕೆ ಪಡೆಯದ ಬಾಲಿವುಡ್‌ ನಟಿ ಪೂಜಾ ಬೇಡಿಗೆ ಕೋವಿಡ್ ದೃಢ

ಲಸಿಕೆ ಪಡೆಯದ ಬಾಲಿವುಡ್‌ ನಟಿ ಪೂಜಾ ಬೇಡಿಗೆ ಕೋವಿಡ್ ದೃಢ

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.