ಜಿಎಸ್‌ಟಿ ತೆರಿಗೆ ದರ ಅಂತಿಮ: ಮುಂಬಯಿ ಶೇರು 209 ಅಂಕ ಜಿಗಿತ

Team Udayavani, May 19, 2017, 11:06 AM IST

ಮುಂಬಯಿ : ಆರು ವರ್ಗಗಳನ್ನು ಹೊರತು ಪಡಿಸಿ ಜಿಎಸ್‌ಟಿ ಕೌನ್ಸಿಲ್‌ ಬಹುತೇಕ ಎಲ್ಲ ಸರಕುಗಳ ತೆರಿಗೆ ದರಗಳನ್ನು ಅಂತಿಮಗೊಳಿಸಿರುವ ಹಿನ್ನೆಲೆಯಲ್ಲಿ ಈಗಿನ್ನು ಜಿಎಸ್‌ಟಿ ಜಾರಿಗೆ ಇರುವ ಎಲ್ಲ ತೊಡಕುಗಳು ನಿವಾರಣೆಯಾದವೆಂಬ ಉತ್ಸಾಹದಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 209 ಅಂಕಗಳ ಭರ್ಜರಿ ನೆಗೆತವನ್ನು ದಾಖಲಿಸಿ 30,643 ಅಂಕಗಳ ಮಟ್ಟವನ್ನು ತಲುಪಿತು. 

ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್‌ 182.87 ಅಂಕಗಳ ಮುನ್ನಡೆಯೊಂದಿಗೆ 30,617.66 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 51.25 ಅಂಕಗಳ ಜಿಗಿತದೊಂದಿಗೆ 9,480.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಮುಂಬಯಿ ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ಐಟಿಸಿ, ಎಸ್‌ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡ, ಎಸ್‌ಬಿಐ, ಟಾಟಾ ಸ್ಟೀಲ್‌ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದವು. 

ಏಶ್ಯನ್‌ ಶೇರು ಮಾರುಕಟ್ಟೆಗಳು ಇಂದು ಮತ್ತೆ ಏರು ಹಾದಿಯನ್ನು ಹಿಡಿದಿರುವುದು, ವಾಲ್‌ ಸ್ಟ್ರೀಟ್‌ ಕೂಡ ಧನಾತ್ಮಕ ಅಂಕಿ ಅಂಶಗಳ ಬಲದಲ್ಲಿ ಏರಿಕೆ ದಾಖಲಿಸಿರುವುದು, ಮುಂಬಯಿ ಶೇರು ಪೇಟೆಗೆ ಹೊಸ ಉತ್ತೇಜನ ನೀಡಿತು. 

ಇಂದು ಕೋಲ್‌ ಇಂಡಿಯಾ ಶೇ.2.62ರಷ್ಟು ಏರಿರುವುದನ್ನು ಅನುಸರಿಸಿ ಪವರ್‌ ಗ್ರಿಡ್‌ ಮತ್ತು ಎನ್‌ಟಿಪಿಸಿ ಕೂಡ ಏರಿಕೆಯನ್ನು ದಾಖಲಿಸಿರುವುದು ಗಮನಾರ್ಹವಾಗಿದೆ. ಎಸ್‌ಬಿಐ ಶೇ.1.98ರಷ್ಟು ಏರಿ 308.95 ರೂ.ಗಳ ಮಟ್ಟವನ್ನು ಕಂಡಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ