ಇನ್ನು ಜಿಯೋ ಕರೆ ಉಚಿತವಲ್ಲ!

Team Udayavani, Oct 9, 2019, 10:00 PM IST

ನವದೆಹಲಿ: ಇಷ್ಟು ದಿನ ಉಚಿತವಾಗಿ ಕರೆ ಸೌಲಭ್ಯವನ್ನು ಒದಗಿಸಿದ ಟೆಲಿಕಾಂ ಸಂಸ್ಥೆ ರಿಲಯನ್ಸ್‌ ಜಿಯೋ ಈಗ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಇದು ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ ಮಾಡಿದ ಕರೆಗಳಿಗೆ ಮಾತ್ರ ಅನ್ವಯಿಸಲಿದೆ.

ಜಿಯೋದಿಂದ ಬಿಎಸ್‌ಎನ್‌ಎಲ್‌, ಏರ್‌ಟೆಲ್‌, ವೋಡಾಫೋನ್‌ಗೆ ಕರೆ ಮಾಡಿದರೆ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲಾಗುತ್ತಿದ್ದು, ಜಿಯೋದಿಂದ ಜಿಯೋ ಸಂಖ್ಯೆಗೇ ಕರೆ ಮಾಡಿದರೆ ಯಾವುದೇ ಶುಲ್ಕವಿಲ್ಲ. ಆದರೆ ಗ್ರಾಹಕರಿಗೆ ಹೊರೆ ತಪ್ಪಿಸಲು ಗ್ರಾಹಕರು ಪಾವತಿಸುವ ಮೊತ್ತಕ್ಕೆ ಸಮಾನವಾದ ಡೇಟಾವನ್ನು ರಿಲಾಯನ್ಸ್‌ ಜಿಯೋ ಒದಗಿಸಲಿದೆ.

124 ನಿಮಿಷದವರೆಗೆ ಇತರ ಟೆಲಿಕಾಂ ಕಂಪನಿಗಳ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಮಾತನಾಡಿದರೆ 1 ಜಿಬಿ ಡೇಟಾವನ್ನು ಜಿಯೋ ಒದಗಿಸಲಿದೆ. ಬೇರೆ ಟೆಲಿಕಾಂ ಕಂಪನಿಗಳ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ಆ ಕಂಪನಿಗೆ ಜಿಯೋ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕವನ್ನು ಪಾವತಿಸಬೇಕಿದ್ದು, ಈವರೆಗೆ ಜಿಯೋ ತಾನೇ ಈ ಮೊತ್ತವನ್ನು ಭರಿಸುತ್ತಿತ್ತು. ಈ ರೀತಿ 13500 ಕೋಟಿ ರೂ. ಅನ್ನು ಜಿಯೋ ಇತರ ನೆಟ್‌ವರ್ಕ್‌ಗಳಿಗೆ ಪಾವತಿ ಮಾಡಿದೆ. ಆದರೆ ಈಗ ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಜಿಯೋ ನಿರ್ಧರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ