ಮುಂದುವರಿದ ಮಾರಾಟ ಒತ್ತಡ : ಮುಂಬಯಿ ಶೇರು 106 ಅಂಕ ಕುಸಿತ
Team Udayavani, Aug 4, 2017, 11:12 AM IST
ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಶುಕ್ರವಾರವೂ ಕುಸಿತ ಮುಂದುವರಿದಿದೆ. ಬ್ಯಾಂಕಿಂಗ್, ಹೆಲ್ತ್ ಕೇರ್ ಮತ್ತು ಎಫ್ಎಂಸಿಜಿ ಶೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾಗಿವೆ. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ತಾನು ಈಚೆಗೆ ಸಾಧಿಸಿದ್ದ 10,000 ಅಂಕಗಳ ಮಟ್ಟದಿಂದ ಕೆಳಗಿಳಿದಿದೆ.
ಬೆಳಗ್ಗೆ 11.10ರ ಹೊತ್ತಿಗೆ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 106.90 ಅಂಕಗಳ ನಷ್ಟದೊದಿಗೆ 32,130.98 ಅಂಕಗಳಲ್ಲಿ ಮಟ್ಟದಲ್ಲಿ ವ್ಯವಹರಿಸುತ್ತಿತ್ತು. ನಿಫ್ಟಿ 20 ಅಂಕಗಳ ನಷ್ಟದೊಂದಿಗೆ 9,993.70 ಅಂಕಗಳ ಮಟ್ಟದಲ್ಲಿ ವ್ಯವಹರಿಸುತ್ತಿತ್ತು.
ರಿಲಯನ್ಸ್, ಎಚ್ ಡಿ ಎಫ್ ಸಿ, ಲೂಪಿನ್, ಸನ್ ಫಾರ್ಮಾ, ಎಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ವೇದಾಂತ, ಹೀರೋ ಮೋಟೋ ಕಾರ್ಪ್, ಎಚ್ ಯು ಎಲ್, ಟಾಟಾ ಸ್ಟೀಲ್, ಟಿಸಿಎಸ್ ಶೇರುಗಳು ಟಾಪ್ ಗೇನರ್ಗಳಾಗಿದ್ದರೆ ಸನ್ ಫಾರ್ಮಾ, ಟಾಟಾ ಪವರ್, ಡಾ.ರೆಡ್ಡಿ ಲ್ಯಾಬ್, ಅರಬಿಂದೋ ಫಾರ್ಮಾ, ಭಾರ್ತಿ ಏರ್ಟೆಲ್ ಶೇರುಗಳು ಟಾಪ್ ಲೂಸರ್ಗಳಾಗಿದ್ದವು.