
ಎಸ್ ಬಿ ಐ ಗ್ರಾಹಕರು ಈ ಕೆಲಸಕ್ಕಾಗಿ ಬ್ಯಾಂಕ್ ಗೆ ಹೋಗಬೇಕೆಂದಿಲ್ಲ..! ಮಾಹಿತಿ ಇಲ್ಲಿದೆ.
Team Udayavani, May 3, 2021, 4:12 PM IST

ನವ ದೆಹಲಿ : ದೇಶದ ಅತಿದೊಡ್ಡ ನಾಗರಿಕ ಬ್ಯಾಂಕ್ ಎಸ್ ಬಿ ಐ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ 19 ನ ಕಾರಣದಿಂದಾಗಿ ಲಾಕ್ ಡೌನ್, ಹಾಫ್ ಲಾಕ್ ಡೌನ್, ನೈಟ್ ಕರ್ಫ್ಯೂ ನಂತಹ ನಿರ್ಬಂಧಗಳು ಇರುವ ಕಾರಣದಿಂದಾಗಿ ಗ್ರಾಹಕ ಸ್ನೇಹಿ ಬೆಳವಣಿಗೆಯೊಂದನ್ನು ಎಸ್ ಬಿ ಐ ಕೈಗೊಂಡಿದೆ.
ಹೌದು, ತನ್ನ ಗ್ರಾಹಕರಿಗೆ ಕೆವೈಸಿ ನವೀಕರಣಗಳನ್ನು ಪಡೆಯುವ ಪ್ರಕ್ರಿಯೆಯನ್ನು ಎಸ್ ಬಿ ಐ ಸರಳೀಕರಿಸಿದೆ. ಕೆವೈಸಿ ಅಪ್ ಡೇಟ್ ಗಳ ಕೊರತೆಯಿಂದಾಗಿ ತೊಂದರೆಗೆ ಸಿಲುಕಿದ್ದ ಎಸ್ ಬಿ ಐ ಗ್ರಾಹಕರಿಗೆ ಇದು ಸಹಿ ಸುದ್ದಿಯಾಗಿದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.
ಓದಿ : ಐಪಿಎಲ್ ಗೆ ಕೋವಿಡಾಘಾತ: ಚೆನ್ನೈ ಸೂಪರ್ ಕಿಂಗ್ಸ್ ನ ಇಬ್ಬರಿಗೆ ಕೋವಿಡ್ ಪಾಸಿಟಿವ್
ಕೆವೈಸಿ (Know Your Customer) ನವೀಕರಣಗೊಳ್ಳಲು ತನ್ನ ಗ್ರಾಹಕರಿಗೆ ಇ-ಮೇಲ್ ಅಥವಾ ಪೋಸ್ಟ್ ಮೂಲಕ ದಾಖಲೆಗಳನ್ನು ಕಳುಹಿಸಿ ಈ ಕೆಲಸವನ್ನು ಪೂರ್ಣಗೊಳಿಸಬಹುದು. ಶಾಖೆಗೆ ಹೋಗಬೇಕಾದ ಅಗತ್ಯವಿಲ್ಲ ಎಂದು ಎಸ್‌ಬಿಐ ತಿಳಿಸಿದೆ. ವಾಸ್ತವವಾಗಿ ತನ್ನ ಎಲ್ಲಾ 17 ಸ್ಥಳೀಯ ಪ್ರಧಾನ ಕಚೇರಿಗಳ ಮುಖ್ಯ ಜನರಲ್ ವ್ಯವಸ್ಥಾಪಕರೊಂದಿಗೆ ಸಂವಾದದ ನಂತರ, ಎಸ್ ಬಿ ಐ ಕೆವೈಸಿ ನವೀಕರಣವನ್ನು ಇ-ಮೇಲ್ ಅಥವಾ ಪೋಸ್ಟ್ ಮೂಲಕ ಸ್ವೀಕರಿಸುವಂತೆ ನಿರ್ದೇಶಿಸಿದೆ.
Important announcement for our customers in view of the lockdowns in place in various states. #KYCUpdation #KYC #StayStrongIndia #SBIAapkeSaath #StaySafe #StayStrong pic.twitter.com/oOGxPcZjeF
— State Bank of India (@TheOfficialSBI) May 1, 2021
ಕೆವೈಸಿ ಮಾಡುವುದು ಯಾಕೆ ಮುಖ್ಯ..?
ವಾಸ್ತವವಾಗಿ ಗ್ರಾಹಕರು ಎರಡು ವರ್ಷಗಳಲ್ಲಿ ಒಮ್ಮೆಯಾದರೂ ಕೆವೈಸಿ ನವೀಕರಣವನ್ನು ಮಾಡುವುದು ನಿಮ್ಮ ಖಾತೆ ಸುರಕ್ಷತೆಯ ದ್ರುಷ್ಟಿಯಿಂದ ಒಳ್ಳೆಯದು. ಗ್ರಾಹಕರಿಗೆ ಕೆವೈಸಿ ನವೀಕರಣ ಅಗತ್ಯವಿದೆ. ಕೋವಿಡ್ ಸೋಂಕಿನ ದೃಷ್ಟಿಯಿಂದ, ಬ್ಯಾಂಕ್ ಶಾಖೆಗಳಿಗೆ ಕೆವೈಸಿ ಅಪ್ ಡೇಟ್ ನ ಕೆಲಸವನ್ನು ಪೋಸ್ಟ್ ಮೂಲಕ ಪಡೆದ ದಾಖಲೆಗಳ ಆಧಾರದ ಮೇಲೆ ಮಾಡಲು ಕೇಳಲಾಗಿದೆ.
ಇನ್ನು, ಎಸ್ ಬಿ ಐ ಗ್ರಾಹಕರು ಸಾಕಷ್ಟು ಪ್ರಮಾಣದಲ್ಲಿ ಆನ್ ಲೈನ್ ವಂಚನೆಗೆ ಒಳಗಾಗುತ್ತಿದ್ದು, ಎಸ್ ಬಿ ಐ ಕೂಡ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದೆ. ಈಗ ಕೆವೈಸಿ ಅಪ್ ಡೇಟ್ ಮಾಡುವಾಗಲು ಎಚ್ಚರಿಕೆ ವಹಿಸಿ ಎಂದು ಕೇಳಿಕೊಂಡಿದೆ. ಮಾತ್ರವಲ್ಲದೇ, ಕಳೆದ ವರ್ಷ ಕೋವಿಡ್ ಸೋಂಕಿನ ಸಂದರ್ಭದಲ್ಲ ಎಸ್ ಬಿ ಐ ಗ್ರಾಹಕರು ಹೆಚ್ಚು ಆನ್ ಲೈನ್ ವಂಚನೆಗೆ ಒಳಗಾಗಿದ್ದು, ಈ ಬಾರಿಯೂ ವಂಚಕರು ವಂಚನೆಗೆ ಕಾರ್ಯ ತಂತ್ರ ಹೆಣೆಯ ಬಹುದು. ಎಚ್ಚರಿಕೆಯಿಂದಿರಿ ಎಂದು ತಿಳಿಸಿದೆ.
ಓದಿ : ಮೇ 3ರ ಮಧ್ಯರಾತ್ರಿಯೊಳಗೆ ದೆಹಲಿಗೆ ಆಕ್ಸಿಜನ್ ಸರಬರಾಜು ಮಾಡಿ: ಕೇಂದ್ರಕ್ಕೆ ಸುಪ್ರೀಂ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Repo Rate: ಗೃಹ, ವಾಹನ ಸಾಲದ ಇಎಂಐ ಪಾವತಿದಾರರಿಗೆ ಸಿಹಿ ಸುದ್ದಿ:ರೆಪೋ ದರ ಯಥಾಸ್ಥಿತಿ: RBI

J&K: 370ನೇ ವಿಧಿ ರದ್ದು ಬಳಿಕ ಕೈಗಾರಿಕಾ ಕ್ಷೇತ್ರದ ಬಂಡವಾಳ ಹೂಡಿಕೆ ಶೇ.86ರಷ್ಟು ಹೆಚ್ಚಳ!

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 88 ಅಂಕ ಇಳಿಕೆ; ಲಾಭಗಳಿಸಿದ ಷೇರು ಯಾವುದು?

Chennai: ಮಳೆ, ಜಲಾವೃತದಿಂದ ವಿಮಾನ ನಿಲ್ದಾಣ ಬಂದ್, 550 ಇಂಡಿಗೋ ವಿಮಾನ ರದ್ದು

Election result: ಷೇರು ಪೇಟೆಯಲ್ಲಿ ಕೇಸರಿ ಹಬ್ಬ
MUST WATCH
ಹೊಸ ಸೇರ್ಪಡೆ

Desi Swara: ಹುಲಿಕಲ್ಲಿನ ಸಾಲುಮರದ ತಿಮ್ಮಕ್ಕನಿಗೆ ಹ್ಯಾಲಿಫಾಕ್ಸ್‌ನಲ್ಲಿ ಗೌರವ!

Thirthahalli; ಡಿ.18ರಂದು ರಾಮನಸರ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ

Telangana ಹಂಗಾಮಿ ಸ್ಪೀಕರ್ ಆಗಿ ಅಕ್ಬರುದ್ದಿನ್ ಓವೈಸಿ ನೇಮಕ; ಬಿಜೆಪಿ ವಿರೋಧ

Desi Swara: ಮನದ ಬಾಗಿಲನು ತೆರೆದು ಅರಿಯುವ ಬನ್ನಿ

ಕ್ರಿಕೆಟ್ ಆಸ್ಟ್ರೇಲಿಯಕ್ಕಿಂತ 28 ಪಟ್ಟು ಶ್ರೀಮಂತವಾಗಿದೆ ಬಿಸಿಸಿಐ! ಆದಾಯ ಎಷ್ಟು ಗೊತ್ತಾ?