ಆಕರ್ಷಕ ಆಫ‌ರ್‌ಗಳನ್ನ ಘೋಷಣೆ ಮಾಡಿದ BSNL

Team Udayavani, Nov 14, 2019, 8:50 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಟೆಲಿಕಾಂ ಕಂಪೆನಿಗಳ ನಡುವೆ ಹಲವು ದಿನಗಳಿಂದ ಪ್ರತಿಸ್ಪರ್ಧೆ ನಡೆಯುತ್ತಿದ್ದು, ದರ ಸಮರದ ಪೈಪೋಟಿ ಜೋರಾಗಿಯೇ ಮುನ್ನಡೆದಿದೆ. ಈ ಹಿನ್ನಲೆ ಕಂಪೆನಿಯ ಏರಿಳಿತದ ನಡುವೆಯೂ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳುತ್ತಿದ್ದು, ಇದೀಗ ಹೊಸದೊಂದು ಪ್ಲ್ಯಾನ್‌ ಅನ್ನುಬಿಡುಗಡೆ ಮಾಡಿದೆ.

ಮತ್ತೊಂದು ಆಫ‌ರ್‌ ಘೋಷಣೆ
ಕೆಳದಿನಗಳ ಹಿಂದೆ ಅಷ್ಟೇ ಹೊಸ ಪ್ರೀಪೇಡ್‌ ಪ್ಲ್ಯಾನ್‌ ಅನ್ನು ಪರಿಚಯಿಸಿಸ ಬಿಎಸ್‌ಎನ್‌ಎಲ್‌ ಅಧಿಕ ಡೇಟಾ ಮತ್ತು ವ್ಯಾಲಿಡಿಟಿ ನೀಡಿತ್ತು. ಆ ಪಟ್ಟಿಗೆ ನೂತನ ಪ್ಲ್ಯಾನ್‌ ಒಂದು ಸೇರ್ಪಡೆಯಾಗಿದ್ದು, 365ರೂ.ಗಳ ಹೊಸದೊಂದು ರಿಚಾರ್ಜ್‌ ಸೌಲಭ್ಯವನ್ನು ಪ್ರಾರಂಭಿಸಿದೆ.

2 ತಿಂಗಳ ವ್ಯಾಲಿಡಿಟಿ
ಈ ಯೋಜನೆ ಎರಡು ತಿಂಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಉಚಿತ ಡೇಟಾ ಹಾಗೂ ಕರೆಗಳ ಸೌಲಭ್ಯವನ್ನು ಒದಗಿಸಲಿದೆ.

2 ಜಿಬಿ ಡೇಟಾ
365 ರೂ. ಗೆ ಪ್ರತಿದಿನ 2ಜಿಬಿ ಡೇಟಾ ಪ್ರಯೋಜನ ದೊರೆಯಲಿದ್ದು, ಇದರೊಂದಿಗೆ ಪ್ರತಿದಿನ 250 ನಿಮಿಷ ಉಚಿತ ಕರೆಗಳ ಸೌಲಭ್ಯ ಇರಲಿದೆ. ತಮಿಳನಾಡು, ಕೇರಳ ಮತ್ತು ಚೆನ್ನೈ ಟೆಲಿಕಾಂ ಸರ್ಕಲ್‌ ಸೇರಿದಂತೆ ಇತರೆ ಟೆಲಿಕಾಂ ಸರ್ಕಲ್‌ ವ್ಯಾಪ್ತಿಯಲ್ಲಿಯೂ ಈ ಯೋಜನೆ ಲಭ್ಯವಾಗಲಿದೆ.

997ರೂ. ಪ್ರೀಪೇಡ್‌ ಪ್ಲ್ಯಾನ್‌
365 ಯೋಜನೆಯೊಂದಿಗೆ 997ರೂ. ಪ್ರೀಪೇಡ್‌ ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಒಟ್ಟು 180 ದಿನಗಳ ವ್ಯಾಲಿಡಿಟಿ ಇದ್ದು, ಉಚಿತವಾಗಿ ಅನಿಯಮಿತ ಲೋಕಲ್‌ ಮತ್ತು ನ್ಯಾಶನಲ್‌ ಕರೆಗಳು ಲಭ್ಯದೊಂದಿಗೆ ಪ್ರತಿದಿನ 3ಜಿಬಿ ಡೇಟಾ ಸೌಲಭ್ಯವು ದೊರೆಯಲಿದೆ.

97 ರೂ. ಗಳಿಗೆ ವಿಶೇಷ ಟಾರೀಫ್ ವೋಚರ್‌
97 ರೂ. ಈ ಯೋಜನೆಯಲ್ಲಿ ವಿಶೇಷ ಟಾರೀಫ್ ವೋಚರ್‌ ಇದ್ದು, 18 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2ಜಿಬಿ ಡೇಟಾ ಪ್ರಯೋಜನ ದೊರೆಯಲಿದ್ದು, ಪ್ರತಿದಿನ 250 ನಿಮಿಷ ಉಚಿತ ಕರೆಗಳ ಸೌಲಭ್ಯವು ಇರಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ