ಸೆನ್ಸೆಕ್ಸ್ ಆರಂಭಿಕ ಕುಸಿತದ ಬಳಿಕ ಚೇತರಿಕೆ: 55 ಅಂಕ ಮುನ್ನಡೆ
Team Udayavani, Sep 7, 2018, 11:17 AM IST
ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ಕಂಡು ಬಂದ ದುರ್ಬಲ ಪ್ರವೃತ್ತಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 166 ಅಂಕಗಳ ಕುಸಿತವನ್ನು ಕಂಡಿತು.
ಬ್ಯಾಂಕಿಂಗ್, ಪವರ್ ಮತ್ತು ಹೆಲ್ತ್ ಕೇರ್ ಕ್ಷೇತ್ರಗಳ ಶೇರುಗಳ ಭರಾಟೆಯ ಮಾರಾಟವೇ ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾಯಿತು. ಸನ್ ಫಾರ್ಮಾ, ಎಸ್ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ONGC ಮತ್ತು ಮಾರುತಿ ಸುಜುಕಿ ಶೇರುಗಳ ಧಾರಣೆ ಕುಸಿದವು.
ನಿನ್ನೆ ವಹಿವಾಟಿನಲ್ಲಿ ಸೆನ್ಸೆಕ್ಸ್ 224.50 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು.
ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 55.51 ಅಂಕಗಳ ಚೇತರಿಕೆಯನ್ನು ಕಂಡು 38,298.32 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.40 ಅಂಕಗಳ ಚೇತರಿಕೆಯನ್ನು ಕಂಡು 11,558.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಆರಂಭಿಕ ವಹಿವಾಟಿನಲ್ಲಿ ನಾಲ್ಕು ಪೈಸೆಯ ಚೇತರಿಕೆಯನ್ನು ಕಂಡು 71.95 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೈದರಾಬಾದ್ ನಲ್ಲಿ 100 ಆಕ್ಟೇನ್ ಪ್ರೀಮಿಯಂ ಪೆಟ್ರೊಲ್ ಬಿಡುಗಡೆ ಮಾಡಿದ ಐಒಸಿ
ಚಿನ್ನದ ಮೇಲೆ ಸಾಲ ಪಡೆಯುವವರಿಗೆ ವಾರ್ಷಿಕ ಶೇ7.25 ಬಡ್ಡಿದರದಲ್ಲಿ ಸಾಲ ನೀಡಲಿದೆ ಎಸ್ ಬಿ ಐ
ಜಾಗತಿಕ ಮಟ್ಟದಲ್ಲಿ ತನ್ನ ವ್ಯಾವಹಾರಿಕ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ ಟಿಕ್ ಟಾಕ್.!
ಆರ್ಥಿಕ ಸುಧಾರಣೆ : ಭಾರತದ ಜಿಡಿಪಿ 0.4% ರಷ್ಟು ಹೆಚ್ಚಳ..!
ಆರ್ಥಿಕ ಕುಸಿತದಿಂದ ಪುಟಿದೆದ್ದ ಭಾರತ!