ಬಿಎಸ್ ಎನ್ ಎಲ್, ಎಂಟಿಎನ್ ಎಲ್ ನ 1.98 ಲಕ್ಷ ಉದ್ಯೋಗಿಗಳ ಸಂಬಳ ಬಾಕಿ!

Team Udayavani, Aug 2, 2019, 3:20 PM IST

ನವದೆಹಲಿ: ನಷ್ಟದಲ್ಲಿ ದಿನ ಕಳೆಯುತ್ತಿರುವ ಬಿಎಸ್ ಎನ್ ಎಲ್(ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಮತ್ತು ಎಂಟಿಎನ್ ಎಲ್(ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್) 1.98 ಲಕ್ಷ ಉದ್ಯೋಗಿಗಳಿಗೆ ಜುಲೈ ತಿಂಗಳ ಸಂಬಳವನ್ನು ಇನ್ನೂ ಪಾವತಿಸಿಲ್ಲ ಎಂದು ಯೂನಿಯನ್ ಮುಖಂಡರು ತಿಳಿಸಿದ್ದಾರೆ.

ಏತನ್ಮಧ್ಯೆ ಬಿಎಸ್ ಎನ್ ಎಲ್ ಮತ್ತು ಎಂಟಿಎನ್ ಎಲ್ ಉದ್ಯೋಗಿಗಳ ಜುಲೈ ತಿಂಗಳ ಸಂಬಳವನ್ನು ಆಗಸ್ಟ್ 5ಕ್ಕೆ ಪಾವತಿಸುವುದಾಗಿ ಬಿಎಸ್ ಎನ್ ಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಪಿಕೆ ಪುರ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಸಂಬಳ ಪಾವತಿಸಲು ವಿಳಂಬವಾದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಯೂನಿಯನ್ ಮುಖಂಡರು ದೂರಿದ್ದಾರೆ.

ನಮಗೆ ಜುಲೈ ತಿಂಗಳ ಸಂಬಳ ಇನ್ನೂ ಬಂದಿಲ್ಲ, ಅಲ್ಲದೇ ನಮ್ಮ ಸಂಬಳ ಯಾವಾಗ ಖಾತೆಗೆ ಜಮಾ ಮಾಡುತ್ತಾರೆ ಎಂಬ ಮಾಹಿತಿಯೂ ಇಲ್ಲ ಎಂದು ಆಲ್ ಇಂಡಿಯಾ ಯೂನಿಯನ್ಸ್ ಮತ್ತು ಅಸೋಸಿಯೇಶನ್ ಆಫ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ನ(ಎಯುಎಬಿ) ಸಂಚಾಲಕ ಪಿ.ಅಭಿಮನ್ಯು ಪಿಟಿಐಗೆ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ