ಸೌದಿ ಕಂಪನಿ ಜತೆ ರಿಲಯನ್ಸ್ ಒಪ್ಪಂದ; ಅತೀ ದೊಡ್ಡ ವಿದೇಶಿ ಬಂಡವಾಳ ಹೂಡಿಕೆ
Team Udayavani, Aug 12, 2019, 6:27 PM IST
ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ತೈಲ, ರಾಸಾಯನಿಕ ಉದ್ದಿಮೆಯಲ್ಲಿ ಶೇ.20ರಷ್ಟು ಷೇರುಗಳನ್ನು ಸೌದಿಯ ಅರಾಮ್ಕೋಗೆ 1.06 ಲಕ್ಷ ಕೋಟಿಗೆ ಮಾರಾಟ ಮಾಡಿದ್ದು, ಇದು ರಿಲಯನ್ಸ್ ಇತಿಹಾಸದಲ್ಲಿಯೇ ಅತಿದೊಡ್ಡ ವಿದೇಶಿ ಬಂಡವಾಳ ಹೂಡಿಕೆಯಾಗಿದೆ ಎಂದು ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸೋಮವಾರ ತಿಳಿಸಿದ್ದಾರೆ.
ಇದು ರಿಲಯನ್ಸ್ ಕಂಪನಿ ಇತಿಹಾಸದಲ್ಲಿಯೇ ಅತೀ ದೊಡ್ಡ ವಿದೇಶಿ ಹೂಡಿಕೆಯಾಗಿದೆ ಎಂದು ಮುಂಬೈಯಲ್ಲಿ ನಡೆದ ಕಂಪನಿಯ ವಾರ್ಷಿಕ ಸಭೆಯಲ್ಲಿ ಅಂಬಾನಿ ಘೋಷಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ: ಬಂಪರ್ ಆಫರ್; HD/4K ಟೆಲಿವಿಷನ್ ಸೆಟ್, 4K ಸೆಟ್ ಟಾಪ್ ಬಾಕ್ಸ್ ಉಚಿತ
ವಿಶ್ವದ ಅತೀ ದೊಡ್ಡ ತೈಲ ಉತ್ಪಾದನಾ ಕಂಪನಿಯಾಗಿರುವ ಸೌದಿ ಅರಾಮ್ಕೋ ಜತೆ ರಿಲಯನ್ಸ್ ಇಂಡಸ್ಟ್ರೀಸ್ 75 ಬಿಲಿಯನ್ ಡಾಲರ್ (5.3 ಲಕ್ಷ ಕೋಟಿ) ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಜಾಮ್ ನಗರದಲ್ಲಿರುವ ರಿಲಯನ್ಸ್ ರಿಫೈನರಿಗೆ ಪ್ರತಿದಿನ 5 ಲಕ್ಷ ಬ್ಯಾರೆಲ್ ಗಳಷ್ಟು ಕಚ್ಛಾ ತೈಲವನ್ನು ಸೌದಿ ಅರಾಮ್ಕೋ ಸರಬರಾಜು ಮಾಡಲಿದೆ ಎಂದು ಅಂಬಾನಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್