ಜಾಗತಿಕ ಶೇರು ಹಿನ್ನಡೆ; ಮುಂಬಯಿ ಶೇರು ಪೇಟೆಗೆ 288 ಅಂಕ ನಷ್ಟ
Team Udayavani, Aug 13, 2018, 10:27 AM IST
ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಹಿನ್ನಡೆ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 288 ಅಂಕಗಳ ಕುಸಿತಕ್ಕೆ ಗುರಿಯಾಯಿತು. ಇದೇ ರೀತಿಯ ಕುಸಿತ ಕಂಡ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,400 ಅಂಕಕ್ಕಿಂತ ಕೆಳ ಮಟ್ಟಕ್ಕೆ ಜಾರಿತು.
ಕಳೆದ ಶುಕ್ರವಾರದ ವಹಿವಾಟನ್ನು 155.14 ಅಂಕಗಳ ನಷ್ಟದೊಂದಿಗೆ ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 10.20ರ ಹೊತ್ತಿಗೆ 259.24 ಅಂಕಗಳ ನಷ್ಟದೊಂದಿಗೆ 37,609.99 ಅಂಕಗಳ ಮಟ್ಟದಲ್ಲೂ, ನಿಫ್ಟಿ 72 ಅಂಕಗಳ ನಷ್ಟದೊಂದಿಗೆ 11,357.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಶೇರು ಮಾರುಕಟ್ಟೆ ಕುಸಿತ ಕಂಡ ಹೊರತಾಗಿಯೂ ಡಾಲರ್ ಎದುರು ರೂಪಾಯಿ ಇಂದು 41 ಪೈಸೆಯ ಏರಿಕೆಯನ್ನು ದಾಖಲಿಸಿ 68.42 ರೂ. ಮಟ್ಟದಲ್ಲಿ ವ್ಯವಹಾರ ನಿರತರಾಗಿದ್ದುದು ಸಮಾಧಾನದ ಬೆಳವಣಿಗೆ ಎನಿಸಿತು. ಕಳೆದ ಜೂನ್ನಲ್ಲಿ ಕೈಗಾರಿಕಾ ಉತ್ಪಾದನೆ ಶೇ. 7ರ ಪ್ರಗತಿಯನ್ನು ಕಂಡಿರುವುದೇ ಇದಕ್ಕೆ ಮುಖ್ಯ ಕಾರಣವಾಯಿತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಸ್ಬಿಐ, ಟಿಸಿಎಸ್, ಕೋಲ್ ಇಂಡಿಯಾ, ರಿಲಯನ್ಸ್, ಎಚ್ ಡಿ ಎಫ್ ಸಿ ಶೇರುಗಳು ಸಕ್ರಿಯವಾಗಿದ್ದವು. ಟಾಪ್ ಗೇನರ್ಗಳು : ಟೆಕ್ ಮಹೀಂದ್ರ, ಸನ್ ಫಾರ್ಮಾ, ಕೋಲ್ ಇಂಡಿಯಾ, ಸಿಪ್ಲಾ; ಟಾಪ್ ಲೂಸರ್ಗಳು : ವೇದಾಂತ, ಎಸ್ಬಿಐ, ಬಿಪಿಸಿಎಲ್, ಎಚ್ಪಿಸಿಎಲ್, ಎಸ್ ಬ್ಯಾಂಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್