ಇಂದು ಹಣದುಬ್ಬರ, ಐಐಪಿ ಅಂಕಿ ಅಂಶ ಪ್ರಕಟ: ಸೆನ್ಸೆಕ್ಸ್ ಎಚ್ಚರಿಕೆ ನಡೆ
Team Udayavani, Feb 12, 2019, 5:48 AM IST
ಮುಂಬಯಿ : ದೇಶದ ಕೈಗಾರಿಕೋತ್ಪಾದನೆ, ಹಣದುಬ್ಬರ ಇವೇ ಮೊದಲಾದ ಪ್ರಮುಖ ಆರ್ಥಿಕ ಬೆಳವಣಿಗೆಯ ಅಂಕಿ ಅಂಶಗಳನ್ನು ಸರಕಾರ ಇಂದು ಪ್ರಕಟಿಸಲಿದ್ದು ಈ ಕಾರಣಕ್ಕೆ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಎಚ್ಚರಿಕೆಯ ನಡೆ ಇರಿಸಿತು.
ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್ 12.60 ಅಂಕಗಳ ನಷ್ಟದೊಂದಿಗೆ 36,382.43 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,884.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ರಿಲಯನ್ಸ, ಇನ್ಫೋಸಿಸ್, ಈಶರ್ ಮೋಟರ್ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 6 ಪೈಸೆ ನಷ್ಟಕ್ಕೆ ಗುರಿಯಾಗಿ 71.12 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.