Udayavni Special

ಮುಂಬಯಿ ಶೇರು 150 ಅಂಕಗಳ ಏರಿಕೆ, ರೂಪಾಯಿ ಚೇತರಿಕೆ


Team Udayavani, Sep 6, 2018, 10:38 AM IST

sensex-mobile-700.jpg

ಮುಂಬಯಿ : ಡಾಲರ್‌ ಎದುರು ರೂಪಾಯಿ ಚೇತರಿಕೆ, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ, ಏಶ್ಯನ್‌  ಶೇರು ಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವುದನ್ನು ಅನುಸರಿಸಿ ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಪುನರಾಗಮನವನ್ನು ದಾಖಲಿಸಿತು.

ಕಳೆದ ಆರು ದಿನಗಳ ನಿರಂತರ ಸೋಲಿನ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಒಟ್ಟು 878.32 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. 

ಡಾಲರ್‌ ಎದುರು ರೂಪಾಯಿ ಇಂದು ಬೆಳಗ್ಗೆ 9 ಪೈಸೆಯಷ್ಟು ಚೇತರಿಸಿಕೊಂಡು 71.66 ರೂ. ಮಟ್ಟಕ್ಕೇರುವ ಮೂಲಕ ಶೇರು ಮಾರುಕಟ್ಟೆಯಲ್ಲಿ ಸಮಾಧಾನ ಮೂಡಿಸಿತು. 

ಇಂದು ಬೆಳಗ್ಗೆ  10.30ರ ಸುಮಾರಿಗೆ ಸೆನ್ಸೆಕ್ಸ್‌ 122.76 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 38,141.07 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 27.80 ಅಂಕಗಳ ಮುನ್ನಡೆಯೊಂದಿಗೆ 11,504.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಕೋಲ್‌ ಇಂಡಿಯಾ, ಪವರ್‌ ಗ್ರಿಡ್‌, ಎಚ್‌ ಯು ಎಲ್‌, ಟಾಟಾ ಮೋಟರ್‌, ಸನ್‌ ಫಾರ್ಮಾ, ಕೋಟಕ್‌ ಬ್ಯಾಂಕ್‌, ಎಸ್‌ ಬ್ಯಾಂಕ್‌, ಏಶ್ಯನ್‌ ಪೇಂಟ್‌, ಟಾಟಾ ಸ್ಟೀಲ್‌, ವಿಪ್ರೋ, ಎಸ್‌ಬಿಐ,ಆರ್‌ಐಎಲ್‌ ಶೇರುಗಳು ಶೇ.1.46ರ ಏರಿಕೆಯನ್ನು ದಾಖಲಿಸಿದವು. 

ಟಾಪ್ ನ್ಯೂಸ್

ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

ಪಂಜಾಬ್ ನಲ್ಲಿ ಕಾಂಗ್ರೆಸ್ ಬದಲಾಗಿ ಬಾದಲ್ ರಿಂದ ಆಡಳಿತ : ನವಜೋತ್‌ ಸಿಂಗ್‌ ಸಿಧು ಆರೋಪ

ಪಂಜಾಬ್ ನಲ್ಲಿ ಕಾಂಗ್ರೆಸ್ ಬದಲಾಗಿ ಬಾದಲ್ ರಿಂದ ಆಡಳಿತ : ನವಜೋತ್‌ ಸಿಂಗ್‌ ಸಿಧು ಆರೋಪ

chilly rate hike

ಗೋವಾ: ಗ್ರಾಹಕರಿಗೆ ಬೆಲೆಯಲ್ಲೂ ಖಾರವಾದ ಕೆಂಪು ಖಾರದ ಮೆಣಸು; ಕೆ.ಜಿ ಗೆ 1200 ರೂ.

ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ :ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಎಚ್ಚರಿಕೆ

ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ :ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಎಚ್ಚರಿಕೆ

ಅಗತ್ಯ ವಸ್ತು ಖರೀದಿಗೆ ಕಾಲ್ನಡಿಗೆಯಲ್ಲಿ ಬನ್ನಿ, ವಾಹನ ಬಳಕೆಗೆ ನಿರ್ಬಂಧ: ಕಾರವಾರ ಡಿಸಿ

ಅಗತ್ಯ ವಸ್ತು ಖರೀದಿಗೆ ವಾಹನ ಬಳಸದೆ ಕಾಲ್ನಡಿಗೆಯಲ್ಲಿ ಬನ್ನಿ: ಕಾರವಾರ ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆಯಲ್ಲಿ 393 ಸೋಂಕಿತರು ಗುಣಮುಖ, 453 ಹೊಸ ಪ್ರಕರಣ ಪತ್ತೆ

ದಾವಣಗೆರೆಯಲ್ಲಿ 393 ಸೋಂಕಿತರು ಗುಣಮುಖ, 453 ಹೊಸ ಪ್ರಕರಣ ಪತ್ತೆ

ಕೋವಿಡ್ ವಾರ್ ರೂಂಗೆ ಸಚಿವರಾದ ಎಸ್.ಟಿ. ಸೋಮಶೇಖರ್, ಅಶೋಕ್ ದಿಡೀರ್ ಭೇಟಿ

ಕೋವಿಡ್ ವಾರ್ ರೂಂಗೆ ಸಚಿವರಾದ ಎಸ್.ಟಿ. ಸೋಮಶೇಖರ್, ಅಶೋಕ್ ದಿಡೀರ್ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amazon has cancelled amazon prime day sale due to covid pandamic

ಈ ವರ್ಷದ “ಅಮೆಜಾನ್ ಪ್ರೈಮ್ ಡೇ ಸೇಲ್” ರದ್ದು : ಅಮೇಜಾನ್ ಇಂಡಿಯಾ

vehicle scrappage policy 2021, 25 percent tax rebate will be given on buying a new car know the special plan of the government

ವಾಹನ ಖರೀದಿಯ ಮೇಲೆ ಶೇ. 25 ರಷ್ಟು ತೆರಿಗೆ ವಿನಾಯಿತಿ.! ಏನಿದು ಕೇಂದ್ರದ ಹೊಸ ಯೋಜನೆ.?

Big discounts on maruti suzuki these Cars

ಮಾರುತಿ ಸುಜುಕಿಯ ‘ಈ’ ಕಾರುಗಳ ಮೇಲೆ ಸಿಗುತ್ತಿದೆ ಭರ್ಜರಿ ರಿಯಾಯಿತಿ

cognizant posts 38 percent jump in q1 net income

ಕಾಗ್ನಿಜೆಂಟ್ ನಿವ್ವಳ ಆದಾಯ ಶೇಕಡಾ 37.6 ರಷ್ಟು ಹೆಚ್ಚಳ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 257 ಅಂಕ ಏರಿಕೆ, 14,800ಕ್ಕೆ ಜಿಗಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 257 ಅಂಕ ಏರಿಕೆ, 14,800ಕ್ಕೆ ಜಿಗಿದ ನಿಫ್ಟಿ

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

9-26

ನಾಳೆಯಿಂದ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿ: ಈಶ್ವರಪ್ಪ

9-25

ಉಸಿರೇ ನಿಂತ ವಿಐಎಸ್‌ಎಲ್‌ನಿಂದ ಸೋಂಕಿತರಿಗೆ ಉಸಿರು!

ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

9-24

ಕಾಡಾನೆ ದಾಳಿಗೆ ಬಲಿಯಾದ ಅರಣ್ಯ ರಕ್ಷಕನ ಅಂತ್ಯಕ್ರಿಯೆ

9-23

ಸರ್ಕಾರ ಕಠಿಣ ಲಾಕ್‌ಡೌನ್‌ಗೆ ಮುಂದಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.