ಬಂದಿದೆ ಹೊಸ ಬೆನೆಲ್ಲಿ ಲಿಯಾನ್ಸಿನೊ 250

ಸ್ಟ್ರ್ಯಾಂಬ್ಲಿರ್‌ ಮಾದರಿ ಬೈಕು

Team Udayavani, Oct 8, 2019, 7:19 PM IST

ಹೊಸದಿಲ್ಲಿ: ಸ್ಟ್ರ್ಯಾಂಬ್ಲಿರ್‌ ಮಾದರಿಯ ಬೈಕ್‌ಗೆ ಯುವಕರು ಹೆಚ್ಚೆಚ್ಚು ಅಪೇಕ್ಷೆ ಪಡುತ್ತಿರುವಂತೆಯೇ ಪ್ರಸಿದ್ಧ ಬೈಕು ತಯಾರಿಕಾ ಕಂಪೆನಿ ಬೆನೆಲ್ಲಿ ಹೊಸ ಸ್ಟ್ರ್ಯಾಂಬ್ಲಿರ್‌ ಮಾದರಿಯ ಲಿಯಾನ್ಸಿನೋ 250 ಹೆಸರಿನ ಬೈಕನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

249ಸಿಸಿಯ ಈ ಬೈಕು 25.8 ಎಚ್‌ಪಿಯ ಶಕ್ತಿ ಮತ್ತು 21 ಎನ್‌ಎಂ ಟಾರ್ಕ್‌ ಉತ್ಪಾದಿಸುತ್ತದೆ. ಹಿಂಭಾಗ ಮೋನೋಕ್‌ ಮತ್ತು ಮುಂಭಾಗ ಅಪ್‌ಸೆçಡ್‌ ಆ್ಯಂಡ್‌ ಡೌನ್‌ ಶಾಕ್ಸ್‌ಗಳನ್ನು ಹೊಂದಿದೆ. ಡಿಜಿಟಲ್‌ ಮೀಟರ್‌, ಸಂಪೂರ್ಣ ಡಿಜಿಟಲ್‌ ಲೈಟುಗಳು, ಮುಂಭಾಗ ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ಗ್ಳು ಇದರ ಪ್ಲಸ್‌ ಪಾಯಿಂಟ್‌. ಇದರೊಂದಿಗೆ ಮುಂಭಾಗ 280 ಎಂ.ಎಂ.ನ ಡಿಸ್ಕ್ ಮತ್ತು ಹಿಂಭಾಗ 240 ಎನ್‌ಎಂನ ಡಿಸ್ಕ್ ಹೊಂದಿದೆ. 110/70 ಆರ್‌ 17 ಮುಂಭಾಗದ ಟಯರ್‌ ಮತ್ತು 150/60 ಆರ್‌ 17 ಹಿಂಭಾಗದ ಟಯರ್‌ ಹೊಂದಿದೆ.

ಮೂರು ವರ್ಷ ಅಥವಾ ಅನಿಯಮಿತ ಕಿ.ಮೀ. ವಾರೆಂಟಿ ನೀಡುವುದಾಗಿ ಕಂಪೆನಿ ಹೇಳಿಕೊಂಡಿದೆ. ಟೋಕನ್‌ ಅಡ್ವಾನ್ಸ್‌ 6 ಸಾವಿರ ರೂ. ನಿಗದಿ ಪಡಿಸಲಾಗಿದೆ. ಬೈಕ್‌ನ ಬೆಲೆ ದಿಲ್ಲಿಯಲ್ಲಿ ಎಕ್ಸ್‌ಷೋರೂಂ 2.5 ಲಕ್ಷ ರೂ. ನಿಗದಿಪಡಿಸಲಾಗಿದೆ.

ಏನಿದು ಸ್ಟ್ರ್ಯಾಂಬ್ಲಿರ್‌ ಬೈಕು?
ಪೆಟ್ಟಿಗೆಯಲ್ಲಿ ಹಿಡಿಯುವಂಥದ್ದು ಎನ್ನುವ ಅರ್ಥ. ನಿಜವಾಗಿ ಇದು ಸೂಪರ್‌ ಬೈಕ್‌ಗಳಿಗಿಂತ ತುಸು ಸಣ್ಣದಾಗಿರುತ್ತವೆ. ಆದರೆ ಇವುಗಳಲ್ಲಿ ಶಕ್ತಿಶಾಲಿ ಎಂಜಿನ್‌ ಇರುತ್ತದೆ. 60, 70ರ ದಶಕದಲ್ಲಿ ಅಮೆರಿಕದಲ್ಲಿ ಇವುಗಳು ಅತಿ ಪ್ರಚಾರ ಪಡೆದಿದ್ದವು. ಇಂತಹ ಬೈಕ್‌ಗಳು ನಗರದ ಚಾಲನೆ ಮತ್ತು ಆಫ್ರೋಡಿಂಗ್‌ಗೆ ಹೆಸರುವಾಸಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ