ಕ್ರಿಸ್‌ಮಸ್‌ ವೇಳೆಗೆ ಕಚ್ಚಾ ತೈಲ ಬೆಲೆ 80 ಡಾಲರ್‌?

Team Udayavani, Nov 13, 2017, 6:35 AM IST

ಹೊಸದಿಲ್ಲಿ: ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಕಚ್ಚಾ ತೈಲ ಬೆಲೆಯು ಈಗ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇದೀಗ ಕಳೆದ ಎರಡು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣಕ್ಕೆ ಏರಿದ್ದು, ಕ್ರಿಸ್‌ಮಸ್‌ ವೇಳೆಗೆ ಬ್ಯಾರೆಲ್‌ಗೆ 80 ಡಾಲರ್‌ವರೆಗೆ ಏರುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಪರಿಣಿತರು ಊಹಿಸಿದ್ದಾರೆ.

ಈಗಾಗಲೇ 2015ರ ನಂತರ ಇದೇ ಮೊದಲ ಬಾರಿಗೆ ತೈಲ ಬೆಲೆ  ಬ್ಯಾರೆಲ್‌ಗೆ 60 ಡಾಲರ್‌ಗಿಂತ ಹೆಚ್ಚಾಗಿದೆ.
ಒಪೆಕ್‌ ದೇಶಗಳು ತೈಲ ಪೂರೈಕೆಯನ್ನು ನಿಯಂತ್ರಿಸಿದ್ದು, ಬೆಲೆ ಏರಿಕೆ  ಕಂಡಿದೆ.ಇನ್ನೊಂದೆಡೆ ಸೌದಿ ಅರೇಬಿಯಾದಲ್ಲಿ ಉಂಟಾಗುತ್ತಿರುವ ರಾಜಕೀಯ ವೈಪರೀತ್ಯಗಳು ತೈಲ ಬೇಡಿಕೆಯ ಮೇಲೆ ಪ್ರಭಾವ ಬೀರಿದೆ. ಇದೇ ಆಧಾರದಲ್ಲಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಯುತ್ತಿದ್ದು, ಇಳಿಕೆ ಮುನ್ಸೂಚನೆ ಆಧಾರದಲ್ಲಿ ವಹಿವಾಟು ನಡೆಸುವ ಮೊತ್ತ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದೇ ಪ್ರಮಾಣದಲ್ಲಿ ತೈಲ ದರ ಏರಿಕೆಯಾದರೆ ದೇಶೀಯ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯೂ ಹೆಚ್ಚಳವಾಗಲಿದ್ದು, ಇದರಿಂದ ಕೇಂದ್ರ ಸರ ಕಾ ರದ ಮೇಲೆ ಒತ್ತಡ ಉಂಟಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ