ಏಶ್ಯನ್ ಶೇರು ಪೇಟೆ ದುರ್ಬಲ : ಮುಂಬಯಿ ಶೇರು 333 ಅಂಕ ಕುಸಿತ
Team Udayavani, Dec 6, 2018, 10:39 AM IST
ಮುಂಬಯಿ : ಏಶ್ಯನ್ ಶೇರು ಪೇಟೆಯಲ್ಲಿನ ದೌರ್ಬಲ್ಯವನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 300ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಡಾಲರ್ ಎದುರು ರೂಪಾಯಿಯ ನಿರಂತರ ಕುಸಿತ, ತೈಲ ಬೆಲೆ ಮತ್ತೆ ಹೆಚ್ಚುವ ಭೀತಿಯೇ ಮೊದಲಾದ ಕಾರಣಗಳಿಗೆ ನಲುಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗ್ಗೆ 10.40ರ ಹೊತ್ತಿಗೆ 332.50 ಅಂಕಗಳ ನಷ್ಟದೊಂದಿಗೆ 35,551.91 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 112 ಅಂಕಗಳ ನಷ್ಟದೊಂದಿಗೆ 10,670.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ 54 ಪೈಸೆಗಳ ಕುಸಿತಕ್ಕೆ ಗುರಿಯಾಗಿ 71 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಟಾಪ್ ಲೂಸರ್ಗಳಲ್ಲಿ ವೇದಾಂತ, ಭಾರ್ತಿ ಏರ್ಟೆಲ್, ಟಾಟಾ ಸ್ಟೀಲ್, ಎಸ್ ಬ್ಯಾಂಕ್, ಮಾರುತಿ, ಇಂಡಸ್ಇಂಡ್ ಬ್ಯಾಂಕ್, ಒಎನ್ಜಿಸಿ, ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್ ಶೇರುಗಳು ಶೇ.3ರಷ್ಟು ಕುಸಿದವು.