ಸೆಪ್ಟಂಬರ್‌ ವಾಯಿದೆ ವಹಿವಾಟಿಗೆ ನಿರಾಶೆ ಆರಂಭ: Sensex 45 ಅಂಕ ನಷ್ಟ

Team Udayavani, Aug 31, 2018, 5:25 PM IST

ಮುಂಬಯಿ : ಸೆಪ್ಟಂಬರ್‌ ತಿಂಗಳ ವಾಯಿದೆ ವಹಿವಾಟಿನ ಇಂದಿನ ಮೊದಲ ದಿನ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 45.03 ಅಂಕಗಳ ನಷ್ಟದೊಂದಿಗೆ 38,645.07 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.70 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,680.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಟಾಪ್‌ ಗೇನರ್‌ಗಳು : ಡಾ. ರೆಡ್ಡಿ, ಟೆಕ್‌ ಮಹೀಂದ್ರ, ಲೂಪಿನ್‌, ಟಾಟಾ ಮೋಟರ್‌, ಎಚ್‌ ಸಿ ಎಲ್‌ ಟೆಕ್‌; ಟಾಪ್‌ ಲೂಸರ್‌ಗಳು : ಎಸ್‌ ಬ್ಯಾಂಕ್‌, ಬಜಾಜ್‌ ಫಿನ್‌ ಸರ್ವ್‌, ರಿಲಯನ್ಸ್‌, ಬಜಾಜ್‌ ಫಿನಾನ್ಸ್‌, ಮಹೀಂದ್ರ.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,860 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,440 ಶೇರುಗಳು ಮುನ್ನಡೆ ಸಾಧಿಸಿದವು; 1,236 ಶೇರುಗಳು ಹಿನ್ನಡೆಗೆ ಗುರಿಯಾದವು; 184 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ