ಮುಂಬಯಿ ಶೇರು 342 ಅಂಕ ಜಿಗಿತ; ನಿಫ್ಟಿ 10,800 ಅಂಕಗಳ ಮಟ್ಟಕ್ಕೆ

Team Udayavani, Feb 25, 2019, 10:59 AM IST

ಮುಂಬಯಿ : ಭಾರೀ ಪ್ರಮಾಣದಲ್ಲಿ ವಿದೇಶೀ ಮತ್ತು ದೇಶೀಯ ಹೂಡಿಕೆ ಸಂಸ್ಥೆಗಳ ಬಂಡವಾಳ ಹರಿದು ಬಂದಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಇಂದು ಉತ್ತಮ rally ಕಂಡು ಬಂದಿದೆ. ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 341.90 ಅಂಕಗಳ ಜಿಗಿತದೊಂದಿಗೆ 36,213.38 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 88.45 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 10,880.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಸೆನ್ಸೆಕ್ಸ್‌ ಕಳೆದ ಶುಕ್ರವಾರ 27 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. 

ಇಂದಿನ ವಹಿವಾಟಿನಲ್ಲಿ ಟಾಪ್‌ ಗೇನರ್‌ ಗಳಾಗಿ ಮೂಡಿ ಬಂದ ಎಸ್‌ ಬ್ಯಾಂಕ್‌, ಟಿಸಿಎಸ್‌, ಇನ್‌ಫೋಸಿಸ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌, ಭಾತಿರ ಏರ್‌ಟೆಲ್‌, ಎಚ್‌ ಡಿ ಎಫ್ ಸಿ, ಸನ್‌ ಫಾರ್ಮಾ, ಬಜಾಜ್‌ ಆಟೋ, ಟಾಟಾ ಸ್ಟೀಲ್‌ ಶೇರುಗಳ ಧಾರಣೆ ಶೇ.3.24ರಷ್ಟು ಏರಿತು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,767 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,523 ಶೇರುಗಳು ಮುನ್ನಡೆ ಸಾಧಿಸಿದವು; 1,066 ಶೇರುಗಳು ಹಿನ್ನಡೆಗೆ ಗುರಿಯಾದವು; 178 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ