ತೈಲ ಕಂಪೆನಿಗಳ ಷೇರು ಮಾರಾಟ ಹಿನ್ನೆಲೆ: ಕುಸಿತ ಕಂಡ ಷೇರು ಪೇಟೆ
Team Udayavani, Jan 25, 2023, 9:10 PM IST
ಮುಂಬಯಿ: ಮಾಹಿತಿ ತಂತ್ರಜ್ಞಾನ, ವಿತ್ತೀಯ ಮತ್ತು ತೈಲ ಕಂಪೆನಿಗಳ ಷೇರುಗಳ ತರಾತುರಿಯ ಮಾರಾಟದ ಹಿನ್ನೆಲೆಯಲ್ಲಿ ಬುಧವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಭಾರೀ ಕುಸಿತ ದಾಖಲಿಸಿದವು.
ಬಿಎಸ್‌ಇ ಬುಧವಾರ ದಿನಾಂತ್ಯಕ್ಕೆ 773.69 ಪಾಯಿಂಟ್‌ಗಳಷ್ಟು ಕುಸಿದು 60,205.06ರಲ್ಲಿ ನೆಲೆಗೊಂಡಿತು. ಇದು ಶೇ. 1.27 ಕುಸಿತವಾಗಿದೆ. ಇನ್ನೊಂದೆಡೆ ನಿಫ್ಟಿ 226.35 ಪಾಯಿಂಟ್‌ಗಳಷ್ಟು ಕೆಳಕ್ಕಿಳಿದು 17,891.95ರಲ್ಲಿ ನೆಲೆಯಾಯಿತು. ಇದು ಶೇ. 1.25 ಕುಸಿತವಾಗಿದೆ.
ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್ಸಿ, ಆ್ಯಕ್ಸಿಸ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರ, ಅಲ್ಟ್ರಾಟೆಕ್ ಸಿಮೆಂಟ್, ಎಲ್ ಆ್ಯಂಡ್ ಟಿ, ಬಜಾಜ್ ಫಿನ್‌ಸರ್ವ್, ರಿಲಯನ್ಸ್, ಏಶ್ಯನ್ ಪೈಂಟ್ಸ್, ವಿಪ್ರೊ ನಷ್ಟ ಅನುಭವಿಸಿದ ಪ್ರಮುಖ ಸಂಸ್ಥೆಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮೆರಿಕ ಬ್ಯಾಂಕ್ ಗಳ ಪತನದ ಎಫೆಕ್ಟ್: ಭಾರತೀಯ ಷೇರು ಮಾರುಕಟ್ಟೆ ಕುಸಿತ
ಅಮೆರಿಕ ಬ್ಯಾಂಕ್ ಗಳ ಪತನದ ಎಫೆಕ್ಟ್; ಭಾರತದಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ, ಬೆಲೆ ವಿವರ…
ಅಸಮಾನತೆಗೆ ಅವಕಾಶ ಕೊಡದಿರಿ: ಬ್ಯಾಂಕುಗಳಿಗೆ ಆರ್‌ಬಿಐ ಗವರ್ನರ್ ಎಚ್ಚರಿಕೆ
ಜಾಗತಿಕ ಬೇಡಿಕೆ ಕುಸಿತ: ರಫ್ತು, ವ್ಯಾಪಾರ ಕೊರತೆ ಇಳಿಕೆ
Global Trends: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 440 ಅಂಕ ಜಿಗಿತ, ನಿಫ್ಟಿ ಏರಿಕೆ