ಮುಂಬಯಿ ಶೇರು ನಿರಂತರ 5ನೇ ದಿನ ಕುಸಿತ: 232 ಅಂಕ ನಷ್ಟ

Team Udayavani, May 21, 2018, 4:51 PM IST

ಮುಂಬಯಿ : ರಾಜಕೀಯ ಸ್ಥಿತಿಗತಿ ಮತ್ತು ಸ್ಥೂಲ ಆರ್ಥಿಕಾಭಿವೃದ್ಧಿ ಕುರಿತ ಕಳವಳದ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ನಿರಂತರ ಐದನೇ ದಿನದ ಕುಸಿತಕ್ಕೆ ಒಳಗಾಗಿ ಇಂದು ಸೋಮವಾರದ ವಹಿವಾಟಿನಲ್ಲಿ 232 ಅಂಕಗಳ ನಷ್ಟಕ್ಕೆ ಗುರಿಯಾಯಿತು.

ಕರ್ನಾಟಕದಲ್ಲಿ  ಅಧಿಕಾರಕ್ಕೆ ಬರುವಲ್ಲಿ ಬಿಜೆಪಿ ಕಂಡ ಸೋಲಿನ ಕರಾಳ ಛಾಯೆ ಮುಂದಿನ ವರ್ಷದ ಲೋಕಸಭಾ ಚುನಾವಣೆಗಳ ಮೇಲೆ ಆದೀತೆಂಬ ಕಳವಳ ಮುಂಬಯಿ ಶೇರು ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಈ ನಡುವೆ ಇಂದು ಪ್ರಖ್ಯಾತ ಮೂಡಿ ರೇಟಿಂಗ್‌ ಸಂಸ್ಥೆಯ ಇನ್‌ವೆಸ್ಟರ್‌ ಸರ್ವಿಸ್‌ ಪಿಎನ್‌ಬಿ ರೇಟಿಂಗ್‌ ಅನ್ನು ಕೆಳಮಟ್ಟಕ್ಕೆ ಇಳಿಸಿದುದು ಶೇರು ಮಾರುಕಟ್ಟೆಗೆ ಅಪಥ್ಯ ಎನಿಸಿತು.

ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 126 ಅಂಕಗಳ ಜಿಗಿತ ಕಂಡಿದ್ದ ಮುಂಬಯಿ ಶೇರು ಪೇಟೆ ದಿನಾಂತ್ಯಕ್ಕೆ 232.17 ಅಂಕಗಳ ನಷ್ಟಕ್ಕೆ ಗುರಿಯಾಗಿ 34,616.13 ಅಂಕಗಳ ಮಟ್ಟಕ್ಕೆ ಕುಸಿಯಿತು. ಕಳೆದ ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್‌ ಅನುಭವಿಸಿರುವ ನಷ್ಟ 708.41 ಅಂಕಗಳು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 79.70 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 10,516.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತ್ತು. 

ಡಾಲರ್‌ ಎದುರಿನ ರೂಪಾಯಿಯ ನಿರಂತರ ಕುಸಿತದಿಂದ ವಿದೇಶಿ ಬಂಡವಾಳದ ಹೊರ ಹರಿಯುವ ಹೆಚ್ಚಿರುವುದು ಕೂಡ ಶೇರು ಪೇಟೆಗೆ ಚಿಂತೆಯ ವಿಷಯವಾಯಿತು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ