ಏರಿದ ಐಐಪಿ, ತಗ್ಗಿದ ಹಣದುಬ್ಬರ: ಸೆನ್ಸೆಕ್ಸ್ 318 ಅಂಕ ಭರ್ಜರಿ ಜಿಗಿತ
Team Udayavani, Sep 14, 2018, 11:00 AM IST
ಮುಂಬಯಿ : ಜುಲೈನಲ್ಲಿ ಕೈಗಾರಿಕಾ ಉತ್ಪಾದನೆ (ಐಐಪಿ) ಶೇ.6.6ರ ಮಟ್ಟಕ್ಕೆ ಏರಿರುವುದು ಮತ್ತು ಹಣದುಬ್ಬರ ಕಳೆದ ಹತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಕ್ಕೆ ದೊರಕಿದ ಉತ್ತೇಜನದಲ್ಲಿ ಮುಂಬಯಿ ಶೇರು ಪೇಟೆಯಲ್ಲಿ ಇಂದು ಶುಕ್ರವಾರ ಉತ್ತಮ ತೇಜಿ ಕಂಡು ಬಂದಿದ್ದು ಸೆನ್ಸೆಕ್ಸ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 318 ಅಂಕಗಳ ಭರ್ಜರಿ ಏರಿಕೆಯನ್ನು ಸಾಧಿಸಿತು. ತತ್ ಪರಿಣಾಮವಾಗಿ ಸೆನ್ಸೆಕ್ಸ್ 38,000 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು.
ಕಳೆದ ಬುಧವಾರ ಸೆನ್ಸೆಕ್ಸ್ 304.83 ಅಂಕಗಳನ್ನು ಸಂಪಾದಿಸಿತ್ತು. ಇಂದು ಶುಕ್ರವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 232.20 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 37,950.16 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 92.80 ಅಂಕಗಳ ಮುನ್ನಡೆಯೊಂದಿಗೆ 11,462.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್ ಬ್ಯಾಂಕ್, ರಿಲಯನ್ಸ್, ಮಾರುತಿ ಸುಜುಕಿ, ಎಕ್ಸಿಸ್ ಬ್ಯಾಂಕ್, ಟಿಸಿಎಸ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು. ಟಾಪ್ ಗೇನರ್ಗಳು : ಎಸ್ಬ್ಯಾಂಕ್, ಬಿಪಿಸಿಎಲ್, ಯುಪಿಎಲ್, ಪವರ್ ಗ್ರಿಡ್, ಎಚ್ಪಿಸಿಎಲ್. ಟಾಪ್ ಲೂಸರ್ಗಳು : ಭಾರ್ತಿ ಏರ್ ಟೆಲ್, ಇನ್ಫೋಸಿಸ್, ಎಚ್ಯುಎಲ್, ವಿಪ್ರೋ, ಎಚ್ಸಿಎಲ್ ಟೆಕ್.
ಡಾಲರ್ ಎದುರು ರೂಪಾಯಿ ಇಂದು ಶುಕ್ರವಾರ ಬೆಳಗ್ಗಿನ ವಹಿವಾಟಿನಲ್ಲಿ 50 ಪೈಸೆಯ ಚೇತರಿಕೆಯನ್ನು ಕಂಡು 71.68 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್