ಜಿಎಸ್ಟಿ ಆತಂಕ ಕೊಡವಿಕೊಂಡ ಮುಂಬಯಿ ಶೇರು 64 ಅಂಕ ಏರಿಕೆ
Team Udayavani, Jun 30, 2017, 3:59 PM IST
ಮುಂಬಯಿ : ಜಿಎಸ್ಟಿ ಬಗೆಗಿನ ಭಯ, ಆತಂಕ, ಗೊಂದಲಗಳನ್ನು ಕೊಡವಿಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಶುಕ್ರವಾರದ ವಹಿವಾಟನ್ನು 64.09 ಅಂಕಗಳ ಏರಿಕೆಯೊಂದಿಗೆ 30,921.61 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 16.80 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,520.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಐಟಿಸಿ, ಸನ್ ಫಾರ್ಮಾ, ಸಿಪ್ಲಾ ಟಾಪ್ ಗೇನರ್ ಸಾಲಿನಲ್ಲಿ ಕಾಣಿಸಿಕೊಂಡರೆ ಟಾಟಾ ಮೋಟರ್ ಡಿವಿಆರ್, ಐಸಿಐಸಿಐ ಬ್ಯಾ,ಕ್, ಎಚ್ ಡಿ ಎಫ್ ಸಿ ಟಾಪ್ ಲೂಸರ್ಗಳಾಗಿ ಕಾಣಿಸಿಕೊಂಡವು.
ಜಿಎಸ್ಟಿ ಅನುಷ್ಠಾನದಲ್ಲಿ ಹಲವಾರು ಗೊಂದಲಗಳು ಇರುವ ಹೊರತಾಗಿಯೂ ಅದರಿಂದ ದೇಶದ ಆರ್ಥಿಕ ಸುಧಾರಣಾ ಪ್ರಕ್ರಿಯೆಗೆ ಹೊಸ ಶಕ್ತಿ ದೊರಕಲಿದೆ ಎಂಬ ವಿಶ್ವಾಸ ಶೇರು ಮಾರುಕಟ್ಟೆಯಲ್ಲಿ ಕಂಡು ಬಂದಿರುವುದು ಧನಾತ್ಮಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!