ಕೊರೊನಾಗೆ ಕುಸಿದ ಷೇರು, ತೈಲ
Team Udayavani, Mar 17, 2020, 2:12 AM IST
ಕೊರೊನಾ ವೈರಸ್ ಹೊಡೆತಕ್ಕೆ ಬಾಂಬೆ ಷೇರು ಪೇಟೆ ಸಹಿತ ಜಗತ್ತಿನ ಎಲ್ಲ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿ ವಹಿವಾಟು ಸೋಮವಾರ ಕುಸಿದು ಬಿದ್ದಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 29 ಡಾಲರ್‌ಗಳಿಗಿಂತ ಕಡಿಮೆಗೆ ಇಳಿದಿದೆ. ಅಮೆರಿಕದ ವಾಲ್‌ಸ್ಟ್ರೀಟ್‌ನಲ್ಲಿ ವಹಿವಾಟು ಶೇ.8.1ರಷ್ಟು ಕುಸಿದ ಹಿನ್ನೆಲೆಯಲ್ಲಿ ಕೊಂಚ ಕಾಲ ವಹಿವಾಟು ಸ್ಥಗಿತಗೊಳಿಸಿ ಮತ್ತೆ ಪುನರಾರಂಭ ಮಾಡಲಾಯಿತು.
ವಾಲ್‌ಸ್ಟ್ರೀಟ್‌ನಲ್ಲಿ ವಹಿವಾಟಿಗೆ ತಡೆ; ಪುನಾರಂಭ
ಅಮೆರಿಕದ ವಾಲ್‌ಸ್ಟ್ರೀಟ್ ಷೇರು ಮಾರುಕಟ್ಟೆಯಲ್ಲಿ ಸೋಮವಾರ ವಹಿವಾಟು ಶುರುವಾದರೂ ಎಸ್‌ಆ್ಯಂಡ್ ಪಿ ಸೂಚ್ಯಂಕ 2, 490.47ರಷ್ಟು ಕುಸಿಯಿತು. ಹೀಗಾಗಿ, 15 ನಿಮಿಷ ಗಳ ಕಾಲ ವಹಿವಾಟು ಸ್ಥಗಿತಗೊಳಿಸಿ ಮತ್ತೆ ಮುಂದುವರಿಸಲಾಯಿತು.
ಡೌ ಜಾನ್ಸ್ ಇಂಡಸ್ಟ್ರಿಯಲ್ ಇಂಡೆಕ್ಸ್ ಕೂಡ ಸರಾಸರಿ ಶೇ.9.7ರಷ್ಟು ಪತನಗೊಂಡಿದೆ. ಅಂದರೆ 2, 250 ಪಾಯಿಂಟ್‌ಗಳಷ್ಟು ಕುಸಿತಗೊಂಡು, 20, 935.16ಕ್ಕೆ ಕುಸಿದಿದೆ. ನಾಸ್ಡಾಕ್ ಕೂಡ ಶೇ.6.1ರಷ್ಟು ಅಂದರೆ 7,392.73ರಲ್ಲಿ ಸೂಚ್ಯಂಕ ಮುಕ್ತಾಯವಾಯಿತು.
ಹೂಡಿಕೆದಾರರಿಗೆ 7.62 ಕೋಟಿ ರೂ. ನಷ್ಟ
ಬಾಂಬೆ ಷೇರು ಪೇಟೆಯಲ್ಲಿ ಸಂವೇದಿ ಸೂಚ್ಯಂಕ 2,713 ಪಾಯಿಂಟ್‌ಗಳಷ್ಟು ಕುಸಿದಿದೆ. ನಿಫ್ಟಿ ಸೂಚ್ಯಂಕ 9,200 ಅಂಕ ಕುಸಿದಿದೆ. ಬಿಎಸ್‌ಇ ಸೂಚ್ಯಂಕ 2,713. 41ರಷ್ಟು ಕುಸಿದು ದಿನದ ಅಂತ್ಯಕ್ಕೆ 31,390.07ರಲ್ಲಿ ಮುಕ್ತಾಯವಾಗಿದೆ.
ನಿಫ್ಟಿ ಸೂಚ್ಯಂಕ 757.80 ಪಾಯಿಂಟ್‌ಗಳಷ್ಟು ಕುಸಿತ ಅನುಭವಿಸಿ 9, 200ರಲ್ಲಿ ಮುಕ್ತಾಯವಾಗಿದೆ. ಮಾ.12ರ ಬಳಿಕ ಇದು ಎರಡನೇ ಅತ್ಯಂತ ದೊಡ್ಡ ಕುಸಿತವಾಗಿದೆ. ಬಿಎಸ್‌ಇ ಸೂಚ್ಯಂಕ ಕುಸಿತಗೊಂಡ ಕಾರಣ ಹೂಡಿಕೆದಾರರಿಗೆ 7.62 ಲಕ್ಷ ಕೋಟಿ ರೂ. ನಷ್ಟವಾಗಿದೆ. ಎಲ್ಲ ಪ್ರಮುಖ ಕಂಪೆನಿಗಳ ಷೇರುಗಳಿಗೆ ಬೇಡಿಕೆ ವ್ಯಕ್ತವಾಗಲಿಲ್ಲ.
ಕಚ್ಚಾ ತೈಲ ಬೆಲೆ ಕುಸಿತ
ತೈಲ ವಹಿವಾಟು ಪ್ರಧಾನವಾಗಿರುವ ಕೊಲ್ಲಿ ರಾಷ್ಟ್ರಗಳಲ್ಲಿ ಕೂಡ ಷೇರು ಪೇಟೆ ಮತ್ತು ಕಚ್ಚಾ ತೈಲ ಬೆಲೆ ಮುಗ್ಗರಿಸಿದೆ. ಕೆಲವು ದಿನಗಳ ಹಿಂದಷ್ಟೇ ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಿನ ದರ ಸಮರದಿಂದ 29 ವರ್ಷಗಳಷ್ಟು ಹಿಂದಿನ ಪ್ರಮಾಣಕ್ಕೆ ಕುಸಿದು, ಚೇತರಿಕೆ ಕಂಡಿತ್ತು. ಅಬುದಾಭಿ ಮತ್ತು ದುಬಾೖ ಷೇರುಪೇಟೆಗಳು ಕ್ರಮವಾಗಿ ಶೇ.7.8 ಮತ್ತು ಶೇ.6.2ರಷ್ಟು ಇಳಿಕೆ ಕಂಡವು. ಕಚ್ಚಾ ತೈಲ ಬೆಲೆ ಕೂಡ ಕುಸಿದಿದೆ.
ವೆಸ್ಟ್ ಟೆಕ್ಸಸ್ ಇಂಟರ್ ಮೀಡಿಯೇಟ್ ಕಚ್ಚಾ ತೈಲ ಶೇ.10ರಷ್ಟು ಅಂದರೆ ಪ್ರತಿ ಬ್ಯಾರೆಲ್‌ಗೆ 28.57 ಡಾಲರ್‌ಗೆ ಕುಸಿದಿದೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಶೇ.12.1 ಅಂದರೆ 29. 74 ಡಾಲರ್‌ಗೆ ಇಳಿಕೆಯಾಗಿದೆ. ಕೊರೊನಾ ಹಾವಳಿ ಮತ್ತಷ್ಟು ಮುಂದುವರಿದರೆ ಕಚ್ಚಾ ತೈಲ ಬೇಡಿಕೆ ಮತ್ತು ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗ ಲಿದೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ಬ್ರಿಟಿಷ್ ಪೆಟ್ರೋಲಿಯಂ (ಬಿ.ಪಿ.)ಯ ಮುಖ್ಯ ಹಣಕಾಸು ಅಧಿಕಾರಿ ಬ್ರೈನ್ ಗಿಲ್ವರಿ 2020ರಲ್ಲಿ ತೈಲೋದ್ದಿಮೆಯ ಕ್ಷೇತ್ರಕ್ಕೆ ಭಾರಿ ಸವಾಲು ಎದುರಾಗಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani
ಹೊಸ ಸೇರ್ಪಡೆ
ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿಯಲ್ಲಿ ಅತೃಪ್ತಿಯ ಹೊಗೆ
ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ: ಮತ್ತೆ ಭಯದಲ್ಲಿ ಜನ
ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್ಟಿಒ ವ್ಯಥೆ
ಜನಪ್ರಿಯತೆಗೆ ಚಿತ್ತ, ಸಂಪನ್ಮೂಲ ಎತ್ತ
ಫೆ.11ರಂದು ಪುತ್ತೂರಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ, ಸಹಕಾರಿ ಸಮಾವೇಶ ಯಶಸ್ಸಿಗೆ ಸಂಸದ ನಳಿನ್ ಸೂಚನೆ