ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Team Udayavani, Dec 6, 2020, 6:10 AM IST

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಸಾಂದರ್ಭಿಕ ಚಿತ್ರ

ಉಳಿತಾಯ ಅರ್ಥಪೂರ್ಣ. ಹಣ ವನ್ನು ಸಂಪಾದಿಸಲು ಆರಂಭಿಸಿದಾಗ ನಾವು ಉಳಿತಾಯಕ್ಕೆ ಮಹತ್ವ ಕೊಡುತ್ತೇವೆ. ನಾವು ಅಪೇಕ್ಷಿಸುವ ಖಾತರಿ, ಭರವಸೆ, ಭದ್ರತೆಗಳೆಲ್ಲವೂ ನಮ್ಮ ಉಳಿತಾಯದ ಹಣದಿಂದ ಸಿಗುತ್ತದೆ ಎಂದು ಭಾವಿಸುತ್ತೇವೆ. ನಿಜ. ಆದರೆ ಉಳಿತಾಯ ಮಾಡಿದ್ದನ್ನು ಸಮರ್ಪಕವಾಗಿ ಹೂಡಿಕೆ ಮಾಡುವುದರಲ್ಲಿ ಸಾಕಷ್ಟು ಮಂದಿ ವಿಫ‌ಲರಾಗುತ್ತಾರೆ. ಹಾಗಾದರೆ ಉಳಿತಾಯಗಾರರಿಂದ ಹೂಡಿಕೆದಾರರಾಗುವುದು ಹೇಗೆ?

ಆಸ್ತಿಯನ್ನು ಆರ್ಥಿಕ ಮೌಲ್ಯದಿಂದ ನೋಡಿ ಉಳಿತಾಯ ಮಾಡಿದವರು ಸಂಪತ್ತನ್ನು ಹೊಂದುವುದರೊಂದಿಗೆ, ತಮ್ಮ ಸಂಪಾದನೆ ಬಹು ಅಮೂಲ್ಯ ವಾದದ್ದು ಎಂದು ಭಾವಿಸುತ್ತಾರೆ. ಅವರು ಚಿನ್ನಕ್ಕೆ ಆದ್ಯತೆ ಕೊಡುತ್ತಾರೆ. ಇದು ಕಾಲಕ್ರಮೇಣ ಬೆಲೆ ಹೆಚ್ಚಿಸಿಕೊಳ್ಳುತ್ತದೆ ಎಂಬ ನಂಬಿಕೆ ಅವರದ್ದು. 25 ವರ್ಷಗಳ ಹಿಂದೆ 50 ಸಾವಿರ ರೂ.ಗೆ ಖರೀದಿಸಿದ್ದ ಬಂಗಾರ ಇವತ್ತು 20 ಲಕ್ಷ ರೂ. ಬೆಲೆ ಬಾಳುವುದನ್ನು ಕಂಡು ಸಂಭ್ರಮ ಪಡುವವರಿದ್ದಾರೆ. ಹೂಡಿಕೆದಾರರಿಗೆ ಇದು ವಾರ್ಷಿಕ ಶೇ.16ರ ಸರಾಸರಿ ದರದಲ್ಲಿ ಬೆಳೆದ ಹೂಡಿಕೆಯ ಒಟ್ಟು ಮೊತ್ತ. ಆದರೆ ಮೌಲ್ಯವನ್ನು ಗಮನಿಸಿದರೆ ಇದು ಕಡಿಮೆಯೇ. ಆದ್ದರಿಂದ ಹೂಡಿಕೆದಾರರಾಗಿ ಬದಲಾಗಬೇಕಿದ್ದರೆ ಆಸ್ತಿಯನ್ನು ಆರ್ಥಿಕ ಮೌಲ್ಯದಿಂದ ನೋಡಬೇಕು. ಅಂಥ ಮನಃಸ್ಥಿತಿಯಲ್ಲಿ ಮೌಲ್ಯವನ್ನು ಅರಿತು ಯೋಜನೆ ಹಾಕಿಕೊಳ್ಳಲು ಸಾಧ್ಯವಾಗುತ್ತದೆ.

ಹೂಡಿಕೆ ಹೇಗೆ ಬಳಕೆಯಾಗುತ್ತದೆ ಎಂಬ ಅರಿವಿರಲಿ ಉಳಿತಾಯಗಾರರು ಕೇವಲ ಸಿಗುವ ಆದಾಯದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆಶ್ವಾಸನೆಗಳನ್ನು ನಂಬಿ ಹಣ ಹೂಡಬಾರದು. ಉಳಿತಾಯಗಾರರು ತಮ್ಮ ಹೂಡಿಕೆ ಹೇಗೆ ಬಳಕೆಯಾಗುತ್ತದೆ ಎಂಬು ದನ್ನು ತಿಳಿದಿರಬೇಕು. ಯಾರು ಹಣವನ್ನು ವಿನಿಯೋಗಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ ಹಾಗೂ ಹೂಡಿಕೆ ಎಂದರೆ ನಮ್ಮ ಹಣವನ್ನು ಮತ್ತೂಬ್ಬರು ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು.

ಹೂಡಿಕೆ ಮೊತ್ತ ದುಪ್ಪಟ್ಟು ಮಾಡೋಣ
ಉಳಿತಾಯ ಮಾಡುವವರು ಹಣಕಾಸು ಲೆಕ್ಕಾಚಾರದಲ್ಲಿ ವಿಫ‌ಲರಾಗುತ್ತಾರೆ. ಏಕೆಂದರೆ ಅವರು ತಮ್ಮ ಸಂಪತ್ತಿನ ಬೆಳವಣಿಗೆ ಗಿಂತ ಸಂರಕ್ಷಣೆಗೆ ಆದ್ಯತೆ ನೀಡುತ್ತಾರೆ. ಪ್ರತಿಯೊಂದು ರೂ. ಕೂಡ ಪ್ರತೀ ದಿನ ಬಡ್ಡಿ ಗಳಿಸುತ್ತದೆ ಎಂಬ ಸೂಕ್ಷ್ಮ ಸಂವೇದನೆಯನ್ನು ಅವರು ಕಳೆದುಕೊಂಡಿರುತ್ತಾರೆ. ಅನುತ್ಪಾದಕ ಆಸ್ತಿಗಳಲ್ಲಿ ಅವರ ಸಂಪತ್ತು ಇರುತ್ತದೆ. ಉಳಿತಾಯಗಾರರು ಬ್ಯಾಂಕ್‌ ಖಾತೆಗಳಲ್ಲಿ ಹಣ ಇಡುವುದು ಸಾಮಾನ್ಯ. ಹೂಡಿಕೆದಾರರು ಹಾಗಲ್ಲ, ಅವರು ತಮ್ಮ ಬಂಡವಾಳವನ್ನು ಚೆನ್ನಾಗಿ ದುಡಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾರೆ. ಎಲ್ಲ ಹೂಡಿಕೆಗಳು ದೀರ್ಘ‌ಕಾಲಿಕವಾಗಿ ಇರಬೇಕೆಂದೇನಿಲ್ಲ ಎಂಬುದು ಅವರಿಗೆ ಗೊತ್ತಿರುತ್ತದೆ. ತಮ್ಮ ಹೂಡಿಕೆ ಉತ್ತಮ ಮಟ್ಟದಲ್ಲಿ ಆದಾಯ ಕೊಡಬೇಕು, ಅದಕ್ಕಾಗಿ ಏನು ಮಾಡಬೇಕು ಎಂದು ಹೂಡಿಕೆದಾರರು ಯೋಚಿಸುತ್ತಾರೆ.

ಏರಿಳಿತಗಳನ್ನು ನಿಭಾಯಿಸಿ
ಬದುಕಿನಲ್ಲಿ ಆಗುವಂತೆ ಹೂಡಿಕೆಯ ವಿಚಾರ ದಲ್ಲೂ ಕೆಲವು ಸಲ ಏರಿಳಿತ ಆಗುತ್ತದೆ. ಅದನ್ನು ನಿಭಾಯಿಸಲು ಕಲಿಯಬೇಕು. ಉಳಿತಾಯಗಾರರು ಎಲ್ಲಿ ದಾರಿ ತಪ್ಪುತ್ತೇವೆಯೋ ಎಂಬ ಆತಂಕದಲ್ಲಿ ಇರುತ್ತಾರೆ. ಹೀಗಾಗಿ ಸೇವೆ ಒದಗಿಸುವವರಿಂದ ಅವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಹೂಡಿಕೆದಾರರು ತಮ್ಮ ಹೂಡಿಕೆಯ ಆಯ್ಕೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಉತ್ಸುಕರಾಗಿರುತ್ತಾರೆ. ಮತ್ತು ತಮಗೆ ತಾವೇ ಜವಾಬ್ದಾರರಾಗಿರುತ್ತಾರೆ.

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.