ವ್ಯವಹಾರ ವಿಶ್ವಾಸಾರ್ಹ ಸೂಚ್ಯಂಕ: ಭಾರತದ ಸ್ಥಾನ ಕುಸಿತ

ಉದ್ದಿಮೆ ವಲಯದಲ್ಲಿ ಕುಂದಿದ ಆಸಕ್ತಿ ; ಸೂಚ್ಯಂಕ ಶೇ. 103.1ರಷ್ಟಕ್ಕೆ ಇಳಿಕೆ

Team Udayavani, Nov 13, 2019, 7:53 PM IST

Business-Confidence-Index-730

ಹೊಸ ಬಂಡವಾಳ ಹೂಡಿಕೆ, ಉದ್ದಿಮೆ ವಿಸ್ತರಣೆಗೆ ಅಗತ್ಯವಾಗಿರುವುದು ಒಂದು ದೇಶದಲ್ಲಿನ ವ್ಯವಹಾರ ವಿಶ್ವಾಸಾರ್ಹತೆ. ಇದನ್ನು ಸೂಚ್ಯಂಕದ ಮೂಲಕ ಅಳೆಯಲಾಗುತ್ತದೆ. ದಿಲ್ಲಿ ಮೂಲದ ಚಿಂತಕರ ಚಾವಡಿ ನ್ಯಾಷನಲ್‌ ಕೌನ್ಸಿಲ್‌ ಆಫ್ ಅಪ್ಲೈಡ್‌ ಎಕನಾಮಿಕ್‌ ರಿಸರ್ಚ್‌ (ಎನ್‌ಸಿಎಆರ್‌) ಸಂಸ್ಥೆ ಇಂತಹ ವ್ಯವಹಾರ ವಿಶ್ವಾಸ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು ಭಾರತ ಈ ಸ್ಥಾನದಲ್ಲಿ ಕೆಳಕ್ಕಿಳಿದಿದೆ ಎಂದು ಹೇಳಿದೆ. ಹೀಗಾಗಲು ಕಾರಣವೇನು? ಏನಿದು ಸೂಚ್ಯಂಕ ಎಂಬ ಕುರಿತ ಮಾಹಿತಿ ಇಲ್ಲಿದೆ.

ಏನಿದು ವಿಶ್ವಾಸ ಸೂಚ್ಯಂಕ
ಬಿಸಿನೆಸ್‌ ಕಾನ್ಫಿಡೆನ್ಸ್‌ ಇಂಡೆಕ್ಸ್‌ (ಬಿಸಿಐ) ಇದು ದೇಶದ ಉದ್ಯಮಗಳಲ್ಲಿ ನಡೆಯುವ ವ್ಯವಹಾರ ಚಟುವಟಿಕೆಗಳನ್ನು ಅಳೆಯುವ ಸೂಚಕವಾಗಿದ್ದು, ಉತ್ಪಾದನೆ, ದೇಶೀಯ ಮಾರಾಟ, ರಫ್ತು, ಕಚ್ಚಾ ವಸ್ತುಗಳ ಆಮದು ಮತ್ತು ತೆರಿಗೆ ಪೂರ್ವ ಲಾಭದ ಕುರಿತಾದ ವ್ಯವಹಾರ ಮಟ್ಟವನ್ನು ಒಳಗೊಂಡಿದೆ.

ಯಾವುದರ ಮೇಲೆ ನಿರ್ಧಾರ
ಎನ್‌ಸಿಎಆರ್‌ ಸಮೀಕ್ಷೆಗೆ ಕೆಲವೊಂದು ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಇದರನ್ವಯ ಉದ್ದಿಮೆ ಸ್ಥಾಪನೆ, ನಿರ್ವಹಣೆ ಕುರಿತ ವಿಶ್ವಾಸವನ್ನು ಪರಿಶೀಲಿಸಲಾಗುತ್ತದೆ. ಮುಂದಿನ ಆರು ತಿಂಗಳಲ್ಲಿ ಒಟ್ಟಾರೆ ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗುತ್ತವೆಯೇ ? ಮುಂದಿನ ಆರು ತಿಂಗಳಲ್ಲಿ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆಯೇ ಮತ್ತು ಪ್ರಸ್ತುತ ಹೂಡಿಕೆಯ ವಾತಾವರಣ ಸಕಾರಾತ್ಮಕವಾಗಿ ಮಾರ್ಪಡಾಗಲಿದೆಯೇ ಎಂದು ಪ್ರಶ್ನೆಗಳನ್ನು ಕೇಳಲಾಗಿದ್ದು, ಬಂದ ಫ‌ಲಿತಾಂಶದ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಲಾಗಿದೆ.

ಶೇ. 103.1ರಷ್ಟಕ್ಕೆ ಇಳಿಕೆ
ತ್ತೈಮಾಸಿಕ ಸಮೀಕ್ಷೆಯ ಪ್ರಕಾರ, ವ್ಯವಹಾರ ವಿಶ್ವಾಸರ್ಹ ಸೂಚ್ಯಂಕ (ಬಿಸಿಐ) 103.1 ಕ್ಕೆ ಇಳಿದಿದ್ದು, ಜುಲೈ ಅಂತ್ಯದ ತ್ತೈಮಾಸಿಕದಲ್ಲಿ ಶೇ.15.3 ರಷ್ಟು ಕುಸಿದಿತ್ತು ಎನ್ನಲಾಗಿದೆ.

ಶೇ.22.5ರಷ್ಟು ಕುಸಿತ
ವಿಶ್ವಾಸಾರ್ಹ ಸೂಚ್ಯಂಕವು ವರ್ಷದಿಂದ ವರ್ಷಕ್ಕೆ ಶೇ.22.5ರಷ್ಟು ಕುಸಿತ ಕಾಣುತ್ತಿದೆ ಎಂದು ಆಗಸ್ಟ್‌-ಅಕ್ಟೋಬರ್‌ ತ್ತೈಮಾಸಿಕ ವರದಿಯಿಂದ ತಿಳಿದು ಬಂದಿದೆ.

ಶೇ.46.3
ಸಮೀಕ್ಷೆಯ ಅಂಗವಾಗಿ ಮುಂದಿನ ಆರು ತಿಂಗಳಲ್ಲಿ ಒಟ್ಟಾರೆ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆಯೇ? ಎಂಬ ಪ್ರಶ್ನೆಯನ್ನು ಕೇಳಲಾಗಿದ್ದು, ಕೇವಲ ಶೇ.46.3 ರಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬಂದಿದ್ದು, ಜುಲೈ ಅಂತ್ಯದಲ್ಲಿ ಶೇ.58.9 ಸಕಾರಾತ್ಮಕ ಪ್ರತಿಕ್ರಿಯೆಗಳು ದಾಖಲಾಗಿತ್ತು ಎಂದು ಎನ್‌ಸಿಎಆರ್‌ ವರದಿಯಲ್ಲಿ ತಿಳಿಸಿದೆ.

ಆರ್ಥಿಕ ಬೆಳವಣಿಗೆ ಕುಸಿತವೇ ಕಾರಣ
ಆರ್ಥಿಕ ಕ್ಷೇತ್ರದಲ್ಲಿ ಹಿನ್ನಡೆಯಿಂದಾಗಿ ಉದ್ಯಮ ಮಂದಗತಿ ಮತ್ತು ಬಿಕ್ಕಟ್ಟಿನ ಮಧ್ಯೆ ಸಿಲುಕಿದೆ. ಪರಿಣಾಮ ಜೂನ್‌ ತ್ತೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯ ದರ ಶೇ.5 ರಷ್ಟು ಕುಸಿದಿದ್ದು, ಆರು ವರ್ಷಗಳ ಕನಿಷ್ಠ ಸೂಚ್ಯಂಕ ದರ ದಾಖಲಾಗಿದೆ.

ಬೆಳವಣಿಗೆ ಮುನ್ಸೂಚನೆಯಲ್ಲಿ ಕಡಿತ
ಅಂತಾರಾಷ್ಟ್ರೀಯ ಹಣಕಾಸು ನಿಧಿ ದೇಶಕ್ಕೆ ನೀಡುವ ಬೆಳವಣಿಗೆ ಮುನ್ಸೂಚನೆ ಸೂಚ್ಯಂಕ ದರವನ್ನು ಶೇ.7 ರಿಂದ ಶೇ.6.1 ಕ್ಕೆ ಕಡಿತಗೊಳಿಸಿದ್ದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಬೆಳವಣಿಗೆ ಕುರಿತು ಕಳವಳ ವ್ಯಕ್ತಪಡಿಸಿದೆ.

ನಿರೀಕ್ಷೆ ಇಲ್ಲ
ಮುಂದಿನ ಆರು ತಿಂಗಳಲ್ಲಿ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ನಿರೀಕ್ಷಿಸುವವರ ಪ್ರಮಾಣದಲ್ಲಿಯೂ ಕುಸಿತ ಕಂಡು ಬಂದಿದ್ದು, ಶೇ.48.8 ರಿಂದ 2019ರ ಅಕ್ಟೋಬರ್‌ಗೆ ಶೇ.39.3 ಕ್ಕೆ ಇಳಿದಿದೆ.

ಏಕೈಕ ವರದಿ
ವಿಶೇಷವೆಂದರೆ, ಏಪ್ರಿಲ್‌ ಮತ್ತು ಜುಲೈ ತಿಂಗಳ ಬಿಸಿಐ ಸೂಚ್ಯಂಕವನ್ನು ಸಿದ್ಧಪಡಿಸಿದ ಏಕೈಕ ವರದಿ ಇದಾಗಿದ್ದು, 10-100 ರೂ. ಕೋಟಿಗಳ ವಾರ್ಷಿಕ ವಹಿವಾಟು ಹೊಂದಿರುವ ಸಂಸ್ಥೆಗಳ ಬಿಸಿಐನಲ್ಲಿ ಗರಿಷ್ಠ ಶೇ.20.6 ರಷ್ಟು ಕುಸಿತ ದಾಖಲಾಗಿದೆ. ಹಾಗೇ 100-500 ರೂ. ಕೋಟಿ ಮತ್ತು 1-10 ರೂ. ಕೋಟಿ ಸಂಸ್ಥೆಗಳು ಕ್ರಮವಾಗಿ ಶೇ.17.6 ರಷ್ಟು ಮತ್ತು ಶೇ.14 ರಷ್ಟು ಕುಸಿತವನ್ನು ಕಂಡಿದೆ.

ಅತ್ಯಂತ ಕಡಿಮೆ ದಾಖಲೆ
ಕಳೆದ 6 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದ ಸೂಂಚ್ಯಕ ದಾಖಲಾಗಿದ್ದು, ಈ ದತ್ತಾಂಶ ವ್ಯವಹಾರದ ಚಟುವಟಿಕೆಗಳ ಮೇಲೆ ಆಳವಾದ ಮತ್ತು ವ್ಯಾಪಕವಾದ ಪರಿಣಾಮ ಬೀರಲಿದೆ ಎಂದು ಎನ್‌ಸಿಎಆರ್‌ ವರದಿಯಲ್ಲಿ ತಿಳಿಸಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.