ಡೆಬಿಟ್ ಕಾರ್ಡ್‌ಗಳನ್ನು ಇಲ್ಲವಾಗಿಸಲು ನಿರ್ಧಾರ
Team Udayavani, Aug 21, 2019, 5:25 AM IST
ಮುಂಬೈ: ಇನ್ನು ಕೆಲವು ವರ್ಷಗಳಲ್ಲಿ ಜನರಿಗೆ ಡೆಬಿಟ್ ಕಾರ್ಡ್‌ಗಳ ಅಗತ್ಯವೇ ಇರುವುದಿಲ್ಲ. ಎಟಿಎಂ ಮಶಿನ್‌ಗೆ ಹೋಗಿ ಕಾರ್ಡ್ ಬಳಸಿ ಹಣ ತೆಗೆಯುವ ಅಗತ್ಯವೂ ಇರುವುದಿಲ್ಲ. ಅಷ್ಟೇ ಅಲ್ಲ, ಜನರು ಹಲವು ಡೆಬಿಟ್ ಕಾರ್ಡ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಓಡಾಡುವ ಅಗತ್ಯವೂ ಇರುವುದಿಲ್ಲ! ಹೀಗೆಂದು ಎಸ್‌ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ಹೇಳಿದ್ದಾರೆ.
ಅಷ್ಟೇ ಅಲ್ಲ, ಎಸ್‌ಬಿಐ ಈಗಾಗಲೇ ಡೆಬಿಟ್ ಕಾರ್ಡ್ ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹೊರಟಿದ್ದು, ಇದರ ಬದಲಿಗೆ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುತ್ತಿದೆ. ಎಸ್‌ಬಿಐ ಈಗಾಗಲೇ ಹಲವು ಯೋನೋ ಕ್ಯಾಶ್ ಪಾಯಿಂಟ್‌ಗಳನ್ನು ಸ್ಥಾಪಿಸಿದ್ದು, ಇದರಲ್ಲಿ ಕಾರ್ಡ್ ಇಲ್ಲದೇ ನಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಬಹುದಾಗಿದೆ. ಮುಂದಿನ 18 ತಿಂಗಳಲ್ಲಿ 1 ಲಕ್ಷ ಯೋನೋ ಕ್ಯಾಶ್‌ಪಾಯಿಂಟ್‌ಗಳನ್ನು ಸ್ಥಾಪಿಸುವ ಗುರಿಯನ್ನು ಎಸ್‌ಬಿಐ ಹೊಂದಿದೆ. ಸದ್ಯ, ದೇಶದಲ್ಲಿ ಒಟ್ಟು 3 ಕೋಟಿ ಕ್ರೆಡಿಟ್ ಕಾರ್ಡ್‌ಗಳಿದ್ದರೆ, 90 ಕೋಟಿ ಡೆಬಿಟ್ ಕಾರ್ಡ್‌ಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್