ಮುಂಬಯಿ ಶೇರು ನಿರಂತರ ಎಂಟನೇ ದಿನ ಕುಸಿತ: 311 ಅಂಕ ನಷ್ಟ
Team Udayavani, Feb 18, 2019, 10:55 AM IST
ಮುಂಬಯಿ : ನಿರಂತರ ಎಂಟನೇ ದಿನವಾಗಿ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ವಹಿವಾಟನ್ನು 310.51 ಅಂಕಗಳ ನಷ್ಟದೊಂದಿಗೆ 35,498.44 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 83.45 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,640.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಿದೇಶಿ ಬಂಡವಾಳ ಶೇರು ಮಾರುಕಟ್ಟೆಯಿಂದ ನಿರಂತರವಾಗಿ ಹೊರ ಹೋಗುತ್ತಿರುವ ಹಿನ್ನೆಲೆಯಲ್ಲಿ ಇಂದು ಬ್ಯಾಂಕಿಂಗ್, ಎಫ್ ಎಂ ಸಿ ಜಿ, ಐಟಿ, ಆಟೋ ಮತ್ತು ಫಾರ್ಮಾ ಶೇರುಗಳು ವ್ಯಾಪಕ ಹೊಡೆತಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,734 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 879 ಶೇರುಗಳು ಮುನ್ನಡೆ ಸಾಧಿಸಿದವು; 1,676 ಶೇರುಗಳು ಹಿನ್ನಡೆಗೆ ಗುರಿಯಾದವು; 179 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.