ಏರಿಳಿತ ಕಂಡು ದಿನಾಂತ್ಯಕ್ಕೆ 19 ಅಂಕ ಕುಸಿದ ಮುಂಬಯಿ ಶೇರು
Team Udayavani, Jun 16, 2017, 4:48 PM IST
ಮುಂಬಯಿ : ದಿನದ ವಹಿವಾಟಿನ ಉದ್ದಕ್ಕೂ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಿನಾಂತ್ಯದ ವೇಳೆಗೆ 19.33 ಅಂಕಗಳ ನಷ್ಟವನ್ನು ದಾಖಲಿಸಿ 31,056.40 ಅಂಕಗಳ ಮಟ್ಟಕ್ಕೆ ಇಳಿಯಿತು.
ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,588.05 ಅಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್, ಕೋಟಕ್ ಮಹೀಂದ್ರ, ಅಲ್ಟ್ರಾ ಟೆಕ್ ಸಿನೆಂಟ, ಟಾಟಾ ಮೋಟರ್, ಎಸಿಸಿ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು.
ಲೂಪಿನ್, ಸನ್ ಫಾರ್ಮಾ, ಸಿಪ್ಲಾ, ವಿಪ್ರೋ, ಇನ್ಫೋಸಿಸ್ ಟಾಪ್ ಲೂಸರ್ ಎನಿಸಿಕೊಂಡವು. ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಸಂಖ್ಯೆ 2,840. ಇವುಗಳಲ್ಲಿ ಮುನ್ನಡೆ ಸಾಧಿಸಿದವುಗಳು 1,429. ಹಿನ್ನಡೆಗೆ ಗುರಿಯಾದವುಗಳು 1,244; ಯಾವುದೇ ಬದಲಾವಣೆ ಕಾಣದವುಗಳು 167 ಶೇರುಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್