ಬಿಜೆಪಿ ವಿಜಯ ವಿಕ್ರಮ: ಮುಂಬಯಿ ಶೇರು 2ನೇ ದಿನವೂ ತೇಜಿ
Team Udayavani, Dec 19, 2017, 10:44 AM IST
ಮುಂಬಯಿ : ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿರುವ ಸಂಭ್ರಮಾಚರಣೆಯಲ್ಲಿರುವಂತೆ ತೋರಿ ಬಂದಿರುವ ಮುಂಬಯಿ ಶೇರು ಪೇಟೆ ಇಂದು ಎರಡನೇ ದಿನ ಕೂಡ ಮುನ್ನಡೆ ಸಾಧಿಸಿ 143 ಅಂಕಗಳ ಏರಿಕೆಯನ್ನು ದಾಖಲಿಸಿದೆ.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿ ಬಂದಿರುವುದು, ಡಾಲರ್ ಎದುರು ರೂಪಾಯಿ ಸ್ವಲ್ಪ ಮಟ್ಟಿಗಿನ ಚೇತರಿಕೆಯನ್ನು ದಾಖಲಿಸಿರುವುದು ಮತ್ತು ಅಮೆರಿಕದ ತೆರಿಗೆ ಸುಧಾರಣಾ ಮಸೂದೆ ಸುಲಲಿತವಾಗಿ ಪಾಸಾಗುವುದೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಇಂದು ಮುಂಬಯಿ ಶೇರು ಪೇಟೆ ಉತ್ತಮ ಏರಿಕೆಯನ್ನು ದಾಖಲಿಸಿತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 85.55 ಅಂಕಗಳ ಏರಿಕೆಯೊಂದಿಗೆ 33,687.23 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 26.50 ಅಂಕಗಳ ಏರಿಕೆಯೊಂದಿಗೆ 10,415.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಮಾರುತಿ ಸುಜುಕಿ, ವೇದಾಂತ, ಮಹೀಂದ್ರ, ಎಸ್ ಬಿ ಐ ಮತ್ತು ಐಸಿಐಸಿಐ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್