1,111 ಅಂಕಗಳ ನಷ್ಟದೊಂದಿಗೆ ವಾರ ಮುಗಿಸಿದ ಮುಂಬಯಿ ಶೇರು
Team Udayavani, Aug 11, 2017, 4:35 PM IST
ಮುಂಬಯಿ : ಈ ವಾರವನ್ನು ಪೂರ್ತಿಯಾಗಿ ನಷ್ಟದ ಹಾದಿಯಲ್ಲೇ ಸವೆಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ವಾರಾಂತ್ಯದ ದಿನವಾದ ಶುಕ್ರವಾರದ ವಹಿವಾಟನ್ನು 318 ಅಂಕಗಳ ನಷ್ಟದೊಂದಿಗೆ ತಿಂಗಳ ಕನಿಷ್ಠ ಮಟ್ಟವಾದ 31,213.59 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 109.45 ಅಂಕಗಳ ನಷ್ಟವನ್ನು ಕಂಡು ದಿನದ ವಹಿವಾಟನ್ನು 9,685.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ನಿಫ್ಟಿ ಈ ಮಟ್ಟವನ್ನು ಕಳೆದ ಜುಲೈ 7ರಂದು ಕಂಡಿತ್ತು.
ಸೆನ್ಸೆಕ್ಸ್ ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ 794.05 ಅಂಕಗಳ ನಷ್ಟವನ್ನು ಅನುಭವಿಸಿದೆ. ಈ ವಾರದಲ್ಲಿ ಸೆನ್ಸೆಕ್ಸ್ ಅನಭವಿಸಿರುವ ನಷ್ಟ 1,111.82 ಅಂಕಗಳ (ಶೇ.3.43); ನಿಫ್ಟಿ ಅನುಭವಿಸಿರುವ ನಷ್ಟ 355.60 (ಶೇ.3.53) .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!