200 ರೂ. ಹೊಸ ನೋಟು ಸದ್ಯಕ್ಕೆ ಎಲ್ಲ ಎಟಿಎಂಗಳಲ್ಲಿ ಸಿಗಲ್ಲ !


Team Udayavani, Aug 26, 2017, 4:10 PM IST

200 Rupee Notes-700.jpg

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಹತ್ತು ತಿಂಗಳ ಬಳಿಕ ಸರಕಾರ ಗಣೇಶ ಚತುರ್ಥಿಯ ದಿನದಂದು ಹೊಸ 200 ರೂ. ನೋಟುಗಳನ್ನು ಬಿಡುಗಡೆಗೊಳಿಸಿದೆ. ಆದರೆ ಈ ಹೊಸ ನೋಟುಗಳು ಸದ್ಯ ದೇಶದ ಎಲ್ಲ  ಎಟಿಎಂ ಗಳಲ್ಲಿ ಸಿಗುವುದಿಲ್ಲ ಎಂಬುದನ್ನು ಅರಿತು ಗ್ರಾಹಕರು ನಿರಾಶರಾಗಿದ್ದಾರೆ.

ಎಟಿಎಂಗಳಲ್ಲಿ 10, 20 ಮತ್ತು 50ರ ನೋಟುಗಳು ಸಿಗದಿರುವಂತೆಯೇ 200 ರೂ. ನೋಟುಗಳು ಸಿಗುವುದಿಲ್ಲ; ಕಾರಣ ಎಟಿಎಂ ಮಶೀನ್‌ಗಳಲ್ಲಿ ಈ ನೋಟುಗಳಿಗೆ ಕಾನ್‌ಫಿಗರೇಶನ್‌ ಮಾಡಿರುವುದಿಲ್ಲ ಎಂದು ಮೂಲಗಳು ಹೇಳಿವೆ. 

ಹಾಗಾಗಿ 200 ರೂ. ಹೊಸ ನೋಟುಗಳು ಸದ್ಯಕ್ಕೆ ಬ್ಯಾಂಕಿನ ಶಾಖೆಗಳಲ್ಲಿ ಮಾತ್ರವೇ ಸಿಗುತ್ತವೆ; ಕ್ರಮೇಣ ಅವುಗಳ ಚಲಾವಣೆ ಮಾರುಕಟ್ಟೆಗಳಲ್ಲಿ ಬಿರುಸು ಪಡೆದಂತೆಯೇ ಅವು ಜನರ ಕೈಗಳಲ್ಲಿ ಸರಾಗವಾಗಿ ಓಡಾಡಲು ತೊಡಗುತ್ತವೆ ಎಂದು ಮೂಲಗಳು ಹೇಳಿವೆ. 

500 ರೂ. ನೋಟುಗಳಿಗಿಂತ ಸ್ವಲ್ಪ ಮಟ್ಟಿನ ಸಣ್ಣ ಗಾತ್ರದಲ್ಲಿರುವ 200 ರೂ. ಹೊಸ ನೋಟುಗಳನ್ನು ಸದ್ಯ 2 ಲಕ್ಷ ಎಟಿಎಂ ಗಳಲ್ಲಿ ಮಾತ್ರವೇ ಕಾನ್‌ಫಿಗರ್‌ ಮಾಡಲಾಗಿದೆ. ಈ ಸಂಖ್ಯೆ ಬಹಳ ನಗಣ್ಯವಿದೆ. ಹಾಗಿದ್ದರೂ ಕಾಲಕ್ರಮದಲ್ಲಿ ದೇಶದ ಎಲ್ಲ ಎಟಿಎಂ ಗಳಲ್ಲಿ 200 ರೂ. ನೋಟು ಸಿಗುವುದಕ್ಕೆ ಕಾನ್‌ಫಿಗರೇಶನ್‌ ಮಾಡಲಾಗುವುದು ಎಂದು ಮೂಲಗಳು ಹೇಳಿವೆ. 

200 ರೂ. ಹೊಸ ನೋಟು ಕಡು ಹಳದಿ ಬಣ್ಣದಲ್ಲಿದ್ದು ಮಹಾತ್ಮಾ ಗಾಂಧಿ (ಹೊಸ) ಸರಣಿಗೆ ಆಗಿರುವ ಹೊಸ ಸೇರ್ಪಡೆಯಾಗಿದೆ; ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರ ಸಹಿ ಇದೆ. ಹಿಂಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರವಿದ್ದು ಇದು ದೇಶದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿದೆ. 

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆShare

ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆ

ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 260 ಅಂಕ ಜಿಗಿತ, ನಿಫ್ಟಿ ದಾಖಲೆ

ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 260 ಅಂಕ ಜಿಗಿತ, ನಿಫ್ಟಿ ದಾಖಲೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 456 ಅಂಕ ಕುಸಿತ, 18,266 ಗಡಿ ತಲುಪಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 456 ಅಂಕ ಕುಸಿತ, 18,266 ಗಡಿ ತಲುಪಿದ ನಿಫ್ಟಿ

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

ಮುಂದುವರಿದ ನಾಗಾಲೋಟ: 62,000 ಅಂಕಗಳ ಗಡಿ ದಾಟಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್

ಮುಂದುವರಿದ ನಾಗಾಲೋಟ: 62,000 ಅಂಕಗಳ ಗಡಿ ದಾಟಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.