ಸರ್ಕಾರದ ವಿರುದ್ಧ ಸಂಘರ್ಷ: ಜಾಕ್‌ ಮಾ ಎಲ್ಲಿ? : 2 ತಿಂಗಳಿಂದ ಕಣ್ಮರೆ

ಜಾಕ್‌ ನಿಗೂಢವಾಗಿ ಕಣ್ಮರೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Team Udayavani, Jan 6, 2021, 11:07 AM IST

ಸರ್ಕಾರದ ವಿರುದ್ಧ ಸಂಘರ್ಷ: ಜಾಕ್‌ ಮಾ ಎಲ್ಲಿ? : 2 ತಿಂಗಳಿಂದ ಕಣ್ಮರೆ

ಬೀಜಿಂಗ್‌: ಅಲಿಬಾಬಾ ಗ್ರೂಪ್‌ನ ಸ್ಥಾಪಕ, ಚೀನಾದ ಕೋಟ್ಯಧಿಪತಿ ಉದ್ಯಮಿ ಜಾಕ್‌ ಮಾ ಎಲ್ಲಿದ್ದಾರೆ? ಇಂಥದ್ದೊಂದು ಪ್ರಶ್ನೆ ಈಗ ಎಲ್ಲರನ್ನೂ ಕಾಡತೊಡಗಿದೆ. ಚೀನಾ ಸರ್ಕಾರದ ಕಣ್ಗಾವಲಿನಲ್ಲಿದ್ದ ಜಾಕ್‌ ಮಾ ಅವರು ಅಚ್ಚರಿಯೆಂಬಂತೆ ಕಳೆದೆರಡು ತಿಂಗಳಿಂದ ನಾಪತ್ತೆಯಾಗಿದ್ದಾರೆ. ನವೆಂಬರ್‌ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಯಾವ ಸುಳಿವೂ ಸಿಗುತ್ತಿಲ್ಲ.

ಇತ್ತೀಚೆಗೆ ಆಫ್ರಿಕಾಸ್‌ ಬ್ಯುಸಿನೆಸ್‌ ಹೀರೋಸ್‌ ಟ್ಯಾಲೆಂಟ್‌ ಶೋನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳಬೇಕಿದ್ದ ಅವರು, ಅಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ವಿಶೇಷವೆಂದರೆ, ಈ ಕಾರ್ಯಕ್ರಮದ ವೆಬ್‌ಸೈಟ್‌ನಿಂದಲೂ ಅವರ ಫೋಟೋ ತೆಗೆದು ಹಾಕಲಾಗಿತ್ತು. ಒಟ್ಟಿನಲ್ಲಿ ಜಾಕ್‌ ನಿಗೂಢವಾಗಿ ಕಣ್ಮರೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಾಕ್‌ ವರ್ಸಸ್‌ ಚೀನಾ: ಜಾಕ್‌ ಮಾ ಮತ್ತು ಚೀನಾ ಆಡಳಿತದ ನಡುವೆ ಹಗ್ಗಜಗ್ಗಾಟ ಶುರುವಾಗಿದ್ದು 2020ರ ಅಕ್ಟೋಬರ್‌ನಲ್ಲಿ. ಶಾಂಘೈನ ಕಾರ್ಯಕ್ರಮದಲ್ಲಿ ಜಾಕ್‌ ಅವರು ಚೀನಾ ಸರ್ಕಾರ, ಅದರ ನಿಯಂತ್ರಣ ಸಂಸ್ಥೆಗಳು, ಬ್ಯಾಂಕುಗಳ ವಿರುದ್ಧ ಹರಿಹಾಯ್ದಿದ್ದರು. ಚೀನಾದ ಬ್ಯಾಂಕುಗಳನ್ನು ಗಿರವಿ ಅಂಗಡಿಗಳಿಗೆ ಹೋಲಿಸಿದ್ದರು. ಇದರ ಬೆನ್ನಲ್ಲೇ ಅವರ ಆ್ಯಂಟ್‌ ಗ್ರೂಪ್‌ನ 2.70 ಲಕ್ಷ ಕೋಟಿ ರೂ. ಮೌಲ್ಯದ ಸಾರ್ವಜನಿಕ ಷೇರು ಬಿಡುಗಡೆ(ಐಪಿಒ)ಯನ್ನೇ ಚೀನಾದ ಅಧಿಕಾರಿಗಳು ತಡೆಹಿಡಿದಿದ್ದರು. ಡಿಸೆಂಬರ್‌ನಲ್ಲಿ ಜಾಕ್‌ 80,300 ಕೋಟಿ ರೂ. ಕಳೆದುಕೊಂಡರು.

ಅಲಿಬಾಬಾ ಮಾರುಕಟ್ಟೆ ಮೌಲ್ಯ ಶೇ.17 ಪತನಗೊಂಡಿತು. ಅಲಿಬಾಬಾ “ಏಕಸ್ವಾಮ್ಯದ ಚಟುವಟಿಕೆ’ ನಡೆಸುತ್ತಿದೆ ಎಂಬ ಆರೋಪ ದಲ್ಲಿ ಜಾಕ್‌ ವಿರುದ್ಧ ತನಿಖೆಗೂ ಆದೇಶಿಸಲಾಯಿತು. ಒಂದಾದ ಮೇಲೆ ಒಂದರಂತೆ ಬಂದ ಸಂಕಷ್ಟಗಳು, ಚೀನಾ ಸರ್ಕಾರದ ದ್ವೇಷ ಸಾಧನೆಯ ನಡುವೆಯೇ ಜಾಕ್‌ ಮಾ ಕಣ್ಮರೆಯಾಗಿದ್ದಾರೆ ಎಂಬ ಅನುಮಾನಗಳು ಮೂಡಿವೆ.

ಕೊನೇ ಟ್ವೀಟ್
ಕಳೆದ ವರ್ಷದ ಅಕ್ಟೋಬರ್‌ 10ರಂದು ಜಾಕ್‌ ಮಾ, ಹವಾಮಾನ ವೈಪರೀತ್ಯದ ಸವಾಲು ಎದುರಿಸುವಂಥ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳಿ ಟ್ವೀಟ್‌ ಮಾಡಿದ್ದರು. ಇದು ಅವರ ಕೊನೇ ಟ್ವೀಟ್‌ ಆಗಿದ್ದು, ನಂತರ ಅವರ ಖಾತೆಯಿಂದ ಯಾವುದೇ ಟ್ವೀಟ್‌ ಅಪ್‌ ಲೋಡ್‌ ಆಗಿಲ್ಲ. ಜಾಕ್‌ ಮಾ ನಾಪತ್ತೆ ಸುದ್ದಿ ಈಗ ಹೆಚ್ಚು ಸದ್ದು ಮಾಡಿದ್ದು, ಟ್ವಿಟರ್‌ನಲ್ಲಿ ಜಾಕ್‌ ಮಾ ಮತ್ತು ಅಲಿಬಾಬಾ ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡಿಂಗ್‌ ಆಗಿವೆ.

ಟಾಪ್ ನ್ಯೂಸ್

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

astrology

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಪಿಜಿ ಪ್ರವೇಶಕ್ಕೂ ಸಿಯುಇಟಿ ಪರೀಕ್ಷೆ : ಈ ವರ್ಷದಿಂದಲೇ ಜಾರಿ

ಪಿಜಿ ಪ್ರವೇಶಕ್ಕೂ ಸಿಯುಇಟಿ ಪರೀಕ್ಷೆ : ಈ ವರ್ಷದಿಂದಲೇ ಜಾರಿ

ಅಮೆರಿಕಕ್ಕೆ ಈಗ ಮಂಕಿಪಾಕ್ಸ್‌ ಭೀತಿ: ಭಾರತದಲ್ಲಿ ಹೇಗಿದೆ ಪರಿಸ್ಥಿತಿ?

ಅಮೆರಿಕಕ್ಕೆ ಈಗ ಮಂಕಿಪಾಕ್ಸ್‌ ಭೀತಿ: ಭಾರತದಲ್ಲಿ ಹೇಗಿದೆ ಪರಿಸ್ಥಿತಿ?

ತಾಳೆ ಎಣ್ಣೆ ರಫ್ತು ನಿಷೇಧ ತೆರವಿಗೆ ಇಂಡೋನೇಷ್ಯಾ ನಿರ್ಧಾರ: ಬೆಲೆ ಇಳಿಕೆ ಸಾಧ್ಯತೆ

ತಾಳೆ ಎಣ್ಣೆ ರಫ್ತು ನಿಷೇಧ ತೆರವಿಗೆ ಇಂಡೋನೇಷ್ಯಾ ನಿರ್ಧಾರ: ಬೆಲೆ ಇಳಿಕೆ ಸಾಧ್ಯತೆ

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು

ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು

ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ

ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ

thumb 2

ಯು.ಕೆ. ಹಣದುಬ್ಬರ ಪ್ರಮಾಣ ಶೇ.9ಕ್ಕೇರಿಕೆ! 40 ವರ್ಷಗಳಲ್ಲಿ ಕಾಣದಂಥ ಏರಿಕೆ

musk

ವರದಿ ಕೊಡುವವರೆಗೆ ಟ್ವಿಟರ್‌ ಖರೀದಿಸಲ್ಲ ಎಂದ ಮಸ್ಕ್

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

astrology

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಪಿಜಿ ಪ್ರವೇಶಕ್ಕೂ ಸಿಯುಇಟಿ ಪರೀಕ್ಷೆ : ಈ ವರ್ಷದಿಂದಲೇ ಜಾರಿ

ಪಿಜಿ ಪ್ರವೇಶಕ್ಕೂ ಸಿಯುಇಟಿ ಪರೀಕ್ಷೆ : ಈ ವರ್ಷದಿಂದಲೇ ಜಾರಿ

ಅಪಘಾತಕ್ಕೀಡಾದರೂ ಪರೀಕ್ಷೆ ಬರೆದು ಗೆದ್ದಳು

ಅಪಘಾತಕ್ಕೀಡಾದರೂ ಪರೀಕ್ಷೆ ಬರೆದು ಗೆದ್ದಳು

ಅಮೆರಿಕಕ್ಕೆ ಈಗ ಮಂಕಿಪಾಕ್ಸ್‌ ಭೀತಿ: ಭಾರತದಲ್ಲಿ ಹೇಗಿದೆ ಪರಿಸ್ಥಿತಿ?

ಅಮೆರಿಕಕ್ಕೆ ಈಗ ಮಂಕಿಪಾಕ್ಸ್‌ ಭೀತಿ: ಭಾರತದಲ್ಲಿ ಹೇಗಿದೆ ಪರಿಸ್ಥಿತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.