ಏರ್‌ ಇಂಡಿಯಾ ಮಾರಾಟಕ್ಕೆ ಕೇಂದ್ರದ ಯತ್ನ : ಸರಕಾರದಿಂದಲೇ ಸಾಲ ಪಾವತಿ?

Team Udayavani, Nov 13, 2019, 1:11 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಏರ್‌ ಇಂಡಿಯಾದ 60 ಸಾವಿರ ಕೋಟಿ ರೂ. ಸಾಲದ ಪೈಕಿ 29,400 ಕೋಟಿ ರೂ.ಗಳನ್ನು ಸರಕಾರವೇ ಪಾವತಿ ಮಾಡಲಿದೆ. ಉಳಿದ 30,600 ಕೋಟಿ ರೂ.ಗಳನ್ನು ಬಾಕಿ ಇರಿಸಲು ಉದ್ದೇಶ ಹೊಂದಿದೆ. ಈ ಮೂಲಕ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡಲು ಮತ್ತೂಂದು ಪ್ರಯತ್ನ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ‘ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

29,400 ಕೋಟಿ ರೂ.ಗಳ ಪೈಕಿ ಏರ್‌ ಇಂಡಿಯಾ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ತೈಲ ಕಂಪೆನಿಗಳಿಗೆ, ವಿಮಾನ ನಿಲ್ದಾಣಗಳಿಗೆ ಪಾವತಿ ಮಾಡದೆ ಉಳಿಸಿಕೊಂಡಿರುವ ಮೊತ್ತವನ್ನು ಸರಕಾರವೇ ಭರಿಸಲಿದೆ.

ಇದಲ್ಲದೆ ವಿಮಾನ ಸಂಸ್ಥೆ ಹೊಂದಿರುವ ದುಡಿಯುವ ಬಂಡವಾಳ (ವರ್ಕಿಂಗ್‌ ಕ್ಯಾಪಿಟಲ್‌) 15,500 ಕೋಟಿ ರೂ. ಅನ್ನೂ ಮನ್ನಾ ಮಾಡಲಿದೆ ಎಂದು ವರದಿ ಹೇಳಿದೆ. ಈ ಮೂಲಕ ತಲೆ ನೋವಾಗಿರುವ ಸಂಸ್ಥೆಯ ಸಾಲ ಆದಷ್ಟು ಕಡಿಮೆಯಾಗಲಿದೆ ಎನ್ನುವುದು ಸರಕಾರದ ಪ್ರತಿಪಾದನೆ.

ಬಾಕಿ ಉಳಿದಿರುವ 30,600 ಕೋಟಿ ರೂ.ಗಳ ಪೈಕಿ 12,500 ಕೋಟಿ ರೂ.ಗಳನ್ನು ವಿಮಾನ ಖರೀದಿ ಮತ್ತು ಇತರ ವಿಚಾರಗಳಿಗಾಗಿ, ಏರ್‌ಬಸ್‌ ಸಂಸ್ಥೆಗೆ ಬಾಕಿ ಇರುವ 5,500 ಕೋಟಿ ರೂ., ಆರು 787 ಡ್ರೀಮ್‌ಲೈನರ್‌ ವಿಮಾನ ಖರೀದಿದಾಗಿ 7 ಸಾವಿರ ಕೋಟಿ ರೂ., ಪಾವತಿ ಮಾಡಬೇಕಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ