ಕೋವಿಡ್ ನೀಡಿದ ಹೊಡೆತ: ಮುಖೇಶ್ ಅಂಬಾನಿ ಸಂಪತ್ತು ಶೇ.28ರಷ್ಟು ಕುಸಿತ
Team Udayavani, Apr 7, 2020, 4:44 PM IST
ಮುಂಬಯಿ: ಭಾರತ ಸೇರಿದಂತೆ ವಿಶ್ವಾದ್ಯಂತ ಕೋವಿಡ್ 19 ವೈರಸ್ ನೀಡಿರುವ ಹೊಡೆತಕ್ಕೆ ಷೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಕುಸಿತದಿಂದಾಗಿ ಕಳೆದ 2 ತಿಂಗಳ ಅವಧಿಯಲ್ಲಿ ದೇಶದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿಯವರ ನಿವ್ವಳ ಆದಾಯದಲ್ಲಿ ಶೇ.28ರಷ್ಟು ಕುಸಿತವಾಗಿದ್ದು, 48 ಬಿಲಿಯನ್ ಡಾಲರ್ ನಷ್ಟು (3,65,316 ಕೋಟಿ ರೂ.) ಇಳಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಂಬಾನಿಯವರ ಸಂಪತ್ತು ಮಾ.31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಅಂತ್ಯಕ್ಕೆ 19 ಬಿಲಿಯನ್ ಅಮೆರಿಕನ್ ಡಾಲರ್ನಷ್ಟು (144613 ಕೋಟಿ ರೂ.) ಕಡಿಮೆಯಾಗಿದೆ. ಅಲ್ಲದೆ, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 8 ಸ್ಥಾನ ಇಳಿಕೆಯಾಗಿದ್ದು, 17ನೇ ಸ್ಥಾನಕ್ಕೆ ಅವರು ಕುಸಿದಿದ್ದಾರೆ ಎಂದು ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ವರದಿ ಮಾಡಿದೆ.
ಇದೇ ಅವಧಿಯಲ್ಲಿ, ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿಯವರ ಆದಾಯದಲ್ಲಿ ಶೇ.37ರಷ್ಟು (6 ಬಿಲಿಯನ್ ಡಾಲರ್), ಎಚ್ಸಿಎಲ್ ಟೆಕ್ನಾಲಜಿಸ್ ಮುಖ್ಯಸ್ಥ ಶಿವ ನಾದರ್ ಅವರ ಆದಾಯದಲ್ಲಿ ಶೇ.26 (5 ಬಿಲಿಯನ್ ಡಾಲರ್), ಕೋಟಕ್ ಮಹೇಂದ್ರ ಬ್ಯಾಂಕ್ನ ಮುಖ್ಯಸ್ಥ ಉದಯ್ ಕೋಟಕ್ ಅವರ ಆಸ್ತಿಯ ಮೌಲ್ಯದಲ್ಲಿ ಶೇ.28 (4 ಬಿಲಿಯನ್ ಡಾಲರ್) ಕುಸಿತ ಕಂಡು ಬಂದಿದೆ. ಜಾಗತಿಕ ಶ್ರೀಮಂತರ 100ರ ಅಗ್ರ ಪಟ್ಟಿಯಿಂದ ಇವರು ಮೂವರೂ ಹೊರಗುಳಿದಿದ್ದಾರೆ. 2 ತಿಂಗಳ ಅವಧಿಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಶೇ.25ರಷ್ಟು ಕುಸಿತ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ
Stock Exchange: ಬಾಂಬೆ ಷೇರುಪೇಟೆ ಸೂಚ್ಯಂಕ 1,000 ಅಂಕ ಕುಸಿತ: 12 ಲಕ್ಷ ಕೋಟಿ ರೂ. ನಷ್ಟ
YouTube ಠಕ್ಕರ್ನೀಡಲು ಮಸ್ಕ್ ಹೊಸ ಟಿವಿ ಆ್ಯಪ್
Facebook, Instagram ಸರ್ವರ್ ಡೌನ್, ಸೇವೆಯಲ್ಲಿ ವ್ಯತ್ಯಾಸ; 829 ಕೋಟಿ ರೂಪಾಯಿ ನಷ್ಟ
Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಪರವಾನಿಗೆ ರದ್ದು?