
ವಾರಾಂತ್ಯಕ್ಕೆ 4.90 ಲಕ್ಷ ಕೋಟಿ ನಷ್ಟ
ಬಿಎಸ್‌ಇನಲ್ಲಿ ಒಂದೇ ದಿನ 1,020.80 ಪಾಯಿಂಟ್ಸ್ ಕುಸಿತ
Team Udayavani, Sep 24, 2022, 6:05 AM IST

ಹೊಸದಿಲ್ಲಿ/ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಹೂಡಿಕೆದಾರರಿಗೆ ವಾರಾಂತ್ಯದಲ್ಲಿ ಭಾರಿ ಆಘಾತ ಉಂಟಾಗಿದೆ. ಶುಕ್ರವಾರದ ದಿನಾಂತ್ಯಕ್ಕೆ ಬಿಎಸ್‌ಇನಲ್ಲಿ ಸೂಚ್ಯಂಕ 1,020.80 ಪಾಯಿಂಟ್ಸ್ ಪತನಗೊಂಡು, 58,098.92ರಲ್ಲಿ ಮುಕ್ತಾಯ ವಾಗಿದೆ. ಮಧ್ಯಾಂತರದಲ್ಲಿ ಸೂಚ್ಯಂಕ 1,137.77 ಪಾಯಿಂಟ್ಸ್ ವರೆಗೆ ಕುಸಿತ ಕಂಡಿತ್ತು. ಇದರಿಂದಾಗಿ ಬಿಎಸ್‌ಇ ಹೂಡಿಕೆದಾರರಿಗೆ ಬರೋಬ್ಬರಿ 4.90 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ಈ ವಾರದಲ್ಲಿ ಸತತ ಮೂರನೇ ದಿನವೂ ಹೂಡಿಕೆದಾರರಿಗೆ ನಷ್ಟ ಉಂಟಾ ಗಿದೆ. ಒಟ್ಟು ಮೂರು ದಿನಗಳಲ್ಲಿ ಹೂಡಿಕೆ ದಾರರಿಗೆ 6.77 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ.
ಇನ್ನು ನಿಫ್ಟಿ ಸೂಚ್ಯಂಕ 302.45 ಪಾಯಿಂಟ್ಸ್ ಕುಸಿತ ಅನುಭವಿಸಿದೆ. ಇದರಿಂದಾಗಿ ದಿನಾಂತ್ಯಕ್ಕೆ 17,327.45 ಪಾಯಿಂಟ್ಸ್‌ಗೆ ಸೂಚ್ಯಂಕ ಇಳಿಕೆ ಯಾಗಿದೆ. ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿ ದರದಲ್ಲಿ ಸತತವಾಗಿ ಏರಿಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ಷೇರುಪೇಟೆಯಲ್ಲಿ ಏರಿಳಿತ ಉಂಟಾಗುತ್ತಿದೆ.
ಮತ್ತೆ ರೂಪಾಯಿ ಕುಸಿತ
ಅಮೆರಿಕದ ಡಾಲರ್ ಎದುರು ರೂಪಾಯಿ 19 ಪೈಸೆ ಕುಸಿತ ಕಂಡಿದೆ. ಹೀಗಾಗಿ, ದಿನಾಂತ್ಯಕ್ಕೆ 80.98 ರೂ.ಗಳಿಗೆ ಮುಕ್ತಾಯವಾಗಿದೆ. ಸತತ ಮೂರನೇ ಬಾರಿಗೆ ಇಳಿಕೆಯ ಹಂತವನ್ನು ರೂಪಾಯಿ ಅನುಭವಿಸುತ್ತಿದೆ. ಒಟ್ಟಾರೆಯಾಗಿ ಮೂರು ದಿನಗಳ ಅವಧಿಯಲ್ಲಿ 124 ಪೈಸೆ ಇಳಿಕೆಯಾಗಿದೆ. ಗುರುವಾರ 90 ಪೈಸೆ ಕುಸಿತವನ್ನು ರೂಪಾಯಿ ಕಂಡಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
